ಇಂದಿನಿಂದ ಧರ್ಮಸ್ಥಳ ಲಕ್ಷದೀಪೋತ್ಸವ | ಹತ್ತು ಸಾವಿರಕ್ಕೂ ಅಧಿಕ ಭಕ್ತರಿಂದ ಪಾದಾಯತ್ರೆ
ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು ನ. 13ರಿಂದ 18ರ ವರೆಗೆ ನಡೆಯಲಿವೆ. ರಾಜ್ಯಮಟ್ಟದ 40ನೇ ವರ್ಷದ ವಸ್ತು ಪ್ರದರ್ಶನ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢ ಶಾಲೆಯ ಆವರಣದಲ್ಲಿ ಇಂದಿ ನಿಂದ ಆರಂಭವಾಗಲಿದೆ. ಅಲ್ಲಿ ಪ್ರತಿದಿನ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯ ಲಿವೆ. ಈಗಾಗಲೇ ಕ್ಷೇತ್ರ ವನ್ನು ವಿದ್ಯುತ್ ದೀಪಗಳಿಂದ ಅಲಂಕರಿಸ ಲಾಗಿದೆ. ಕ್ಷೇತ್ರದಲ್ಲಿ ಕಾರ್ತಿಕ ಮಾಸದ ಸೋಮವಾರವಾದ ಕಾರಣ ಅಪಾರ ಜನಸಂದಣಿಯಿದೆ. ಪಾದಯಾತ್ರೆ ಕಳೆದ 4 ವರ್ಷಗಳಿಂದ ಉಜಿರೆ ಯಿಂದ...







