ಹಿಂದೂ ಸಮಾಜೋತ್ಸವ ಶೋಭಾಯಾತ್ರೆ | ಮುಸ್ಲಿಮರಿಂದ ತಂಪು ಪಾನೀಯ ವಿತರಣೆ
ಉಡುಪಿ : ಹಿಂದೂ ಸಮಾಜೋತ್ಸವ ಶೋಭಾಯಾತ್ರೆ ಸಂದರ್ಭ ಜಿಲ್ಲೆಯ ಮುಸ್ಲಿಂ ಸಮುದಾಯದ ವತಿಯಿಂದ ತಂಪುಪಾನೀಯ ವಿತರಿಸಲು ಸಿದ್ಧತೆ ನಡೆದಿದೆ. ಜೋಡುಕಟ್ಟೆಯಿಂದ ಮೆರವಣಿಗೆ ಹೊರಡಲಿದ್ದು ಅಲ್ಲಿಂದ ಸ್ವಲ್ಪ ಮುಂದಕ್ಕೆ ಕೋರ್ಟ್ ಸಂಕೀರ್ಣದ ಎದುರು ತಂಪು ಪಾನೀಯ ವಿತರಿಸಲಾಗುವುದು. ಈ ಹಿಂದೆ ಪೇಜಾವರ ಶ್ರೀಗಳ ಪರ್ಯಾಯ, ಪರ್ಕಳ ಮತ್ತು ಕಡಿಯಾಳಿಯ 50ನೇ ವರ್ಷದ ಶ್ರೀ ಗಣೇಶೋತ್ಸವ ಸಂದರ್ಭದಲ್ಲಿಯೂ ಇದೇ ರೀತಿ ತಂಪುಪಾನೀಯ ವಿತರಿಸಿದ್ದೇವೆ. ಇದು ನಮ್ಮ ಸ್ನೇಹ, ಸೌಹಾರ್ದದ ಸಂಕೇತ ಎಂದು...







