ಕಣ್ಣು ಮುಚ್ಚಿ ಕುಳಿತ ಪುತ್ತೂರಿನ ಸಹಾಯಕ ಕಮೀಷನರ್, ತಾಶೀಲ್ದಾರ್ | ಬಿಯರ್ ಬಾಟಲ್, ಗಬ್ಬು ವಾಸನೆಯದ್ದೇ ದರ್ಬಾರ್!
ಪುತ್ತೂರು : ಹತ್ತಾರು ಕೋಟಿ ರೂಪಾಯಿ ವ್ಯಯ ಮಾಡಿ ವರ್ಷಗಳ ಹಿಂದೆ ನಿರ್ಮಾಣ ಮಾಡಿದ ಪುತ್ತೂರಿನ ನೂತನ ಮಿನಿ ವಿಧಾನಸೌದ ಸುತ್ತ ಮುತ್ತಲಿನ ಪರಿಸ್ಥಿತಿ ಹೇಳತೀರದು. ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ ಎರಡನೇ ಹಂತದ ಸ್ವಚ್ಛ ಪುತ್ತೂರು ಅಭಿಯಾನಕ್ಕೆ ಚಾಲನೆ ದೊರೆತ ನಂತರ ಪುತ್ತೂರು ಮಿನಿ ವಿಧಾನಸೌಧದ ಸುತ್ತಲಿನ ಪ್ರದೇಶವನ್ನು ಸ್ವಚ್ಛ ಗೊಳಿಸಲಾಯಿತು. ಈ ಸಂದರ್ಭದಲ್ಲಿ ಬೆಳಕಿಗೆ ಬಂದು ಪುತ್ತೂರಿನ ಸಹಾಯಕ ಕಮೀಷನರ್ ಮತ್ತು ತಾಶೀಲ್ದಾರ್ ಕಛೇರಿಯ ಸುತ್ತಮುತ್ತಲಿನ ಪ್ರದೇಶದ...







