ನಾಳೆಯಿಂದ KSRTC ಬಸ್ಗಳಲ್ಲಿ ಸಾಗಿಸುವ ಲಗೇಜ್ ದರ ಹೆಚ್ಚಳ- ಕಹಳೆ ನ್ಯೂಸ್
ಬೆಂಗಳೂರು: ನಾಳೆಯಿಂದ ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ ದರ ಹೆಚ್ಚಳವಾಗಲಿದ್ದು, ನೂತನ ಪರಿಷ್ಕ್ರತ ದರ ಜಾರಿಯಾಗಲಿದೆ. ಈ ಬಗ್ಗೆ ಕೆಎಸ್ಆರ್ಟಿಸಿ ಎಂಡಿ ಅಕ್ರಂ ಪಾಷಾರಿಂದ ಮಾಹಿತಿ ನೀಡಿದ್ದು, ನಾಳೆಯಿಂದ (ಫೆ.16) ಕೆಎಸ್ಆರ್ಟಿಸಿ ಬಸ್ಗಳಲ್ಲಿ ಪ್ರಯಾಣಿಕ ರಹಿತವಾಗಿ ಸಾಗಿಸುವ ಲಗೇಜ್ಗೆ ನೂತನ ಪರಿಷ್ಕ್ರತ ದರ ಜಾರಿಗೆಯಾಗಲಿದೆ ಎಂದು ಆದೇಶ ಹೊರಡಿಸಿದ್ದಾರೆ. ಡಿಸೇಲ್, ಸಿಬ್ಬಂದಿ ಹಾಗೂ ಇತರೆ ಖರ್ಚುಗಳ ಹಿನ್ನೆಲೆ ಲಗೇಜ್ ದರ ಏರಿಕೆ ಮಾಡಲಾಗಿದೆ. ಈ ಮೊದಲು 2021ರಲ್ಲಿ...







