Thursday, March 12, 2026

ಸಿನಿಮಾ

ಸಿನಿಮಾ

‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಕುರಿತು ಅಭಿಮಾನಿಗಳು ಆಕ್ರೋಶ

ಬೆಂಗಳೂರು: ನಿನ್ನೆ(ಭಾನುವಾರ) ರಾತ್ರಿಯಷ್ಟೇ ಬಿಡುಗಡೆಯಾದ ಸ್ಯಾಂಡಲ್​​ವುಡ್​ನ ಬಹುತಾರಾಗಣದ ಹಾಗೂ  ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್​ ಮೂಲಕ ಅಸಮಾಧಾನ ಹೊರಹಾಕಿರುವ ಅಭಿಮಾನಿಗಳು, ಈ ಹಿಂದಿನ ಟೀಸರ್​ಗಳನ್ನೇ ಜೋಡಿಸಿ ನಿರ್ಮಾಪಕ ಮುನಿರತ್ನ ಅವರು ಟ್ರೈಲರ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ದುರ್ಯೋಧನ ಪಾತ್ರದಲ್ಲಿ ನಟಿಸಿರುವ ದರ್ಶನ್​ ಹಾಗೂ ಅಭಿಮನ್ಯು ಪಾತ್ರದಲ್ಲಿ ಮಿಂಚಿರುವ ನಿಖಿಲ್​ ಕುಮಾರಸ್ವಾಮಿಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಟೀಸರ್​ಗಳನ್ನು ಈ ಹಿಂದೆ ಬಿಡುಗಡೆ ಮಾಡಲಾಗಿತ್ತು. ಅದರಲ್ಲಿದ್ದ...
ಸಿನಿಮಾ

ಜಯಣ್ಣನೊಂದಿಗೆ ರುದ್ರ ಯಾಗಕ್ಕಿಳಿದ ರಿಷಭ್ ಶೆಟ್ಟಿ – ಕಹಳೆ ನ್ಯೂಸ್

ಕನ್ನಡ ಚಿತ್ರರಂಗ ಈಗ ಮೊದಲಿನಂತಿಲ್ಲ, ಹೊಸ ಹೊಸ ಕಲಾವಿದರು, ತಂತ್ರಜ್ಞರು, ನಿರ್ದೇಶಕರು ಕನ್ನಡ ಚಿತ್ರರಂಗವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದಾರೆ. ಅಂತಹ ನಿರ್ದೇಶಕರಲ್ಲಿ ರಿಷಭ್ ಶೆಟ್ಟಿ ಕೂಡಾ ಒಬ್ಬರು. ಇಂದು ರಿಷಭ್ ಶೆಟ್ಟಿಗೆ ಹುಟ್ಟುಹಬ್ಬದ ಸಂಭ್ರಮ. ಈ ಸಂಭ್ರಮದ ಜೊತೆಗೆ ತಮ್ಮ ಮುಂದಿನ ಚಿತ್ರ ‘ರುದ್ರ ಪ್ರಯಾಗ’ದ ಟೈಟಲ್ ಪೋಸ್ಟರನ್ನು ಕೂಡ ರಿಷಭ್ ರಿಲೀಸ್ ಮಾಡಿದ್ದಾರೆ. ಪೋಸ್ಟರ್ ಗಮನಿಸುತ್ತಿದ್ದಂತೆ ಇದೊಂದು ವಿಭಿನ್ನ ಕಥಾಹಂದರದ ಚಿತ್ರ ಎಂದು ಮನದಟ್ಟಾಗುತ್ತದೆ. ಕಾರಣ ಚಿತ್ರದ ಟೈಟಲ್...
ಸಿನಿಮಾಸುದ್ದಿ

ಸ್ವಾತಂತ್ರ್ಯ ದಿನಕ್ಕೆ ನಾವು ನೋಡಬಹುದು ಭಾರತದ ಪ್ರಥಮ ಮಂಗಳಯಾನ – ಕಹಳೆ ನ್ಯೂಸ್

ಭಾರತದ ಮಂಗಳಯಾನದ ಸತ್ಯ ಕಥೆಯಾಧಾರಿತ ‘ಮಿಷನ್ ಮಂಗಲ್’ ಆಗಸ್ಟ್ 15 ರಂದು ಬಿಡುಗಡೆಯಾಗಲಿದೆ ಎಂದು ಅಕ್ಷಯ್ ಕುಮಾರ್ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ನಟಿಸಿರುವ ಎಲ್ಲ ಕಲಾವಿದರ ಫೋಟೋಗಳಿದ್ದು, ಕೆಳಗಡೆ ಮಂಗಳ ಗ್ರಹದ ಕ್ಷಕೆಯ ಸುತ್ತ ಗ್ರಹಗಳು ಸುತ್ತುತ್ತಿರುವಂತೆ ಕಾಣುತ್ತಿದೆ. ನೆಲದಿಂದ ಚಿಮ್ಮುತ್ತಿರುವ ಉಡಾವಣಾ ವಾಹಕ ಅಕ್ಷಯ್ ಕುಮಾರ್ ಹಾಗೂ ಇತರ ಕಲಾವಿದರನ್ನು ವಿಂಗಡಿಸಿದಂತೆ ಕಾಣುತ್ತಿದ್ದು, ಪೋಸ್ಟರ್‌ನ ಎರಡು ಕಡೆಗಳಲ್ಲಿ ನೀಲಿ ಬಣ್ಣ...
ಸಿನಿಮಾಸುದ್ದಿ

ಅತೀ ಶೀಘ್ರದಲ್ಲಿ ತರೆಗಪ್ಪಳಿಸಲಿದೆ ಬಹುನಿರೀಕ್ಷಿತ ‘ಇಂಗ್ಲೀಷ್’ – ಕಹಳೆ ನ್ಯೂಸ್

ಈ ಬಾರಿ ಕೋಸ್ಟಲ್‍ವುಡ್‍ನಲ್ಲಿ ‘ಕಟಪಾಡಿ ಕಟ್ಟಪ್ಪ’ ಚಿತ್ರ ಹಿಟ್ ಎನಿಸಿಕೊಂಡರೆ, ಮತ್ಯಾವ ಚಿತ್ರವೂ ಬಿಡುಗಡೆಗೆ ಮುನ್ನ ಮಾಡಿದ್ದ ಸದ್ದನ್ನು, ಬಿಡುಗಡೆಯ ನಂತರ ಮಾಡಲೇ ಇಲ್ಲ. ಕೊನೆಯದಾಗಿ ಬಿಡುಗಡೆಗೊಂಡ ತುಳು ಚಿತ್ರ ‘ಆಯೆ ಏರ್’. ಇದಾದ ಮೇಲೆ ‘ಅಪ್ಪೆ ಟೀಚರ್’ ಮತ್ತು ‘ಚಾಲಿಪೋಲಿಲು’ ಮರು ಬಿಡುಗಡೆಯಾದದ್ದನ್ನು ಬಿಟ್ರೆ, ಯಾವೊಂದು ತುಳು ಚಿತ್ರವೂ ಥಿಯೇಟರಿನತ್ತ ಸುಳಿಯಲಿಲ್ಲ. ಆದರೆ ಆಗಸ್ಟ್ ತಿಂಗಳಿನಲ್ಲಿ ಸಾಲು ಸಾಲು ತುಳು ಚಿತ್ರಗಳು ರಿಲೀಸ್‍ಗೆ ರೆಡಿಯಾಗುತ್ತಿವೆ ಅಂತಹವುಗಳಲ್ಲಿ ಮುಂಚೂಣಿಯ ಸ್ಥಾನದಲ್ಲಿರುವ...
ಸಿನಿಮಾ

ಸ್ಯಾಂಡಲ್‍ವುಡ್‍ನ ಬಹುನಿರೀಕ್ಷಿತ ‘ಭರಾಟೆ’ ಬಿಡುಗಡೆ ದಿನಾಂಕ ಬಹಿರಂಗ – ಕಹಳೆ ನ್ಯೂಸ್

ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ 'ಭರಾಟೆ' ಚಿತ್ರದ ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ. ಸೆಪ್ಟೆಂಬರ್ 27ರಂದು ಭರಾಟೆ ಚಿತ್ರವು ದೇಶದಾದ್ಯಂತ ಬಿಡುಗಡೆಯಾಗಲಿದೆ ಎಂಬ ಅಧಿಕೃತ ಮಾಹಿತಿ, ಅನಧಿಕೃತವಾಗಿ ಚಿತ್ರತಂಡದಿಂದ ಹೊರಬಿದ್ದಿದೆ. 2017ರಲ್ಲಿ ಬಿಡುಗಡೆಯಾಗಿದ್ದ 'ಮಫ್ತಿ' ಚಿತ್ರದ ಬಳಿಕ ಶ್ರೀಮುರಳಿ ಅಭಿನಯದ ಯಾವುದೇ ಚಿತ್ರವು ತೆರೆಗೆ ಬಂದಿಲ್ಲ. ಈ ಕಾರಣಕ್ಕೆ ಮುರಳಿ ಅಭಿಮಾನಿಗಳು ಭರಾಟೆ ಚಿತ್ರವನ್ನು ಕುತೂಹಲದಿಂದ ಕಾಯುತ್ತಿದ್ದಾರೆ. ರೋರಿಂಗ್ ಸ್ಟಾರ್ ಕೈನಲ್ಲಿ ಬಹಳಷ್ಟು ಚಿತ್ರಗಳಿವೆ. ಭರಾಟೆ ಸೇರಿದಂತೆ ‘ನಂದೇ’, ‘ಮದಗಜ’,...
ಸಿನಿಮಾ

ಮತ್ತೊಂದು ಐತಿಹಾಸಿಕ ಪಾತ್ರದಲ್ಲಿ ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ – ಕಹಳೆ ನ್ಯೂಸ್

ಚಿರಂಜೀವಿ ಮುಖ್ಯಭೂಮಿಕೆಯಲ್ಲಿರುವ ಸೈರಾ ಸಿನಿಮಾದಲ್ಲಿ ನಟಿ ಅನುಷ್ಕಾ ಶೆಟ್ಟಿ ಗಮನಾರ್ಹ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಅವರ ಪಾತ್ರದ ಬಗ್ಗೆ ಇದುವರೆಗೂ ಚಿತ್ರತಂಡ ಸುಳಿವು ಬಿಟ್ಟುಕೊಟ್ಟಿರಲಿಲ್ಲ. ಇದೀಗ ಅನುಷ್ಕಾ ಪಾತ್ರ ಬಹಿರಂಗವಾಗಿದೆ. ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಅಭಿನಯದ ಬಹುನಿರೀಕ್ಷಿತ ಐತಿಹಾಸಿಕ ಸಿನಿಮಾ ‘ಸೈರಾ ನರಸಿಂಹ ರೆಡ್ಡಿ’ ಸ್ವಾತಂತ್ರ್ಯ ಯೋಧ ಉಯ್ಯಾಲವಾಡ ನರಸಿಂಹರೆಡ್ಡಿ ಜೀವನ ಕಥೆಯಾಧಾರಿತ ಸಿನಿಮಾದಲ್ಲಿ, ಟಾಲಿವುಡ್ ಲೇಡಿ ಸೂಪರ್ ಸ್ಟಾರ್ ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರ ಪೋಷಿಸುತ್ತಿದ್ದಾರೆ. ‘ಸೈರಾ...
ಸಿನಿಮಾ

ದಿ ವಿಲನ್ ಹಾದಿಯಲ್ಲಿ ಸಾಗುತ್ತಿದೆಯಾ ‘ಕುರುಕ್ಷೇತ್ರ’ – ಕಹಳೆ ನ್ಯೂಸ್

ಕನ್ನಡ ಚಿತ್ರರಂಗದ ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬಂದು ಸೆಲೆಬ್ರೆಟಿಗೆ ಚಾಲೆಂಜ್ ಮಾಡಲಿದ್ದೇನೆ ಎಂದು ಹೇಳಿದ್ದರು. ಇದು ಎಲ್ಲರ ಕಿವಿ ನೆಟ್ಟಗಾಗಿಸಿತ್ತು. ಎಲ್ಲರೂ ಕುತೂಹಲದಿಂದ ಕಾಯುತಿದ್ದರು. ಅದರಂತೆ ದರ್ಶನ್ ತಮ್ಮ ಫೇಸ್‍ಬುಕ್ ಪೇಜ್‍ನಲ್ಲಿ ಬಂದು ನನ್ನನ್ನು ನೀವು ಸೆಲೆಬ್ರೆಟಿ ಎಂದು ಕರೆಯುತ್ತೀರಿ, ಆದರೆ ನನಗೆ ಸೆಲೆಬ್ರೆಟಿ ಅಂದ್ರೆ, ನನ್ನ ಅಭಿಮಾನಿಗಳು. ಹಾಗಾಗಿ, ಇನ್ನೇನು ‘ಮುನಿರತ್ನ ಕುರುಕ್ಷೇತ್ರ’ ಬಿಡುಗಡೆಗೆ ಕ್ಷಣಗಣನೆ ಶುರುವಾಗಿದೆ. ಬಿಡುಗಡೆಯ ಸಂದರ್ಭದಲ್ಲಿ...
ಸಿನಿಮಾ

ಹಾರರ್ ಚಿತ್ರದ ಮೂಲಕ ಬೆಚ್ಚಿಬೀಳಿಸಿದ್ದ ನಿರ್ದೇಶಕನ ದ್ವಿತೀಯ ಚಿತ್ರ ‘ದಿಯಾ’… – ಕಹಳೆ ನ್ಯೂಸ್

ಕನ್ನಡದಲ್ಲಿ ಹಿಂದೆಲ್ಲಾ ಆಗೊಮ್ಮೆ ಈಗೊಮ್ಮೆ ಹಾರರ್ ಚಿತ್ರಗಳು ಬರುತ್ತಿದ್ದವು. ಆದರೆ ಯಾವಾಗ ‘ರಂಗಿತರಂಗ’ ಎಂಬ ತರಂಗವು ಕನ್ನಡ ಚಿತ್ರರಂಗದಲ್ಲಿ ಸಂಚಲನ ಮೂಡಿಸಿತೋ, ಅದಾದ ಮೇಲೆ ಸಾಲು ಸಾಲು ಹಾರರ್ ಸಿನೆಮಾಗಳು ಕನ್ನಡದಲ್ಲಿ ಬಿಡುಗಡೆಗೊಂಡು ಅಷ್ಟೇ ವೇಗವಾಗಿ ಮಾಯವಾಗಿದ್ದವು. ಇದಕ್ಕೂ ಮೊದಲು ಬಂದಿದ್ದ ದಿ ಬೆಸ್ಟ್ ಹಾರರ್ ಚಿತ್ರವೆಂದರೆ ‘6-5=2’. ಈ ಚಿತ್ರ ಬಿಡುಗೊಡೆಗೊಂಡಿದ್ದೇ ಅತ್ಯಂತ ವಿಭಿನ್ನವಾಗಿ, ಮತ್ತು ವಿಶ್ವ ಸಿನೆಮಾರಂಗದಲ್ಲೇ ಬಹುಷ: ಇದು ಮೊದಲ ಪ್ರಯತ್ನವಿರಬಹುದು. ಅಂದ್ರೆ ‘6-5=2’. ಸಿನೆಮಾ...
1 63 64 65 66 67 92
Page 65 of 92