‘ಆಪರೇಷನ್ ಸಿಂಧೂರ’ದಲ್ಲಿ ಭಾಗಿಯಾದ ಬಿಎಸ್‌ಎಫ್‌ನ 16 ಸಿಬ್ಬಂದಿಗೆ ಶೌರ್ಯ ಪದಕ -ಕಹಳೆ ನ್ಯೂಸ್
ನವದೆಹಲಿ: ಭಾರತೀಯ ಸೇನೆ ನಡೆಸಿದ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಭಾಗವಹಿಸಿ 'ಸಾಟಿಯಿಲ್ಲದ ಶೌರ್ಯ' ಪ್ರದರ್ಶಿಸಿದ್ದ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 16 ಮಂದಿಗೆ ಕೇಂದ್ರ ಸರ್ಕಾರ ಶೌರ್ಯ ಪದಕ ಘೋಷಿಸಿದೆ. ಗಡಿಯಲ್ಲಿ ದೇಶ ರಕ್ಷಣೆ ಮಾಡುವ ಹೊಣೆಯನ್ನು ಬಿಎಸ್‌ಎಫ್ ನಿಭಾಯಿಸುತ್ತಿದೆ. 'ಆಪರೇಷನ್ ಸಿಂಧೂರದ ವೇಳೆ ಗಮನಾರ್ಹ, ಅಚಲ ಪರಾಕ್ರಮ, ಅಪ್ರತಿಮ ಸಾಹಸ ತೋರಿದ್ದಕ್ಕಾಗಿ ಗಡಿ ರಕ್ಷಣಾ ಪಡೆಯ 16 ಯೋಧರಿಗೆ ಈ ಸ್ವಾತಂತ್ರ್ಯೋತ್ಸವದಂದು ಶೌರ್ಯ ಪದಕ ನೀಡಲಾಗುತ್ತಿದೆ' ಎಂದು ಬಿಎಸ್‌ಎಫ್...







