Saturday, March 14, 2026

ರಾಷ್ಟ್ರೀಯ

ಅಂಕಣಬೆಂಗಳೂರುಸುದ್ದಿ

ಆರ್‌ಎಸ್‌ಎಸ್‌ ಪಥಸಂಚಲನ ನಿರಾತಂಕ ; ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆಯಾಜ್ಞೆ-ಕಹಳೆ ನ್ಯೂಸ್

ಬೆಂಗಳೂರು: ಸರಕಾರಿ ಸ್ಥಳಗಳಲ್ಲಿ ಖಾಸಗಿ ಸಂಘಸಂಸ್ಥೆಗಳು ಕಾರ್ಯಕ್ರಮ ನಡೆಸಲು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂಬ ‌ರಾಜ್ಯ ಸರಕಾರದ  ಆದೇಶಕ್ಕೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಮಧ್ಯಂತರ ತಡೆಯಾಜ್ಞೆ  ನೀಡಿದೆ. ಇದರೊಂದಿಗೆ, ಚಿತ್ತಾಪುರ ಸೇರಿದಂತೆ ರಾಜ್ಯಾದ್ಯಂತ ರಾಷ್ಟ್ರೀಯ ಸ್ವಯಸೇವಕ ಸಂಘ ನಡೆಸಲು ಉದ್ದೇಶಿಸಿದ್ದ ಪಥಸಂಚಲನಗಳಿಗೆ ಉಂಟಾಗಿದ್ದ ತಡೆ ತೆರವಾಗಿದೆ. 2013ರ ಬಿಜೆಪಿ ಸರ್ಕಾರದ ಆದೇಶವನ್ನೇ ಮುಂದಿಟ್ಟು ರಾಜ್ಯ ಸರ್ಕಾರ ಖಾಸಗಿ ಸಂಸ್ಥೆಗಳು, ಸಂಘಟನೆಗಳು ಚಟುವಟಿಕೆಗಳನ್ನು ನಡೆಸಲು ಪೂರ್ವಾನುಮತಿ ಕಡ್ಡಾಯ ಮಾಡಿ ಹೊಸ...
ಅಂಕಣಬೆಂಗಳೂರುಸುದ್ದಿ

ಇಂದಿನಿಂದ ; ರಾಜ್ಯ ಪೊಲೀಸರಿಗೆ ತೆಲಂಗಾಣ ಮಾದರಿಯ ಪಿ- ಕ್ಯಾಪ್‌ ವಿತರಣೆ-ಕಹಳೆ ನ್ಯೂಸ್

ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು ಇಂದಿನಿಂದ ತೆಲಂಗಾಣ ಮಾದರಿಯ ನೇವಿ ಬ್ಲೂ  ಬಣ್ಣದ ಹೊಸ ‘ಪಿ ಕ್ಯಾಪ್’ (P cap) ಧರಿಸಲಿದ್ದಾರೆ. ಈ ಮೂಲಕ ದಶಕಗಳಿಂದ ರಾಜ್ಯ ಪೊಲೀಸರು ಧರಿಸುತ್ತಿದ್ದ ಸ್ಲೌಚ್ ಕ್ಯಾಪ್‌ಗೆ ಪೊಲೀಸ್‌ ಇಲಾಖೆ ಅಂತಿಮ ವಿದಾಯ ಹೇಳಲಿದೆ. ತೆಲಂಗಾಣ  ಮಾದರಿಯಲ್ಲೇ ರಾಜ್ಯದ ಪೊಲೀಸರಿಗೆ ಹೊಸ ಪಿ ಕ್ಯಾಪ್ ವಿನ್ಯಾಸಗೊಳಿಸಲಾಗಿದೆ. ಆದರೆ ರಾಜ್ಯ ಪೊಲೀಸ್ ಲಾಂಛನ ಆ ಕ್ಯಾಪ್‌ನ ಮಧ್ಯದಲ್ಲಿ ಅಚ್ಚೊತ್ತಲಾಗಿದೆ. ಕರ್ನಾಟಕ...
ಬೆಂಗಳೂರುಸುದ್ದಿ

ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ 48 ಗಂಟೆ ರಣಮಳೆ ಎಚ್ಚರಿಕೆ, ಆರೆಂಜ್ ಅಲರ್ಟ್

ಬೆಂಗಳೂರು : ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಹಲವು ದಿನಗಳಿಂದ ಸುರಿಯುತ್ತಿದ್ದ ಮಳೆಯು ಮುಂದಿನ ಎರಡರಿಂದ ಐದು ದಿನಗಳ ಕಾಲ ಮತ್ತೆ ಅಬ್ಬರಿಸಲಿದೆ. ಮೊಂಥಾ ಚಂಡಮಾರುತ ಇಂದು ಮಂಗಳವಾರ ಆಂಧ್ರಪ್ರದೇಶ ಕರಾವಳಿ ಭಾಗಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದರಿಂದ ವಿವಿಧ ರಾಜ್ಯಗಳ ಜೊತೆಗೆ ಕರ್ನಾಟಕಕ್ಕೆ ಭಾರೀಯಿಂದ ಅತ್ಯಧಿಕ ಮಳೆ ಬರಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ. ಕರ್ನಾಟಕ ರಾಜ್ಯದಲ್ಲಿ ಕರಾವಳಿ, ಮಲೆನಾಡು ಹಾಗೂ ಇತರ...
ಕ್ರೀಡೆದೆಹಲಿಸುದ್ದಿ

ಆಂತರಿಕ ರಕ್ತಸ್ರಾವ: ಶ್ರೇಯಸ್ ಅಯ್ಯರ್ ಸಿಡ್ನಿ ಆಸ್ಪತ್ರೆಗೆ ದಾಖಲು, ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಮೂರನೇ ಪಂದ್ಯದ ವೇಳೆ ಪಕ್ಕೆಲುಬು ಪಂಜರದ ಗಾಯದಿಂದಾಗಿ ಆಂತರಿಕ ರಕ್ತಸ್ರಾವದಿಂದ ಬಳಲುತ್ತಿದ್ದ ಭಾರತದ ಏಕದಿನ ಉಪನಾಯಕ ಶ್ರೇಯಸ್ ಅಯ್ಯರ್ ಅವರನ್ನು ಸಿಡ್ನಿಯ ಆಸ್ಪತ್ರೆಗೆ ದಾಖಲಿಸಲಾಗಿದೆ ಅಲೆಕ್ಸ್ ಕ್ಯಾರಿ ಅವರನ್ನು ಔಟ್ ಮಾಡಲು ಬ್ಯಾಕ್ ವರ್ಡ್ ಪಾಯಿಂಟ್ ನಿಂದ ಹಿಂದಕ್ಕೆ ಓಡಿದ ಅದ್ಭುತ ಕ್ಯಾಚ್ ಪಡೆದಿದ್ದ ಅಯ್ಯರ್, ಈ ಪ್ರಕ್ರಿಯೆಯಲ್ಲಿ ಅವರ ಎಡ ಪಕ್ಕೆಲುಬಿನ ಪಂಜರಕ್ಕೆ ಗಾಯವಾಗಿದೆ ಮತ್ತು ಶನಿವಾರ ಡ್ರೆಸ್ಸಿಂಗ್ ರೂಮ್ ಗೆ ಮರಳಿದ ಕೂಡಲೇ...
ಅಂಕಣದೆಹಲಿಸುದ್ದಿ

ದೆಹಲಿಯಿಂದ ; ಬರಿಗೈಯಲ್ಲಿ ಬೆಂಗಳೂರಿಗೆ ಡಿಕೆಶಿ ವಾಪಸ್‌-ಕಹಳೆ ನ್ಯೂಸ್

ನವದೆಹಲಿ: ಹೈಕಮಾಂಡ್‌ ಭೇಟಿಗೆ ತೆರಳಿದ್ದ ಡಿಸಿಎಂ ಡಿಕೆ ಶಿವಕುಮಾರ್‌ ಬರಿಗೈಯಲ್ಲಿ ವಾಪಸ್‌ ಆಗಿದ್ದಾರೆ. ನವೆಂಬರ್‌ ಕೋಲಾಹಲದ ಮಧ್ಯೆ ಭಾನುವಾರ ಸಂಜೆ ದೆಹಲಿಗೆ ತೆರಳಿದ್ದ ಡಿಕೆಶಿ ಹೈಕಮಾಂಡ್‌ ನಾಯಕರ ಭೇಟಿಗೆ ಅವಕಾಶ ಕೇಳಿದ್ದರು. ಇಂದು ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಸಮಯ ನೀಡಿದ್ದಾರೆ ಎಂದು ಹೇಳಲಾಗಿತ್ತು. ಬೆಳಗ್ಗೆ 10 ನಂತರ 11 ಗಂಟೆಗೆ ಭೇಟಿಯಾಗುತ್ತಾರೆ ಎನ್ನಲಾಗಿತ್ತು. ಆದರೆ ಹೈಕಮಾಂಡ್‌ ನಾಯಕರು ಡಿಕೆಶಿ ಭೇಟಿಗೆ ಅವಕಾಶ ನೀಡಿರಲಿಲ್ಲ. ಭೇಟಿಗೆ ಅವಕಾಶ...
ದೆಹಲಿಸುದ್ದಿ

ಅಂತರರಾಷ್ಟ್ರೀಯ ಜುಜುಟ್ಸು ಆಟಗಾರ್ತಿ `ರೋಹಿಣಿ ಕಲಾಂ’ ಆತ್ಮಹತ್ಯೆ -ಕಹಳೆ ನ್ಯೂಸ್

ನವದೆಹಲಿ : ಅಂತರರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದ ಜುಜುಟ್ಸು ಆಟಗಾರ್ತಿ ರೋಹಿಣಿ ಕಲಾಂ ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ, 32 ವರ್ಷದ ರೋಹಿಣಿ ತಮ್ಮ ಮನೆಯಲ್ಲಿ ಸ್ಕಾರ್ಫ್ನಿಂದ ನೇಣು ಬಿಗಿದುಕೊಂಡಿದ್ದಾರೆ. ಬ್ಯಾಂಕ್ ನೋಟ್ ಪ್ರೆಸ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಅರ್ಜುನ್ ನಗರದಲ್ಲಿ ಈ ಘಟನೆ ನಡೆದಿದೆ. ರೋಹಿಣಿ ಕಲಾಂ ಜುಜುಟ್ಸು ನಂತಹ ಸಮರ ಕಲೆಗಳಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದಿದ್ದರು ಮತ್ತು...
ಬೆಂಗಳೂರುರಾಜ್ಯಸುದ್ದಿ

ಮುಂದಿನ ಮೂರು ದಿನ ಮಳೆ ಸಾಧ್ಯತೆ, 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ – ಕಹಳೆ ನ್ಯೂಸ್

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಮುಂದಿನ ಮೂರು ದಿನ ಭಾರಿ ಮಳೆಯಾಗುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆಯು 11 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಿದೆ. ಇದೇ ಭಾನುವಾರ ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿ, ಹಾವೇರಿ, ಗದಗ, ಕೊಪ್ಪಳ, ಧಾರವಾಡ, ಬಾಗಲಕೋಟೆ, ವಿಜಯಪುರ, ಬೆಳಗಾವಿ ಸೇರಿ 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳವರೆಗೆ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಕರ್ನಾಟಕ...
ಬೆಂಗಳೂರುರಾಜ್ಯ

ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ, ಸ್ಥಿರವಾಯ್ತು ಚಿನ್ನದ ಬೆಲೆ – ಕಹಳೆ ನ್ಯೂಸ್

ಚಿನ್ನದ ಬೆಲೆ ಮತ್ತಷ್ಟು ಇಳಿಕೆಯಾಗಬಹುದು ಎಂದು ನಿರೀಕ್ಷೆಯಲ್ಲಿದ್ದ ಜನರಿಗೆ ನಿನ್ನೆ ನಿರಾಸೆ ಮೂಡಿಸಿತ್ತು. ಅಲ್ಲದೇ ಚಿನ್ನದ ಬೆಲೆಯಲ್ಲಿ ಎರಡು ದಿನಗಳ ಹಿಂದಷ್ಟೇ ಭಾರೀ ಇಳಿಕೆಯಾಗಿತ್ತು. ಆದ್ರೆ ಅಕ್ಟೋಬರ್‌ 25 ರಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಇದೀಗ ನಿಂತ ನೀರಂತೆ ಚಿನ್ನದ ಬೆಲೆ ಇಂದೂ (ಅ.26) ಮುಂದುವರೆದಿದೆ. ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ: ದೀಪಾವಳಿ ವೇಳೆ ಚಿನ್ನದ ಬೆಲೆ ಭಾರೀ ಇಳಿಕೆ ಕಂಡಿತ್ತು. ಆದ್ರೆ ಇದೀಗ ದಿಢೀರ್‌ ಬೆಲೆ...
1 51 52 53 54 55 319
Page 53 of 319