ಬೆಂಗಳೂರಿನಲ್ಲಿ ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ 7 ಕೋಟಿ ರೂಪಾಯಿ ದರೋಡೆ : ವೆಬ್ ಸೀರೀಸ್ ನಿಂದ ಪ್ರೇರಿತರಾಗಿದ್ರಾ ರಾಬರ್ಸ್…? -ಕಹಳೆ ನ್ಯೂಸ್
ಬೆಂಗಳೂರು : ಎಟಿಎಂಗಳಿಗೆ ಹಣ ಪೂರೈಸುತ್ತಿದ್ದ ವಾಹನವನ್ನು ಆರ್‌ಬಿಐ ಅಧಿಕಾರಿಗಳ ಸೋಗಿನಲ್ಲಿ ಅಡ್ಡಗಟ್ಟಿ ಬರೋಬ್ಬರಿ 7 ಕೋಟಿ 11 ಲಕ್ಷ ರೂಪಾಯಿ ದೋಚಿದ್ದ ಪ್ರಕರಣ ವೆಬ್ ಸೀರೀಸ್ ಪ್ರೇರಿತವಾ ಎನ್ನುವ ಅನುಮಾನ ವ್ಯಕ್ತವಾಗಿದೆ. ಆರೋಪಿಗಳು ದರೋಡೆಗೆ ಪಕ್ಕಾ ಪ್ಲ್ಯಾನ್ ಮಾಡಿಯೇ ಬಂದಿದ್ದು, ಆ ಪ್ರೀ ಪ್ಲಾನ್ ಪ್ರಕಾರ ಮೂರು ಠಾಣೆಗೆ ಸೇರುವ ಸ್ಥಳದಲ್ಲಿ ವಾಹನ ಬಿಡುವುದು ಕೂಡ ಯೋಜನೆ ಆಗಿತ್ತು ಎಂಬ ಅನುಮಾನ ತನಿಖೆ ವೇಳೆ ವ್ಯಕ್ತವಾಗಿದೆ. ಸಿಎಂಎಸ್ ವಾಹನ ಸಿಕ್ಕಿದ್ದ ಫ್ಲೈ...







