ಡ್ರಗ್ಸ್ ಮಾಫಿಯಾ ಕೇಸ್; ನಟಿ ರಾಗಿಣಿಗೆ ಇಂದು ಜೈಲಾ.? ಬೇಲಾ.? – ಕಹಳೆ ನ್ಯೂಸ್
ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟಿ ರಾಗಿಣಿ ದ್ವಿವೇದಿಯವರ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ನ್ಯಾಯಾಧೀಶರ ಮುಂದೆ ಮತ್ತೆ ಹಾಜರಾಗಲಿದ್ದಾರೆ. ಕಳೆದ 8 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿರುವ ನಟಿ ರಾಗಿಣಿ, ವಿಚಾರಣೆ ವೇಳೆ ಯಾವುದೇ ಮಾಹಿತಿ ನೀಡಿಲ್ಲ. ತನಗೇನೂ ಗೊತ್ತಿಲ್ಲ. ಎಲ್ಲವೂ ಮರೆತು ಹೋಗಿದೆ ಎಂದು ರಾಗಿಣಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಇಂದಿಗೆ ರಾಗಿಣಿ ಸಿಸಿಬಿ ಕಸ್ಟಡಿ ಮುಗಿಯುವ ಹಿನ್ನಲೆಯಲ್ಲಿ ಮಧ್ಯಾಹ್ನ ರಾಗಿಣಿಯವರನ್ನು ಸಿಸಿಬಿ...







