ಜನವರಿ 1ರಿಂದ ಬಿಎಂಟಿಸಿ ಎಸಿ ಬಸ್‍ಗಳ ಟಿಕೆಟ್ ದರ ಇಳಿಕೆ-ಕಹಳೆ ನ್ಯೂಸ್
ಬೆಂಗಳೂರು : ಜನವರಿ 1 ರಿಂದ ಎಸಿ ಬಸ್‍ಗಳ ಟಿಕೆಟ್ ದರವನ್ನು ಕಡಿಮೆ ಮಾಡಲು ಬಿಎಂಟಿಸಿ ಮುಂದಾಗಿದ್ದು, ನಗರದಲ್ಲಿ 80 ಎಸಿ ಬಸ್‍ಗಳ ಸಂಚಾರ ಆರಂಭಿಸಿ, ಎಸಿ ಬಸ್‍ಗಳ ಟಿಕೆಟ್ ದರ ಕಡಿಮೆ ಮಾಡಿ ಪ್ರಯಾಣಿಕರ ಸಂಖ್ಯೆಯನ್ನು ಹೆಚ್ಚು ಮಾಡಿಕೊಳ್ಳುವುದು ಬಿಎಂಟಿಸಿ ಆಲೋಚನೆಯಾಗಿದೆ. ಇನ್ನು ಕೊರೊನಾ ಲಾಕ್‍ಡೌನ್ ಶುರುವಾದಾಗಿನಿಂದ ಸಾಮಾನ್ಯ ಬಸ್‍ಗಳು ಕೂಡ ಸ್ಥಗಿತಗೊಂಡಿದ್ದವು. ಎಸಿ ಬಸ್‍ಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುವುದರಿಂದ ಮತ್ತು ಟಿಕೆಟ್ ದರ ಹೆಚ್ಚಿರುವುದರಿಂದ...







