ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಧರ್ಮದ್ವೇಷದ ಟ್ವೀಟ್ ತನಿಖೆಗೆ ಪತ್ರಕರ್ತ ಅಸಹಕಾರ, ಬೆಂಗಳೂರು ನಿವಾಸಿ, ಪತ್ರಕರ್ತ ಮೊಹಮ್ಮದ್ ಜುಬೇರ್ 4 ದಿನ ಪೊಲೀಸ್ ವಶಕ್ಕೆ! – ಕಹಳೆ ನ್ಯೂಸ್
ನವದೆಹಲಿ(ಜೂ.29): 2018ರಲ್ಲಿ ಹಿಂದೂ ದೇವರ ಬಗ್ಗೆ ಅವಹೇಳನಕಾರಿಯಾಗಿ ಧರ್ಮದ್ವೇಷದ ಕಿಚ್ಚು ಹೊತ್ತಿಸುವ ಟ್ವೀಟ್ ಮಾಡಿದ್ದರು ಎನ್ನಲಾದ ‘ಆಲ್ಟ್ನ್ಯೂಸ್’ ಆನ್ಲೈನ್ ಮಾಧ್ಯಮದ ಸಂಸ್ಥಾಪಕ ಹಾಗೂ ಪತ್ರಕರ್ತ ಮೊಹಮ್ಮದ್ ಜುಬೇರ್ ಅವರನ್ನು ದಿಲ್ಲಿ ನ್ಯಾಯಾಲಯ ಮಂಗಳವಾರ 4 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಇನ್ನೊಂದೆಡೆ ಅವರು 2018ರ ಧರ್ಮದ್ವೇಷದ ವಿವಾದಿತ ಟ್ವೀಟ್ ಬಗ್ಗೆ ಹಾರಿಕೆ ಉತ್ತರ ನೀಡುತ್ತಿದ್ದಾರೆ. ತಮ್ಮದೇ ಆದ ವಿವಾದಿತ ಟ್ವೀಟನ್ನೂ ಅವರು ಖಚಿತಪಡಿಸುತ್ತಿಲ್ಲ ಎಂದು ತಿಳಿದುಬಂದಿದೆ. ಅಲ್ಲದೆ, ತಾವು...







