ಕಾಳಿಮಾತೆ ಆಯ್ತು ಈಗ ಶಿವ-ಪಾರ್ವತಿ ವೇಷಧಾರಿಗಳ ಬಾಯಲ್ಲಿ ಸಿಗರೇಟ್ ; ಮತ್ತೊಮ್ಮೆ ಹಿಂದುಗಳನ್ನು ಕೆಣಕಿದ ಲೀನಾ – ಕಹಳೆ ನ್ಯೂಸ್
ಬೆಂಗಳೂರು: ಸಾಕ್ಷ್ಯಚಿತ್ರವೊಂದರಲ್ಲಿ ಹಿಂದುಗಳು ಆರಾಧಿಸುವ ಕಾಳಿ ಮಾತೆಯ ಬಾಯಲ್ಲಿ ಸಿಗರೇಟ್ ಇಟ್ಟು ಅವಮಾನಿಸಿದ್ದ ನಿರ್ದೇಶಕಿ ಲೀನಾ ಮಣಿಮೇಕಲೈ, ಇದೀಗ ಮತ್ತೊಂದು ವಿವಾದಾತ್ಮಕ ಪೋಸ್ಟ್ ಮಾಡಿದ್ದಾರೆ. ಶಿವ-ಪಾರ್ವತಿ ವೇಷಧಾರಿಗಳ ಬಾಯಲ್ಲಿ ಸಿಗರೇಟ್ ಇರುವ ಫೋಟೋವನ್ನು ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾಳೆ. ಆ ಮೂಲಕ ಮತ್ತೊಮ್ಮೆ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದು, ಎಲ್ಲೆಡೆ ಈಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಲೀನಾ ಮೈಣಿಮೇಕಲೈ ನಿರ್ದೇಶನದ 'ಕಾಳಿ' ಡಾಕ್ಯುಮೆಂಟರಿ ಸಿನಿಮಾದ ಪೋಸ್ಟರ್ನಲ್ಲಿ ಕಾಳಿದೇವಿಯ ಒಂದು ಕೈಯಲ್ಲಿ ತ್ರಿಶೂಲ,...







