ಪ್ರಧಾನಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಲು ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಬಳಸುವಂತಿಲ್ಲ ; ಅಲಹಾಬಾದ್ ಹೈಕೋರ್ಟ್ – ಕಹಳೆ ನ್ಯೂಸ್
ಪ್ರಯಾಗ್ರಾಜ್ : ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ಗಳನ್ನ ಹಂಚಿಕೊಂಡಿದ್ದಕ್ಕಾಗಿ ಜೌನ್ಪುರದ ಮೀರಾಗಂಜ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್ಐಆರ್ ರದ್ದುಗೊಳಿಸಲು ನಿರಾಕರಿಸಿರುವ ಅಲಹಾಬಾದ್ ಹೈಕೋರ್ಟ್, ಬಲವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಭಾರತೀಯ ಸಂವಿಧಾನವು ಸಂಪೂರ್ಣ ಅಭಿವ್ಯಕ್ತಿ ಸ್ವಾತಂತ್ರ್ಯವನ್ನ ನೀಡುತ್ತೆ. ಆದ್ರೆ, ಯಾವುದೇ ನಾಗರಿಕನ ವಿರುದ್ಧ ನಿಂದನಾತ್ಮಕ ಅಥವಾ ಅವಹೇಳನಕಾರಿ ಹೇಳಿಕೆಗಳಿಗಾಗಿ ಈ ಹಕ್ಕು ಚಲಾಯಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿದೆ. ದೇಶದ ಯಾವುದೇ ನಾಗರಿಕ ಅಥವಾ ಪ್ರಧಾನಿ ಅಥವಾ ಯಾವುದೇ ಸಚಿವರ...







