Wednesday, March 11, 2026

ಬೆಂಗಳೂರು

ಬೆಂಗಳೂರು

ಶಶಿಕಲಾ ನಟರಾಜನ್ ಅವರು ನಾಳೆ ತಮಿಳುನಾಡಿಗೆ ಪ್ರಯಾಣ-ಕಹಳೆ ನ್ಯೂಸ್

ಬೆಂಗಳೂರು : ನಾಳೆ ಚೆನ್ನೈಗೆ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿವಂಗತ ಜಯಲಲಿತಾ ಅವರ ಆಪ್ತೆ ಶಶಿಕಲಾ ನಟರಾಜನ್ ಅವರು ತೆರಳಲಿದ್ದಾರೆ. ಈಗಾಗಲೇ ಜೈಲು ಶಿಕ್ಷೆ ಪೂರ್ಣಗೊಳಿಸಿರುವ ಶಶಿಕಲಾ ಬಿಡುಗಡೆಯಾಗಿ ಬೆಂಗಳೂರು ಹೊರ ವಲಯದ ರೆಸಾರ್ಟ್‍ವೊಂದರಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲದೇ ಇಂದು ಅಣ್ಣಾಡಿಎಂಕೆ ಪಕ್ಷದ ಕೆಲವು ನಾಯಕರ ಜತೆ ಅವರು ಸಮಾಲೋಚನೆ ನಡೆಸಲಿದ್ದು, 200 ಕಾರುಗಳ ಜತೆ ತೆರಳಲು ಅನುಮತಿ ಕೋರಿದ್ದರೂ, ಇದಕ್ಕೆ ಅನುಮತಿ ನೀಡಲಾಗಿಲ್ಲ. ಹಾಗೂ ಶಶಿಕಲಾ ತಮಿಳುನಾಡು ರಾಜಕೀಯಕ್ಕೆ...
ಬೆಂಗಳೂರು

ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಇಂದು ಕುರುಬರ ಬೃಹತ್ ಸಮಾವೇಶ-ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನ ಮಾದಾವರ ಬಳಿಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದ ಮೈದಾನದಲ್ಲಿ ಇಂದು ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಆಗ್ರಹಿಸಿ ಕಾಗಿನೆಲೆ ಬೃಹತ್ ಸಮಾವೇಶ ನಡೆಯಲಿದೆ. ಮತ್ತು ಇಂದು ಬೆಳಗ್ಗೆ 11 ಗಂಟೆಗೆ ಕುರುಬರ ಕನಕ ಗುರುಪೀಠದ ನಿರಂಜನಾನಂದ ಪುರಿ ಸ್ವಾಮೀಜಿಗಳ ನೇತೃತ್ವದಲ್ಲಿ ಬೃಹತ್ ಎಸ್.ಟಿ ಹೋರಾಟ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ 10 ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆ ಇದೆ. ಹಾಗೆಯೇ ಸಮಾವೇಶದಲ್ಲಿ ಸಚಿವರಾದ ಕೆ.ಎಸ್....
ಬೆಂಗಳೂರು

ಪ್ರೊ.ಭಗವಾನ್ ಮುಖಕ್ಕೆ ಮಸಿ ಬಳಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲೆ ಮೀರಾಗೆ ವಿಚಾರಣೆಗೆ ಹಾಜರಾಗಲು ಪೊಲೀಸ್ ನೋಟಿಸ್-ಕಹಳೆ ನ್ಯೂಸ್

ಬೆಂಗಳೂರು : ಸಾಹಿತಿ ಪ್ರೊ.ಭಗವಾನ್ ಮುಖಕ್ಕೆ ಕೋರ್ಟ್ ಆವರಣದಲ್ಲೇ ಮಸಿ ಬಳಿದಿರುವ ಪ್ರಕರಣ ಆರೋಪಿಯಾಗಿರುವ ವಕೀಲೆ ಮೀರಾ ರಾಘವೇಂದ್ರ ಅವರಿಗೆ ವಿಚಾರಣೆ ಹಾಜರಾಗುವಂತೆ ಹಲಸೂರು ಗೇಟ್ ಠಾಣಾ ಪೊಲೀಸರು ನೋಟಿಸ್ ನೀಡಿದ್ದಾರೆ. ಪ್ರೊ.ಭಗವಾನ್ ಅವರು ಪ್ರಕರಣ ಒಂದರಲ್ಲಿ ಜಾಮೀನು ಪಡೆಯಲು ಕೋರ್ಟ್‍ಗೆ ಆಗಮಿಸಿದ್ದು, ಈ ವೇಳೆ ವಕೀಲೆ ಮೀರಾ ರಾಘವೇಂದ್ರ ಅವರು ಭಗವಾನ್ ಮುಖಕ್ಕೆ ಮಸಿ ಬಳಿದು ಯಾವಾಗಲು ದೇವರ ಬಗ್ಗೆ ರಾಮನ ಬಗ್ಗೆ ಮಾತನಾಡುತ್ತೀರಾ?. ನಾಚಿಕೆ ಆಗಲ್ವಾ ನಿಮಗೆ...
ಬೆಂಗಳೂರು

ಕಾಂಗ್ರೆಸ್ ಪಕ್ಷದ ಬಗ್ಗೆ ಜನ ವಿಶ್ವಾಸ ಕಳೆದುಕೊಂಡಿದ್ದಾರೆ, ಮುಂದಿನ ಚುನಾವಣೆಗಳಲ್ಲಿ ಕೂಡಾ ಬಿಜೆಪಿಯದ್ದೇ ಮೇಲುಗೈ ; ಸಿದ್ದುಗೆ ,ಸಿ.ಎಂ ತೀರುಗೇಟು-ಕಹಳೆ ನ್ಯೂಸ್

ಬೆಂಗಳೂರು : ಶುಕ್ರವಾರ ವಿಧಾನಸಭೆ ಕಲಾಪದಲ್ಲಿ ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದ ವಂದನ ನಿರ್ಣಯದ ಪ್ರಸ್ತಾವ ಚರ್ಚೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಉತ್ತರಿಸಿದ್ದು, ತಮ್ಮ ವಿರುದ್ದ ವಾಗ್ದಾಳಿ ನಡೆಸಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಮಾತಿನಲ್ಲೇ ಚಾಟಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಯಡಿಯೂರಪ್ಪ ಎಲ್ಲಿ ತನಕ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವರ ಬೆಂಬಲ ಮತ್ತು ರಾಜ್ಯದ ಜನರ ಆಶೀರ್ವಾದ ನನ್ನ ಮೇಲಿರುತ್ತದೋ ಅಲ್ಲಿಯ ತನಕ ನನ್ನ ವಿರುದ್ದ 100...
ಬೆಂಗಳೂರು

ಸಿ.ಎಂ.ಯಡಿಯೂರಪ್ಪ ಅವರಿಗೆ ಡ್ರೈವಿಂಗ್ ಮೊದಲೇ ಬರೋದಿಲ್ಲ, ಜೊತೆಗೆ ಸ್ವಪಕ್ಷದವರ ಕಾಟ. ಬಸ್ ಮುಂದಕ್ಕೆ ಹೇಗೆ ಹೋಗೋದು? ಇಂತಹ ಸರ್ಕಾರವನ್ನು ರಿಪೇರಿ ಮಾಡಲಾಗುವುದಿಲ್ಲ, ರಿಪ್ಲೇಸ್ ಮಾಡಬೇಕಾಗುತ್ತದೆ ಅಷ್ಟೇ; ಸಿದ್ದರಾಮಯ್ಯ ವ್ಯಂಗ್ಯ-ಕಹಳೆ ನ್ಯೂಸ್

ಬೆಂಗಳೂರು : ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಡ್ರೈವಿಂಗ್ ಮೊದಲೇ ಬರೋದಿಲ್ಲ, ಜೊತೆಗೆ ನಾಲ್ಕು ದಿಕ್ಕುಗಳಿಂದಲೂ ಕಾಲೆಳೆಯುತ್ತಿರುವ ಸ್ವಪಕ್ಷದವರ ಕಾಟ. ಬಸ್ ಮುಂದಕ್ಕೆ ಹೇಗೆ ಹೋಗೋದು? ಇಂತಹ ಸರ್ಕಾರವನ್ನು ರಿಪೇರಿ ಮಾಡಲಾಗುವುದಿಲ್ಲ, ರಿಪ್ಲೇಸ್ ಮಾಡಬೇಕಾಗುತ್ತದೆ ಅಷ್ಟೇ. ಆ ಕಾಲ ಸದ್ಯದಲ್ಲಿಯೇ ಬರಲಿದೆ ಎಂದು ಲೇವಡಿ ಮಾಡಿದ್ದಾರೆ. ಹಾಗೂ ಅವರು, ರಾಜ್ಯಪಾಲರಿಂದ ಸರ್ಕಾರ ಮಾಡಿಸಿದ್ದ ಭಾಷಣದಲ್ಲಿ ಒಂದಷ್ಟು ಸುಳ್ಳಿನ ಕಂತೆಗಳಿವೆ, ಒಂದಷ್ಟು ತಪ್ಪು ಮಾಹಿತಿಗಳಿವೆ, ಜೊತೆಗೆ ಸರ್ಕಾರದ...
ಬೆಂಗಳೂರು

ಬೆಂಗಳೂರಿನ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವಾಹನ ಚಾಲಕ 65 ಲಕ್ಷ ರೂ. ಸಮೇತ ಪರಾರಿ-ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನ ಸುಬ್ರಹ್ಮಣ್ಯ ನಗರದಲ್ಲಿ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಿಸುವ ವಾಹನ ಚಾಲಕ 65 ಲಕ್ಷ ರೂ. ಸಮೇತ ಪರಾರಿಯಾಗಿರುವ ಘಟನೆ ನಡೆದಿದೆ. ಅಧಿಕಾರಿಗಳು ಹಾಗೂ ಗನ್ ಮ್ಯಾನ್ ಸುಬ್ರಹ್ಮಣ್ಯ ನಗರದಲ್ಲಿ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ಹಣ ತುಂಬಲು ಎಟಿಎಂ ಒಳಗೆ ಹೋಗಿದ್ದ ವೇಳೆಯಲ್ಲಿ ವಾಹನದಲ್ಲಿದ್ದ ಚಾಲಕ 65 ಲಕ್ಷ ಹಣದ ಬ್ಯಾಗ್ ಸಮೇತ ಪರಾರಿಯಾಗಿದ್ದಾನೆ. ತಕ್ಷಣವೇ ಅಧಿಕಾರಿಗಳು ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಿದ್ದು, ಡ್ರೈವರ್...
ಬೆಂಗಳೂರು

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭೋಜನ ಕೂಟಕ್ಕೆ ಹಲವು ಶಾಸಕರು ಗೈರು-ಕಹಳೆ ನ್ಯೂಸ್

ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಮಂಗಳವಾರ ರಾತ್ರಿ ಕರೆದಿದ್ದ ಭೋಜನ ಕೂಟಕ್ಕೆ ಹಲವು ಶಾಸಕರು ಮತ್ತು ಸಚಿವರು ಗೈರಾಗಿದ್ದರು. ವಿಧಾನಮಂಡಲ ಅಧಿವೇಶನದ ಕಾರಣ ಮುಖ್ಯಮಂತ್ರಿಯವರ ನಿವಾಸ ಕಾವೇರಿ ಯಲ್ಲಿ ಭೋಜನ ಕೂಟ ಆಯೋಜಿಸಲಾಗಿದ್ದು, ಈ ಭೋಜನ ಕೂಟಕ್ಕೆ ಬಸನಗೌಡ ಪಾಟೀಲ ಯತ್ನಾಳ, ಅಪ್ಪಚ್ಚುರಂಜನ್, ಅರವಿಂದ ಬೆಲ್ಲದ, ಸುನಿಲ್ ಕುಮಾರ್, ತಿಪ್ಪಾರೆಡ್ಡ ಹಾಗೂ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಆನಂದ್ ಸಿಂಗ್, ಕೆ.ಎಸ್.ಈಶ್ವರಪ್ಪ, ಹಾಜರಾಗಿರಲಿಲ್ಲ. ಈ...
ಬೆಂಗಳೂರು

ಕೆಜಿಎಫ್ 2 ಸಿನೆಮಾದ ಬಿಡುಗಡೆ ದಿನವನ್ನು ರಾಷ್ಟ್ರೀಯ ರಜಾ ದಿನವನ್ನಾಗಿ ಘೋಷಿಸಲು ಯಶ್ ಅಭಿಮಾನಿಗಳಿಂದ ಮೋದಿಗೆ ಮನವಿ-ಕಹಳೆ ನ್ಯೂಸ್

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್-2 ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗುತ್ತಿದ್ದಂತೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಬಹು ನಿರೀಕ್ಷೆಯ ಕೆಜಿಎಫ್ ಚಾಪ್ಟರ್-2 ಸಿನೆಮಾವು ಜುಲೈ 16 ರಂದು ಬಿಡುಗಡೆಯಾಗಲಿದೆ. ಈ ಸಿನೆಮಾವನ್ನು ನೋಡುವುದಕ್ಕಾಗಿ ಜುಲೈ 16ನ್ನು ರಾಷ್ಟ್ರೀಯ ರಜೆಯ ದಿನವನ್ನಾಗಿ ಘೋಷಿಸಬೇಕು ಎಂದು ಯಶ್ ಅಭಿಮಾನಿಗಳು ಪ್ರಧಾನಿ ನರೇಂದ್ರ ಮೋದಿಯವರಿಗೆ ಓನ್ಲಿ ಯಶ್ ಹೆಸರಿನ ಟ್ವೀಟರ್ ಖಾತೆಯ ಮೂಲಕ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಅಭಿಮಾನಿಗಳು ಪ್ರಧಾನಿಯನ್ನು...
1 197 198 199 200 201 212
Page 199 of 212