ಹೆಗ್ಗನಹಳ್ಳಿಯ ರಾಜಗೋಪಾಲನಗರದಲ್ಲಿ ಪುತ್ರಿಯರ ಮೇಲೆಯೇ ಕೆಟ್ಟ ಕಣ್ಣಿಟ್ಟಿದ್ದ ಪತಿಯನ್ನು ಸುಪಾರಿ ನೀಡಿ ಕೊಲ್ಲಿಸಿದ ಪತ್ನಿ-ಕಹಳೆ ನ್ಯೂಸ್
ಬೆಂಗಳೂರು : ಹೆಗ್ಗನಹಳ್ಳಿಯ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ತನ್ನ ಪುತ್ರಿಯರೊಂದಿಗೆಯೇ ಅಸಭ್ಯವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ಆತನ ಪತ್ನಿ ಮತ್ತು ಪುತ್ರ ಸೇರಿ ಸುಪಾರಿ ನೀಡಿ ಕೊಲ್ಲಿಸಿದ ಘಟನೆ ನಡೆದಿದೆ. ತನ್ನ ಪತಿಯ ವರ್ತನೆಯಿಂದ ಬೇಸತ್ತು ಸುಪಾರಿ ಕೊಟ್ಟು ತನ್ನ ಪತಿಯನ್ನೇ ಕೊಲ್ಲಿಸಿದ ಪತ್ನಿ ಮತ್ತು ಆಕೆಯ ಪುತ್ರ ಸೇರಿ ಐವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹತ್ಯೆಯಾದ ವ್ಯಕ್ತಿ ಹೆಗ್ಗನಹಳ್ಳಿ ನಿವಾಸಿ 52 ವರ್ಷದ ಮೊಹಮ್ಮದ್ ಹಂಜಲ ಎಂದು...







