ಮುಸ್ಲಿಂ ಕಾಲೇಜು ವಿವಾದ ಬೆನ್ನಲ್ಲೇ ಮತ್ತೊಂದು ವಿವಾದ ; ಕೇಸರಿ ಕಾಲೇಜು ಬೇಕೆಂದು ಹಿಂದು ಸಂಘಟನೆಗಳ ಪಟ್ಟು – ಕಹಳೆ ನ್ಯೂಸ್
ಬೆಂಗಳೂರು: ಮುಸ್ಲಿಂ ಕಾಲೇಜು ವಿವಾದ ಬೆನ್ನಲ್ಲೇ ಮತ್ತೊಂದು ವಿವಾದ ಶುರುವಾಗಿದ್ದು, ನಮಗೆ ಕೇಸರಿ ಕಾಲೇಜು ಬೇಕು ಅಂತಾ ಹಿಂದು ಸಂಘಟನೆಗಳು ಪಟ್ಟು ಹಿಡಿದಿವೆ. ಮಾನ್ಯ ಮುಖ್ಯಮಂತ್ರಿಗಳೇ ನಿಮಗೆ ಬುದ್ಧಿ ಇದೇನ್ರೀ? ಯಾರ ವೋಟು ಪಡೆಯಲು ಈ ರೀತಿ ನಿಲುವುಗಳನ್ನು ತೆಗೆದುಕೊಳ್ಳುತ್ತಿದ್ದೀರಿ. ನಮ್ಮದು ಹಿಂದುತ್ವದ ಪಕ್ಷ, ಹಿಂದೂತ್ವಕ್ಕಾಗಿ ನಮ್ಮ ಉಸಿರು ಎಂದು ಹೇಳಿಕೊಂಡು ಬಂದಿರುವ ಭಾರತೀಯ ಜನತಾ ಪಕ್ಷದ ಮುಖ್ಯಮಂತ್ರಿಗಳಾಗಿ ಈ ರೀತಿ ನಿಲುವುಗಳನ್ನು ತೆಗೆದುಕೊಂಡರೆ ಅವರನ್ನು ನೀವೇ ಬೆಳೆಸಿದ ಹಾಗೆ ಆಗುತ್ತದೆ...







