ನೀತಿ ಸಂಹಿತೆ : ನೀವು ವಾಟ್ಸಾಪ್ ಅಡ್ಮಿನ್‌ಗಳೇ, ಹಾಗಿದ್ರೆ ಇರಲಿ ಎಚ್ಚರ..! – ಕಹಳೆ ನ್ಯೂಸ್
ಬೆಂಗಳೂರು, ಏ 01 : ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕ ನಿಗದಿಯಾದ ಬೆನ್ನಲ್ಲೇ ನೀತಿ ಸಂಹಿತೆಯೂ ಜಾರಿಯಾಗಿದೆ. ಇದರ ಬಿಸಿ ಸಾಮಾಜಿಕ ಜಾಲತಾಣಗಳಿಗೂ ತಟ್ಟಿದೆ. ಮತದಾನದ ದಿನಾಂಕ ಘೋಷಣೆಯಾದ ಬೆನ್ನಲ್ಲೇ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲು ಚುನಾವಣಾ ಆಯೋಗ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಇದರೊಂದಿಗೆ ಸಾಮಾಜಿಕ ಜಾಲತಾಣಗಳ ಮೇಲೆ ಚುನಾವಣೆ ಆಯೋಗ ಹದ್ದಿನ ಕಣ್ಣಿಟ್ಟಿದೆ.ಹೀಗಾಗಿ ನಿರ್ಧಿಷ್ಟ ಪಕ್ಷ ವ್ಯಕ್ತಿಯ ಪರ ಮತಯಾಚನೆಯ ಮತ್ತು ಒಲುವು ತೋರುವ ಸಂದೇಶಗಳು ಬಂದರೆ ,ಕಳಿಸಿದರೆ...







