ಕಾಶ್ಮೀರ: ನಾಪತ್ತೆಯಾಗಿದ್ದ ಎರಡನೇ ಪ್ಯಾರಾ-ಕಮಾಂಡೋನ ಮೃತದೇಹ ಪತ್ತೆ – ಕಹಳೆ ನ್ಯೂಸ್
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯ ಗಡೋಲ್ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ನಾಪತ್ತೆಯಾಗಿದ್ದ ಮತ್ತೊಬ್ಬ ಎಲೈಟ್ ಪ್ಯಾರಾ ಕಮಾಂಡೋನ ಮೃತದೇಹ ಪತ್ತೆಯಾಗಿದೆ. "ಅನಂತನಾಗ್ ಜಿಲ್ಲೆಯ ಕೊಕರ್ನಾಗ್ ಪ್ರದೇಶದ ಅರಣ್ಯಗಳಲ್ಲಿ ಭಯೋತ್ಪಾದಕರ ಪತ್ತೆಗಾಗಿ ನಡೆಯುತ್ತಿದ್ದ ಕೂಂಬಿಂಗ್ ಕಾರ್ಯಾಚರಣೆ ವೇಳೆ ಇಬ್ಬರು ಸೈನಿಕರು ನಾಪತ್ತೆಯಾಗಿದ್ದಾರೆ. ನಿನ್ನೆ ಒಬ್ಬರು ಪ್ಯಾರಾ ಕಮಾಂಡೋನ ಮೃತದೇಹವನ್ನು ಭದ್ರತಾ ಪಡೆ ಸಿಬ್ಬಂದಿ ವಶಪಡಿಸಿಕೊಂಡಿದ್ದರು. ಶೋಧ ಕಾರ್ಯಾಚರಣೆಯ ಸಮಯದಲ್ಲಿ ಇಂದು ಭದ್ರತಾ ಪಡೆ ಸಿಬ್ಬಂದಿ ಮತ್ತೊಬ್ಬ ಪ್ಯಾರಾ ಕಮಾಂಡೋನ...







