Friday, March 13, 2026

ರಾಜ್ಯ

ಜಿಲ್ಲೆಬೆಂಗಳೂರುರಾಜ್ಯಸುದ್ದಿ

 ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ‘ಪೋಷಕ -ಶಿಕ್ಷಕರ ಮಹಾಸಭೆ’ : ಎಲ್ಲರಿಗೂ ‘ಬಿಸಿಯೂಟ’ ನೀಡಲು ಶಿಕ್ಷಣ ಇಲಾಖೆ ಆದೇಶ.!-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯದ ಎಲ್ಲಾ ಶಾಲೆಗಳಲ್ಲಿ ನಾಳೆ ಪೋಷಕ -ಶಿಕ್ಷಕರ ಮಹಾಸಭೆ ನಡೆಯಲಿದ್ದು, ಎಲ್ಲರಿಗೂ ಬಿಸಿಯೂಟ ನೀಡಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ದಿನಾಂಕ 14.11.2025 ರಂದು ಸರ್ಕಾರದ ಆದೇಶದಂತೆ ಮಕ್ಕಳ ದಿನಾಚರಣೆ ಅಂಗವಾಗಿ ರಾಜ್ಯದ ಎಲ್ಲಾ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಪೋಷಕ-ಶಿಕ್ಷಕರ ಮಹಾಸಭೆಯನ್ನು ಆಯೋಜಿಸಲು ತಿಳಿಸಲಾಗಿದೆ. ಅದರಂತೆ ಸಭೆಗೆ ಹಾಜರಾಗುವ ಪೋಷಕರಿಗೆ ಮಕ್ಕಳಿಗೆ ಹಾಗೂ ಆಹ್ವಾನಿತರಿಗೆ ಬಿಸಿಯೂಟವನ್ನು ವಿತರಿಸಲು ತಿಳಿಸಿದೆ. ಈ ಸಂದರ್ಭದಲ್ಲಿ ಆಹಾರ ಸುರಕ್ಷತೆಯ...
ಬೆಂಗಳೂರುರಾಜ್ಯಸುದ್ದಿ

ಹುಲಿ’ ಬಂತು ಎಂದು AI ಫೋಟೋ, ವಿಡಿಯೋ ಹರಿಬಿಟ್ಟರೆ ಕಾನೂನು ಕ್ರಮ ಫಿಕ್ಸ್ : ‘ಅರಣ್ಯ ಇಲಾಖೆ’ ಎಚ್ಚರಿಕೆ – ಕಹಳೆ ನ್ಯೂಸ್

ಚಾಮರಾಜನಗರ: ಹುಲಿ' ಬಂತು ಎಂದು AI ಫೋಟೋ, ವಿಡಿಯೋ ಹರಿಬಿಟ್ಟರೆ ಕಾನೂನು ಕ್ರಮ ಫಿಕ್ಸ್ . ಹೌದು, ಈ ಬಗ್ಗೆ 'ಅರಣ್ಯ ಇಲಾಖೆ' ಎಚ್ಚರಿಕೆ ಸಂದೇಶ ನೀಡಿದೆ.ಚಾಮರಾಜನಗರ ಜಿಲ್ಲೆಯಲ್ಲಿ ಹುಲಿ ದಾಳಿ ಭೀತಿ ನಡುವೆಯೇ ಎಐ ತಂತಜ್ಞಾನ ಆಧಾರಿತ ಹುಲಿ ವಿಡಿಯೋಗಳು ಸಾರ್ವಜನಿಕರಲ್ಲಿ ಆತಂಕ ಹುಟ್ಟಿಸಿದೆ. ಹುಲಿ ಪ್ರತ್ಯಕ್ಷ ಎಂದು ಎಐ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಡಲಾಗಿದ್ದು, ಇಂತಹ ಕಿಡಿಗೇಡಿಗಳ ವಿರುದ್ಧ ಅರಣ್ಯ ಇಲಾಖೆ ಖಡಕ್ ವಾರ್ನಿಂಗ್ ನೀಡಿದೆ....
ದೆಹಲಿರಾಜ್ಯಸುದ್ದಿ

 ದೆಹಲಿ ಕೇಂಪು ಕೋಟೆ ಬಳಿ ಸ್ಫೋಟ ; ಸಂಜೆ ಪ್ರಧಾನಿ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ! – ಕಹಳೆ ನ್ಯೂಸ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ದೆಹಲಿಯ ಎಲ್‌ಎನ್‌ಜೆಪಿ ಆಸ್ಪತ್ರೆಗೆ ಆಗಮಿಸಿದ್ದು, ದೆಹಲಿ ಸ್ಫೋಟದಲ್ಲಿ ಗಾಯಗೊಂಡವರನ್ನ ಭೇಟಿಯಾಗಿ, ಆರೋಗ್ಯ ವಿಚಾರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇಂದು ಭೂತಾನ್‌'ನಿಂದ ದೆಹಲಿಗೆ ಮರಳಿದ್ದು, ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ತೆರಳಿದರು. ದೆಹಲಿ ಸ್ಫೋಟದಲ್ಲಿ ಗಾಯಗೊಂಡ ಸುಮಾರು 100 ಜನರನ್ನು ಚಿಕಿತ್ಸೆಗಾಗಿ ಎಲ್‌ಎನ್‌ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಮವಾರ ಸಂಜೆ ಇಡೀ ರಾಷ್ಟ್ರವನ್ನ ಬೆಚ್ಚಿಬೀಳಿಸಿದ ಮತ್ತು ಕನಿಷ್ಠ 12 ಜೀವಗಳನ್ನ ಬಲಿತೆಗೆದುಕೊಂಡ ಸ್ಫೋಟದ ನಂತರದ ಪರಿಸ್ಥಿತಿಯನ್ನ...
ಬೆಂಗಳೂರುರಾಜ್ಯಸುದ್ದಿ

ಜೈಲಿನಲ್ಲಿ ಕೈದಿಗಳ ಮೋಜು ಕಾಂಗ್ರೆಸ್‌ನ 6ನೇ ಗ್ಯಾರಂಟಿ: ನಿಖಿಲ್‌ ಕುಮಾರಸ್ವಾಮಿ – ಕಹಳೆ ನ್ಯೂಸ್

ಕೋಲಾರ: ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ರಾಜಾತಿಥ್ಯ ವಿಡಿಯೊ ನೋಡಿದ್ದೇನೆ. ಸರ್ಕಾರ ಯಾವ ರೀತಿ ನಡೆದುಕೊಳ್ಳುತ್ತಿದೆ ಎನ್ನುವುದಕ್ಕೆ ಇದೇ ಸಾಕ್ಷಿ. ಮಾತೆತ್ತಿದರೆ ಗ್ಯಾರಂಟಿ ಎನ್ನುತ್ತಾರೆ. ಕೈದಿಗಳ ಮೋಜು, ಮಸ್ತಿಗೆ ಕಾಂಗ್ರೆಸ್‌ನ ಮತ್ತೊಂದು ಗ್ಯಾರಂಟಿ ಕೊಟ್ಟಿದೆ ಎಂದು ಜೆಡಿಎಸ್‌ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ನಗರ ಹೊರವಲಯದಲ್ಲಿ ಮಂಗಳವಾರ ಮಂಗಮ್ಮ ಮುನಿಸ್ವಾಮಿ ಅವರ ಜನ್ಮದಿನದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, 'ಅನುದಾನ ತಾರತಮ್ಯ ಬರೀ ಜೆಡಿಎಸ್,...
ಅಂತಾರಾಷ್ಟ್ರೀಯರಾಜ್ಯರಾಷ್ಟ್ರೀಯಸುದ್ದಿ

ಜಾರ್ಜಿಯಾದಲ್ಲಿ ಟರ್ಕಿಯ ಸೇನಾ ವಿಮಾನ ಪತನ, 20 ಮಂದಿ ಸಾವು – ಕಹಳೆ ನ್ಯೂಸ್

ಅಂಕಾರಾ: ಟರ್ಕಿ ಸೇನೆಗೆ ಸೇರಿದ ಸರಕು ಸಾಗಾಣಿಕಾ ವಿಮಾನವೊಂದು ದುರಂತ ಪತನಕ್ಕೀಡಾಗಿದ್ದು, ವಿಮಾನದಲ್ಲಿದ್ದ 20 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಜರ್ಬೈಜಾನ್‌ನಿಂದ ಟರ್ಕಿಗೆ ವಾಪಸಾಗುತ್ತಿದ್ದ ಟರ್ಕಿ ಸೇನೆಯ C-130 ಸಾರಿಗೆ ವಿಮಾನ ಜಾರ್ಜಿಯಾದಲ್ಲಿ ಪತನವಾಗಿದೆ. ಈ ದುರಂತದಲ್ಲಿ ವಿಮಾನದಲ್ಲಿದ್ದ 20 ಮಂದಿ ಸಿಬ್ಬಂದಿ ಮತ್ತು ಪ್ರಯಾಣಿಕರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ. ಮೂಲಗಳ ಪ್ರಕಾರ ವಿಮಾನವು ಅಜೆರ್ಬೈಜಾನ್‌ನ ಗಂಜಾ ವಿಮಾನ ನಿಲ್ದಾಣದಿಂದ ಹೊರಟು ಟರ್ಕಿಗೆ ತೆರಳುತ್ತಿತ್ತು. ಜಾರ್ಜಿಯಾದ...
ಜಿಲ್ಲೆದೆಹಲಿಮೈಸೂರುರಾಜ್ಯಸುದ್ದಿ

ಪ್ರಧಾನಿ ಮೋದಿ ಜೊತೆಗಿನ ಅದ್ಭುತ ಸಂಬಂಧವನ್ನು ಶ್ಲಾಘಿಸಿದ ಟ್ರಂಪ್, ಭಾರತವನ್ನು ಅಮೇರಿಕಾದ ಪ್ರಮುಖ ಪಾಲುದಾರ ಎಂದ US ಅಧ್ಯಕ್ಷ – ಕಹಳೆ ನ್ಯೂಸ್

ನವದೆಹಲಿ: ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ "ಮುಖ್ಯ" ಆರ್ಥಿಕ ಮತ್ತು ಕಾರ್ಯತಂತ್ರದ ಪಾಲುದಾರನಾಗಿ ಭಾರತದ ಪಾತ್ರವನ್ನು ಎತ್ತಿ ತೋರಿಸುವ ಮೂಲಕ ತಮ್ಮ ದೇಶವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ "ಅದ್ಭುತ ಸಂಬಂಧ" ಹೊಂದಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ನಾವು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಅದ್ಭುತ ಸಂಬಂಧವನ್ನು ಹೊಂದಿದ್ದೇವೆ ಮತ್ತು ಸೆರ್ಗಿಯೋ (ಗೋರ್) ಅವರು ಈಗಾಗಲೇ ಪ್ರಧಾನಿಯೊಂದಿಗೆ ಸ್ನೇಹ ಬೆಳೆಸಿಕೊಂಡಿರುವುದರಿಂದ ಅದನ್ನು ಹೆಚ್ಚಿಸಿದ್ದಾರೆ" ಎಂದು ಟ್ರಂಪ್ ಸೋಮವಾರ ಓವಲ್ ಕಚೇರಿಯಲ್ಲಿ...
ಕ್ರೈಮ್ಬೆಂಗಳೂರುರಾಜ್ಯಸಿನಿಮಾಸುದ್ದಿ

ನಟ ಉಪೇಂದ್ರ ದಂಪತಿಗಳ ಮೊಬೈಲ್ ಹ್ಯಾಕ್ ಕೇಸ್ : ಆರೋಪಿಯ ಬಂಧನಕ್ಕೆ ತೆರಳಿದ ಪೊಲೀಸರಿಗೆ ಶಾಕ್!- ಕಹಳೆ ನ್ಯೂಸ್

ಬೆಂಗಳೂರು : ನಟ ಉಪೇಂದ್ರ ಮತ್ತು ಪ್ರಿಯಾಂಕಾ ಅವರ ಮೊಬೈಲ್ ಹ್ಯಾಕ್ ಪ್ರಕರಣ ಸಂಬಂಧ ಬಿಹಾರ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಬಿಹಾರ್ ಮೂಲದ ವಿಕಾಸ್ ಕುಮಾರ್ ಎಂದು ತಿಳಿದುಬಂದಿದೆ. ಆನ್‌ಲೈನ್ ಲಿಂಕ್ ಮೂಲಕ ಪ್ರಿಯಾಂಕಾ ಅವರ ವಾಟ್ಸಾಪ್ ಹ್ಯಾಕ್ ಮಾಡಿ, ಹಣ ವರ್ಗಾಯಿಸಲು ವಂಚಕರು ಸಂದೇಶ ಕಳುಹಿಸಿದ್ದರು. ಇನ್ನು, ಪೊಲೀಸರ ತನಿಖೆ ವೇಳೆ ಬಿಹಾರದಲ್ಲಿ ಒಂದೇ ಊರಿನ 150ಕ್ಕೂ ಹೆಚ್ಚು ಯುವಕರು ಸೈಬರ್ ಅಪರಾಧದಲ್ಲಿ ತೊಡಗಿರುವ...
ಬೆಂಗಳೂರುರಾಜ್ಯ

ಪರಪ್ಪನ ಅಗ್ರಹಾರ ಜೈಲಲ್ಲಿ ‘ಮದ್ಯ’ ಸೇವಿಸಿ ಡ್ಯಾನ್ಸ್ : ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ‘FIR’ ದಾಖಲು.!- ಕಹಳೆ ನ್ಯೂಸ್

ಬೆಂಗಳೂರು : ಪರಪ್ಪನ ಅಗ್ರಹಾರ ಜೈಲಲ್ಲಿ ಮದ್ಯ ಸೇವಿಸಿ ಡ್ಯಾನ್ಸ್ ಮಾಡಿದ ನಾಲ್ವರು ವಿಚಾರಣಾಧೀನ ಕೈದಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಧನಂಜಯ್, ಮಂಜುನಾಥ ಅಲಿಯಾಸ್ ಕೋಳಿ ಮಂಜ, ಚರಣ್ ರಾವ್, ಕಾರ್ತಿಕ್ ಸೇರಿ ನಾಲ್ವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ವಿಚಾರಣಾ ಕೈದಿಗಳು ಕೊಠಡಿ ಸಂಖ್ಯೆ 7 ರಲ್ಲಿ ಡ್ಯಾನ್ಸ್ ಮಾಡಿದ್ದರು. ಜೈಲಿನೊಳಗೆ ನಿಷೇಧಿತ ವಸ್ತುಗಳು ಕೂಡ ಪತ್ತೆಯಾಗಿತ್ತು. ಜೈಲಿನೊಳಗೆ...
1 41 42 43 44 45 272
Page 43 of 272