ಮಂಗಳೂರು ವಿವಿ ಪದವಿ ಪರೀಕ್ಷಾಂಗದ ನಿಯಮಗಳನ್ನು ಗಾಳಿಗೆ ತೂರಿದೆ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ; ಹರೀಶ್ ಆಚಾರ್ಯ ಆಗ್ರಹ – ಕಹಳೆ ನ್ಯೂಸ್
ಮಂಗಳೂರು : ವಿಶ್ವವಿದ್ಯಾನಿಲಯವು ಈ ಬಾರಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಪರೀಕ್ಷಾಂಗದ ನಿಯಮಾವಳಿಗಳನ್ನು ಗಾಳಿಗೆ ತೂರಿ ಅತ್ಯಂತ ಬೇಜಾವಾಬ್ದಾರಿಯಿಂದ ನಡೆಸಿದೆ. ತನ್ಮೂಲಕ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವನ್ನು ನಡೆಸಿದೆ. ಈ ಬಗ್ಗೆ ವಿವಿಯ ಆಡಳಿತವು ಉನ್ನತ ಮಟ್ಟದ ತನಿಖೆಯನ್ನು ನಡೆಸಿ ತಕ್ಷಣವೇ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಮಾಜಿ ಸಿಂಡಿಕೇಟ್ ಸದಸ್ಯರಾದ ಹರೀಶ್ ಆಚಾರ್ಯ ಒತ್ತಾಯಿಸಿದ್ದಾರೆ. ಪದವಿ ಪರೀಕ್ಷೆಯ ಯಾವುದೇ ವಿಭಾಗಗಳಲ್ಲಿ ಪರೀಕ್ಷಾ...







