ಹಿಂದು ಧರ್ಮ ಬಿಟ್ಟು ಕ್ರೈಸ್ತ ಧರ್ಮ ಪಾಲಿಸಿದರೆ ಮಾತ್ರ ನೀನು ನಿನ್ನ ಹೆಂಡತಿ- ಮಗು ನೋಡಬಹುದು ; ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡೋಕೆ ಯತ್ನಿ, ಚಿತ್ರದುರ್ಗದ ಹಿಂದು ಯುವಕ ಕಣ್ಣೀರು – ಕಹಳೆ ನ್ಯೂಸ್
ಹೊಸದುರ್ಗ(ಚಿತ್ರದುರ್ಗ): ನನ್ನ ಹೆಂಡ್ತಿ-ಮಗುವನ್ನೂ ನೋಡೋಕೆ ಬಿಡ್ತಿಲ್ಲ, ಮತಾಂತರ ಆದರಷ್ಟೇ ಮನೆಗೆ ಸೇರಿಸ್ತಾರಂತೆ… ದಯವಿಟ್ಟು ನನಗೆ ನ್ಯಾಯ ಕೊಡಿಸಿ, ಬಲವಂತವಾಗಿ ನನ್ನನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡೋಕೆ ಯತ್ನಿಸುತ್ತಿರುವ ನನ್ನ ಮಾವನ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹಿಂದು ಯುವಕನೊಬ್ಬ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಇಂತಹ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗದಲ್ಲಿ ಸಂಭವಿಸಿದೆ. ವಿಜಯನಗರದ ಹೊಸಪೇಟೆಯ ಅರವಿಂದನಗರ ಪಕ್ಕದ ಬುಡ್ಜ ಜಂಗಮ ಕಾಲನಿಯ ನಿವಾಸಿ ದೊಡ್ಡಮಾರಪ್ಪ ನೀಡಿದ ದೂರಿನ ಮೇರೆಗೆ ಈತನ...







