ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನದೀಪ ಕಾರ್ಯಕ್ರಮದಡಿ 10 ವರ್ಷಗಳಿಂದ 10 ಸಾವಿರ ಶಾಲೆಗಳಿಗೆ 65 ಸಾವಿರ ಜತೆ ಬೆಂಚ್-ಡೆಸ್ಕ್ ಹಸ್ತಾಂತರ ; ವ್ಯಕ್ತಿತ್ವ ವಿಕಸನ ಹಾಗೂ ಮಗುವೊಂದು ಸಂಸ್ಕಾರ ಯುಕ್ತ ಪ್ರಜೆಯಾಗಿ ಬಾಳಲು ಪ್ರಾಥಮಿಕ ಶಿಕ್ಷಣ ಅಡಿಪಾಯ : ಡಾ|ಡಿ. ವೀರೇಂದ್ರ ಹೆಗ್ಗಡೆ ಅಭಿಮತ – ಕಹಳೆ ನ್ಯೂಸ್
ಬೆಳ್ತಂಗಡಿ : ವ್ಯಕ್ತಿತ್ವ ವಿಕಸನ ಹಾಗೂ ಮಗುವೊಂದು ಸಂಸ್ಕಾರ ಯುಕ್ತ ಪ್ರಜೆಯಾಗಿ ಬಾಳಲು ಪ್ರಾಥಮಿಕ ಹಂತದ ಶಿಕ್ಷಣ ಅಡಿಪಾಯವಾಗಿದೆ. ಈ ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡುವ ಚತುರ್ದಾನಗಳೊಂದಿಗೆ ರಾಜ್ಯದ ಗ್ರಾಮೀಣ ಭಾಗಗಳ ಶಾಲೆಗಳಲ್ಲಿ ಪೀಠೊಪಕರಣ ಕೊರತೆಯನ್ನು ಮನಗಂಡು ಕಳೆದ 10 ವರ್ಷಗಳಿಂದ 10 ಸಾವಿರ ಶಾಲೆಗಳಿಗೆ 65 ಸಾವಿರ ಜತೆ ಬೆಂಚ್-ಡೆಸ್ಕ್ ಪೂರೈಸಲಾಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಶ್ರೀ ಕ್ಷೇತ್ರ...







