ದೆಹಲಿಯಲ್ಲಿ ಪುತ್ತೂರು ವಿಧಾನಸಭಾ ಕ್ಷೇತ್ರದ ಕೈ ಟಿಕೆಟ್ ಲಾಭಿ ; ಅಶೋಕ್ ರೈ, ದಿವ್ಯಾಪ್ರಭಾ ಗೌಡ, ಕಾವು ಹೇಮನಾಥ್ ಶೆಟ್ಟಿ ದೆಹಲಿಯಲ್ಲೇ ವಾಸ್ತವ್ಯ..! ಯಾರಿಗೆ ಕೈ ಬಿ’ಫಾರಂ..!?? – ಕಹಳೆ ನ್ಯೂಸ್
ಪುತ್ತೂರು : ವಿಧಾನಸಭಾ ಚುನಾವಣಾ ಕಾವು ರಂಗೇರುತ್ತಿದ್ದು, ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಗೆ ಭಾರಿ ಲಾಭಿ ನಡೆಯುತ್ತಿದೆ. ಕೈ ಟಿಕೇಟ್ ಆಕಾಂಕ್ಷಿ ನಾಯಕರು ದೆಹಲಿಯಲ್ಲೇ ಬೀಡು ಬಿಟ್ಟಿದ್ದು, ಯಾರತ್ತ ಹೈಕಮಾಂಡ್ ಚಿತ್ತ ಎಂಬುದು ಯಕ್ಷಪ್ರಶ್ನೆಯಾಗಿದೆ. ಅಶೋಕ್ ಕುಮಾರ್ ರೈ : ಪುತ್ತೂರಿನ ಉದ್ಯಮಿ, ಧಾರ್ಮಿಕ ಸಾಮಾಜಿಕ ಮುಂದಾಳು, ಕರ್ಣ ಎಂದೇ ಕರೆಯಲ್ಪಡುವ ರೈ, ಈ ಭಾರಿ ಬಿಜೆಪಿ ತೊರೆದು ಕಾಂಗ್ರೆಸ್ ಕೈ ಹಿಡಿದಿದ್ದು, ಟಿಕೆಟ್ ಗಾಗಿ ಲಾಭಿ...







