ದೆಹಲಿಯಲ್ಲಿ ಪೊಂಗಲ್ ಹಬ್ಬದಲ್ಲಿ ಭಾಗಿಯಾಗಿ ತಮಿಳರಿಗೆ ಶುಭಕೋರಿದ ಪ್ರಧಾನಿ ಮೋದಿ -ಕಹಳೆ ನ್ಯೂಸ್
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯಲ್ಲಿರುವ ಕೇಂದ್ರ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಹಬ್ಬದಲ್ಲಿ ಭಾಗಿಯಾಗಿ ತಮಿಳುನಾಡು ಮತ್ತು ವಿದೇಶದಲ್ಲಿರುವ ತಮಿಳರಿಗೆ ಪೊಂಗಲ್ ಶುಭಾಶಯ ಕೋರಿದ್ದಾರೆ. ಎಲ್.ಮುರುಗನ್ ಅವರ ನಿವಾಸದ ಪೊಂಗಲ್ ಆಚರಣೆಯಲ್ಲಿ ಅತಿಥಿಯಾಗಿ ಭಾಗಿಯಾದ ಪ್ರಧಾನಿ ಸ್ವತಃ ತಾವೇ ವಿಶೇಷ ಪೂಜೆ ಮಾಡಿ, ಪೊಂಗಲ್ ತಯಾರಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ರಾಮಮೋಹನ್ ನಾಯ್ಡು ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳಿಸೈ...







