SSLC Exam: ಇಂದಿನಿಂದ ರಾಜ್ಯಾದ್ಯಂತ SSLC ಪರೀಕ್ಷೆ ಆರಂಭ..! 8 ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳ ನೋಂದಣಿ – ಕಹಳೆ ನ್ಯೂಸ್
ಬೆಂಗಳೂರು: ವಿದ್ಯಾರ್ಥಿಗಳ ಪಾಲಿನ ಪ್ರಮುಖ ಘಟ್ಟಗಳಲ್ಲಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯೂ ಒಂದು. ವಿದ್ಯಾರ್ಥಿ ಸಮೂಹಕ್ಕೆ ಮಾತ್ರವಲ್ಲ ಅವರ ಪೋಷಕರು ಹಾಗೂ ಶಿಕ್ಷಕರಿಗೂ ಇದು ಅಗ್ನಿಪರೀಕ್ಷೆಯೇ ಹೌದು. ಇಂದಿನಿಂದ 2023-24ನೇ ಸಾಲಿನ ಎಸ್ಎಸ್ಎಲ್ಸಿ ಬೋರ್ಡ್ ಪರೀಕ್ಷೆ ಆರಂಭವಾಗಲಿದ್ದು, ಶಾಲಾ ಶಿಕ್ಷಣ ಇಲಾಖೆ ಸಹ ಸಜ್ಜಾಗಿದೆ. ಇದರ ಮಧ್ಯೆ ಖಾಸಗಿ ಶಾಲೆಗಳಿಂದ ಮತ್ತೊಂದು ಖ್ಯಾತೆ ಶುರುವಾಗಿದೆ. ಈ ಕುರಿತ ಒಂದು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ರಾಜ್ಯದಲ್ಲಿ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗಳು ಮುಕ್ತಾಯವಾದ ಬೆನ್ನಲ್ಲೇ...







