Monday, March 9, 2026

ರಾಜ್ಯ

ಬೆಂಗಳೂರುರಾಜ್ಯಸುದ್ದಿ

ಅಕ್ರಮ ಬಾಂಗ್ಲಾ ವಲಸಿಗರು ನೆಲೆಸಿದ್ದ ಶೆಡ್‌ಗಳು ಬೆಂಕಿಗಾಹುತಿ-ಕಹಳೆ ನ್ಯೂಸ್

ಬೆಂಗಳೂರು: ಸಿಲಿಂಡರ್ ಸ್ಫೋಟಗೊಂಡು ಅಕ್ರಮ ಬಾಂಗ್ಲಾದೇಶದ ವಲಸಿಗರು ನೆಲೆಸಿದ್ದ ಶೆಡ್‌ಗಳು ಬೆಂಕಿಗಾಹುತಿಯಾದ ಘಟನೆ ಬೆಂಗಳೂರು  ಹೊರವಲಯದ ಬೇಗೂರಿನ ಎಳೇನಹಳ್ಳಿಯಳ್ಳಿಯಲ್ಲಿರುವ ಡಂಪಿಂಗ್ ಯಾರ್ಡ್‌ನಲ್ಲಿ ನಡೆದಿದೆ. 5 ಎಕ್ರೆ ಜಾಗದಲ್ಲಿ ಅಕ್ರಮವಾಗಿ ನೆಲೆಸಿದ್ದ ಇವರನ್ನು ಕೆಲ ದಿನಗಳ ಹಿಂದೆ ಸ್ಥಳದಿಂದ ಖಾಲಿ ಮಾಡಲಾಗಿತ್ತು. ಆದರೆ ರಾತ್ರೋರಾತ್ರಿ ಮತ್ತೆ ವಲಸಿಗರು ಇಲ್ಲಿಗೆ ಆಗಮಿಸಿ ಶೆಡ್‌ ಹಾಕಿದ್ದರು. ತಡರಾತ್ರಿ ಸಿಲಿಂಡರ್ ಸ್ಫೋಟದಿಂದ ಶೆಡ್‌ಗಳು ಹೊತ್ತಿ ಉರಿದಿದ್ದು ಆಗಸದೆತ್ತರಕ್ಕೆ ಬೆಂಕಿಯ ಕೆನ್ನಾಲಿಗೆ ಚಾಚಿತ್ತು. ವಿಚಾರ ತಿಳಿದು ಸ್ಥಳಕ್ಕೆ...
ದೆಹಲಿರಾಜ್ಯಸುದ್ದಿ

ಸಶಸ್ತ್ರ ಪಡೆಗಳ ಸಿಬ್ಬಂದಿಗೆ ಸೇನಾ ದಿನಾಚರಣೆಯ ಶುಭಾಶಯ ಕೋರಿದ ಪ್ರಧಾನಿ ಮೋದಿ – ಕಹಳೆ ನ್ಯೂಸ್

ನವದೆಹಲಿ: ಸೇನಾ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಗುರುವಾರ ಭಾರತೀಯ ಸೇನೆಯ ಧೈರ್ಯ ಮತ್ತು ದೃಢವಾದ ಬದ್ಧತೆಗೆ ವಂದನೆ ಸಲ್ಲಿಸಿದ್ದಾರೆ. ಸೈನಿಕರು "ನಿಸ್ವಾರ್ಥ ಸೇವೆಯ ಸಂಕೇತವಾಗಿ, ದೃಢ ಸಂಕಲ್ಪದಿಂದ ರಾಷ್ಟ್ರವನ್ನು ರಕ್ಷಿಸುವ" ಸಂಕೇತವಾಗಿ ಹೇಗೆ ನಿಂತಿದ್ದಾರೆ ಎಂಬುದನ್ನು ಅವರು ನೆನಪಿಸಿಕೊಂಡರು. 78 ನೇ ಸೇನಾ ದಿನಾಚರಣೆಯ ಸಂದರ್ಭದಲ್ಲಿ, ಪ್ರಧಾನಿ ಮೋದಿ ಅವರು ಕರ್ತವ್ಯದ ವೇಳೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದವರನ್ನು ಸ್ಮರಿಸಿದರು. "ಸೇನಾ ದಿನದಂದು, ನಾವು ಭಾರತೀಯ ಸೇನೆಯ...
ಜಿಲ್ಲೆಬೆಂಗಳೂರುರಾಜ್ಯಸುದ್ದಿ

ಜ. 22 ರಿಂದ 31ರ ತನಕ ವಿಧಾನಮಂಡಲದ ಜಂಟಿ ಅಧಿವೇಶನ – ಕಹಳೆ ನ್ಯೂಸ್

ಬೆಂಗಳೂರು :  ಜ.22ರಿಂದ ಜ.31ರ ತನಕ ಅಧಿವೇಶನ ನಡೆಸಲು ತುರ್ತು ಸಚಿವ ಸಂಪುಟ ಸಭೆ ತೀರ್ಮಾನಿಸಿದೆ. ರಜಾ ದಿನಗಳನ್ನ ಹೊರತುಪಡಿಸಿ ಎಷ್ಟು ದಿನ ಅಧಿವೇಶನ ನಡೆಯಬೇಕು ಎಂಬುದನ್ನ ಸ್ಪೀಕರ್ ತೀರ್ಮಾನ ಮಾಡಲಿದ್ದಾರೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್ ಸ್ಪಷ್ಟಪಡಿಸಿದ್ದಾರೆ. ಎರಡೂವರೆ ಗಂಟೆಗಳಿಗೂ ಹೆಚ್ಚು ಕಾಲ ನಡೆದ ಸಚಿವ ಸಂಪುಟ ಸಭೆಯಲ್ಲಿ ಮನ್ರೇಗಾ ವರ್ಸಸ್ ವಿಕಸಿತ ಭಾರತ್ ಜಿರಾಮಜಿ ಕಾಯ್ದೆಗಳನ್ನು ಹೋಲಿಕೆ ಮಾಡಿ, ಸುದೀರ್ಘವಾಗಿ ಕ್ಯಾಬಿನೆಟ್‌ನಲ್ಲಿ ಚರ್ಚೆ...
ರಾಜ್ಯರಾಷ್ಟ್ರೀಯಸುದ್ದಿ

ಸುಕ್ಮಾ ಜಿಲ್ಲೆಯಲ್ಲಿ 29 ಮಂದಿ ನಕ್ಸಲರು ಮುಖ್ಯವಾಹಿನಿಗೆ -ಕಹಳೆ ನ್ಯೂಸ್

ಸುಕ್ಮಾ: ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ 29 ಮಂದಿ ನಕ್ಸಲರು ಮುಖ್ಯವಾಹಿನಿ ಸೇರಿದ್ದಾರೆ. ಈ ಶರಣಾಗತಿಯಲ್ಲಿ ಗೊಗುಂಡಾ ಪ್ರದೇಶದ ದಂಡಕಾರಣ್ಯ ಆದಿವಾಸಿ ಕಿಸಾನ್ ಮಜದೂರ್ ಸಂಘಟನೆಯ ನಾಯಕ ಪೊಡಿಯಂ ಬುದ್ರಾ ಸೇರಿದ್ದಾರೆ. ಇವರ ಮೇಲೆ 2 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. ಡಿಎಕೆಎಂಎಸ್ ಸದಸ್ಯರು, ಮಿಲಿಷಿಯಾ ಸಿಬ್ಬಂದಿ ಹಾಗೂ ಜನತಾನಾ ಸರ್ಕಾರ್‌ನ ಕಾರ್ಯಕರ್ತರು ಈ ಗುಂಪಿನಲ್ಲಿದ್ದರು. ಸುಕ್ಮಾ (Sukma) ಪೊಲೀಸ್ ವರಿಷ್ಠಾಧಿಕಾರಿ ಕಿರಣ್ ಚವಾನ್ ಅವರು ಮಾತನಾಡಿ, ರಾಜ್ಯ ಸರ್ಕಾರದ ಪೂನಾ...
ದೆಹಲಿರಾಜ್ಯಸುದ್ದಿ

ದೆಹಲಿಯಲ್ಲಿ ಪೊಂಗಲ್​ ಹಬ್ಬದಲ್ಲಿ ಭಾಗಿಯಾಗಿ ತಮಿಳರಿಗೆ ಶುಭಕೋರಿದ ಪ್ರಧಾನಿ ಮೋದಿ -ಕಹಳೆ ನ್ಯೂಸ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ದೆಹಲಿಯಲ್ಲಿರುವ ಕೇಂದ್ರ ಸಚಿವ ಎಲ್.ಮುರುಗನ್ ಅವರ ನಿವಾಸದಲ್ಲಿ ನಡೆದ ಪೊಂಗಲ್ ಹಬ್ಬದಲ್ಲಿ ಭಾಗಿಯಾಗಿ ತಮಿಳುನಾಡು ಮತ್ತು ವಿದೇಶದಲ್ಲಿರುವ ತಮಿಳರಿಗೆ ಪೊಂಗಲ್ ಶುಭಾಶಯ ಕೋರಿದ್ದಾರೆ. ಎಲ್​.ಮುರುಗನ್ ಅವರ ನಿವಾಸದ ಪೊಂಗಲ್ ಆಚರಣೆಯಲ್ಲಿ ಅತಿಥಿಯಾಗಿ ಭಾಗಿಯಾದ ಪ್ರಧಾನಿ ಸ್ವತಃ ತಾವೇ ವಿಶೇಷ ಪೂಜೆ ಮಾಡಿ, ಪೊಂಗಲ್ ತಯಾರಿಸಿದ್ದಾರೆ. ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಕಿಶನ್ ರೆಡ್ಡಿ, ರಾಮಮೋಹನ್ ನಾಯ್ಡು ಮತ್ತು ತೆಲಂಗಾಣದ ಮಾಜಿ ರಾಜ್ಯಪಾಲ ತಮಿಳಿಸೈ...
ಬೆಂಗಳೂರುರಾಜ್ಯಸುದ್ದಿ

ಲಾಲ್‌ಬಾಗ್ ಫ್ಲವರ್ ಶೋಗೆ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ : ಗಾಜಿನ ಮನೆ ಸುತ್ತ ಹೈ ಅಲರ್ಟ್- ಕಹಳೆ ನ್ಯೂಸ್

ಬೆಂಗಳೂರು: ಆರ್‌ಸಿಬಿ ಕಾಲ್ತುಳಿತ ದುರಂತದ ಎಫೆಕ್ಟ್ ಸದ್ಯ ಬೆಂಗಳೂರು ಪ್ರಸಿದ್ಧ ಲಾಲ್‌ಬಾಗ್ ಫ್ಲವರ್ ಶೋಗೂ ತಟ್ಟಿದೆ. ಈ ಬಾರಿಯೂ ಫ್ಲವರ್ ಶೋಗೆ ಲಕ್ಷಾಂತರ ಜನ ಸೇರುವ ಸಾಧ್ಯತೆ ಹಿನ್ನೆಲೆ, ಪೊಲೀಸ್ ಇಲಾಖೆ ಮತ್ತು ತೋಟಗಾರಿಗೆ ಇಲಾಖೆ ಭಾರೀ ಕಟ್ಟೆಚ್ಚರ ವಹಿಸಿದೆ. ಗಣರಾಜ್ಯೋತ್ಸವ ಹಿನ್ನೆಲೆ 219ನೇ ಫಲಪುಷ್ಪ ಪ್ರದರ್ಶನ ಚಾಲನೆಗೆ ಕ್ಷಣಗಣನೆ ಆರಂಭವಾಗಿದೆ. ಕಳೆದ ವರ್ಷದಂತೆ ಈ ಭಾರಿಯೂ ಲಕ್ಷಾಂತರ ಸಂಖ್ಯೆಯಲ್ಲಿ ಜನ ಸೇರುವ ಸಾಧ್ಯತೆ ಇದ್ದು, ಆರ್‌ಸಿಬಿ ಕಾಲ್ತುಳಿತದ ದುರಂತದ...
ಬೆಂಗಳೂರುರಾಜ್ಯಸುದ್ದಿ

AI ಯುವತಿಯ ಮೋಹಕ್ಕೆ ಬಿದ್ದು ಬಟ್ಟೆ ಬಿಚ್ಚಿ ಪೆಚ್ಚಾದ ಯುವಕ : 1.53 ಲಕ್ಷ ಲೂಟಿ- ಕಹಳೆ ನ್ಯೂಸ್

ಬೆಂಗಳೂರು: ಎಐ ಯುವತಿಯ ಮೋಹಕ್ಕೆ ಬಿದ್ದು ಯುವಕನೊಬ್ಬ ಒಂದೂವರೆ ಲಕ್ಷ ರೂ. ಹಣವನ್ನು ಕಳೆದುಕೊಂಡಿದ್ದಾನೆ. ಬೆಂಗಳೂರಿನ 26 ವರ್ಷದ ಯುವಕನೊಬ್ಬ Happn ಡೇಟಿಂಗ್ ಆ್ಯಪ್‌ನಲ್ಲಿ ಖಾತೆ ತೆರೆದಿದ್ದ. ಈ ಖಾತೆಗೆ ಇಶಾನಿ ಎಂಬ ಯುವತಿಯಿಂದ ಫ್ರೆಂಡ್‌ ರಿಕ್ವೆಸ್ಟ್‌ ಬಂದಿದೆ. ಬಳಿಕ ಮೊಬೈಲ್ ನಂಬರ್ ಶೇರ್ ಆಗಿ ಖಾಸಗಿ ವಿಚಾರಗಳನ್ನು ಚಾಟಿಂಗ್ ಮಾಡಿದ್ದರು. ಕೆಲದಿನಗಳ‌ ಹಿಂದೆ ಯುವತಿಯ ಮೊಬೈಲಿನಿಂದ ವಿಡಿಯೋ ಕಾಲ್ ಬಂದಿತ್ತು. ಆ ವಿಡಿಯೋ ಕಾಲ್‌ನಲ್ಲಿ ಯುವತಿ ಬೆತ್ತಲಾಗಿದ್ದಳು‌.‌ ನಂತರ...
ಬೆಂಗಳೂರುರಾಜ್ಯಶಿಕ್ಷಣಸುದ್ದಿ

SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಕೇಸ್‌ : 8 ಮಂದಿ ಅರೆಸ್ಟ್‌- ಕಹಳೆ ನ್ಯೂಸ್

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕರು , ವಿದ್ಯಾರ್ಥಿಗಳನ್ನು ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ. ಜನವರಿ 9 ರಂದು ಹಿಂದಿ ಪರೀಕ್ಷೆ ಇತ್ತು. ಆದರೆ ಜನವರಿ 8 ರಂದು ನಿರಂಜನ್ ಶೆಟ್ಟಿ ಹೆಸರಿನ ಯೂಟ್ಯೂಬ್‌ ಚಾನೆಲ್‌ನಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಸಂಬಂಧ ಪದವಿ ಪೂರ್ವ ಇಲಾಖೆಯ ಜಂಟಿ ನಿರ್ದೇಶಕ ರಾಜು ಅವರು ನೀರಿದ ದೂರಿನ ಹಿನ್ನೆಲೆಯಲ್ಲಿ ಉತ್ತರ ವಿಭಾಗದ ಸೈಬರ್...
1 12 13 14 15 16 271
Page 14 of 271