ಸುರತ್ಕಲ್ ನಲ್ಲಿ ಬಂದ್ ವಾತಾವರಣ : ಪಂಜಿಮೊಗರಿನಲ್ಲಿಂದು ಜಲೀಲ್ ದಫನ ಕ್ರಿಯೆ ; ಪೊಲೀಸ್ ಸರ್ಪಗಾವಲು, ರಾತ್ರಿ ಸಂಚಾರ ನಿಷೇಧ – ಕಹಳೆ ನ್ಯೂಸ್
ಸುರತ್ಕಲ್: ಇಲ್ಲಿನ ಕೃಷ್ಣಾಪುರದಲ್ಲಿ ತನ್ನ ಅಂಗಡಿಯಲ್ಲಿ ದುಷ್ಕರ್ಮಿಗಳ ಕೃತ್ಯಕ್ಕೆ ಬಲಯಾದ ಜಲೀಲ್ ಅವರ ಅಂತ್ಯಕ್ರಿಯೆ ಇಂದು ಕೂಳೂರು ಪಂಜಿಮೊಗರು ದಫನ ಭೂಮಿಯಲ್ಲಿ ನಡೆಯಲಿದೆ. ಮಂಗಳೂರಿನಲ್ಲಿ ಜಲೀಲ್ ಅವರ ಮರಣೋತ್ತರ ಪರೀಕ್ಷೆ ನಡೆದಿದ್ದು, ನಂತರ ಪಾರ್ಥೀವ ಶರೀರವನ್ನು ಕೃಷ್ಣಾಪುರ 9ನೇ ಬ್ಲಾಕ್ ಮನೆಗೆ ತಂದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ವರದಿಯಾಗಿದೆ. ಇದರ ಬಳಿಕ ಕೂಳೂರು ಪಂಜಿಮೊಗರಿನಲ್ಲಿ ಸಕಲ ವಿಧಿವಿಧಾನಗಳೊಂದಿಗೆ ದಫನ ಕ್ರಿಯೆ ನಡೆಯಲಿದೆ. ಪೊಲೀಸ್ ಸರ್ಪಗಾವಲು: ಮಂಗಳೂರು ನಗರ ಪೊಲೀಸ್...







