ಕಾಂಗ್ರೆಸ್ ಮರಿರೌಡಿಗಳ ಅಟ್ಟಹಾಸಕ್ಕೆ ಉತ್ತರಿಸಲು ನಾವು ಸಿದ್ದರಿದ್ದೇವೆ ; ಪುತ್ತೂರು ಕಾಂಗ್ರೆಸ್ ಶಾಸಕರ ಬೆಂಬಲಿಗರ ಗೂಂಡಾ ವರ್ತನೆ ಘಟನೆಗೆ ಬ್ರಿಜೇಶ್ ಚೌಟ ಆಕ್ರೋಶ – ಕಹಳೆ ನ್ಯೂಸ್
ಕಾಂಗ್ರೆಸ್ ನ ಗೂಂಡಾಗಿರಿ ವರ್ತನೆಯನ್ನು ಸಹಿಸಲು ಸಾಧ್ಯವಿಲ್ಲ- ಕ್ಯಾಪ್ಟನ್ ಬ್ರಿಜೇಶ್ ಚೌಟ ಪುತ್ತೂರು : ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರ ಮೇಲಿನ ಕಾಂಗ್ರೆಸ್ ಗೂಂಡಾಗಿರಿ ಖಂಡನೀಯ. ಪುತ್ತೂರಿನ ಶಾಸಕರ 1400 ಕೋಟಿಯ ಅನುದಾನದ ಬಗ್ಗೆ ಮಾಹಿತಿ ಕೇಳಿದ ಬಿಜೆಪಿ ಕಾರ್ಯಕರ್ತ ಜಯಾನಂದ ಬಂಗೇರರ ಮನೆಗೆ ನುಗ್ಗಿ ದಾಂದಲೆ ನಡೆಸಿರುವ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ತಾನು 1400 ಕೋಟಿಯ ಅನುದಾನ ತಂದಿದ್ದೇನೆ ಎಂದು ಹೇಳುವ ಶಾಸಕರಿಗೆ ಆ ಬಗ್ಗೆ ಮಾಹಿತಿ ನೀಡಲು...







