ಗೋಮಾಂಸ ಬೆರೆತ ಸಮೋಸಾ ಮಾರಾಟ ; ‘ಹುಸೈನಿ ಸಮೋಸಾ’ ಅಂಗಡಿಯ ಮೇಲೆ ದಾಳಿ, ಮಾಲೀಕರಾದ ಯೂಸೂಫ್ ಶೇಖ್, ನಯೀಮ್ ಶೇಖ್ ಸೇರಿದಂತೆ 6 ಮಂದಿಯ ಬಂಧನ – ಕಹಳೆ ನ್ಯೂಸ್
ಗಾಂಧಿನಗರ: ಗ್ರಾಹಕರಿಗೆ ತಿಳಿಯದಂತೆ ಗೋಮಾಂಸ ಸೇರಿಸಿದ ಸಮೋಸಾ ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸುಮಾರು 6 ಮಂದಿಯನ್ನು ಗುಜರಾತ್ನ ವಡೋದರಾದಲ್ಲಿ ಬಂಧಿಸಲಾಗಿದೆ. ನಿಖರ ಮಾಹಿತಿ ಪಡೆದ ಪೊಲೀಸರು ಶನಿವಾರ (ಏಪ್ರಿಲ್ 6) ಚಿಪ್ವಾಡ್ ಪ್ರದೇಶದಲ್ಲಿರುವ ಪ್ರಸಿದ್ಧ 'ಹುಸೈನಿ ಸಮೋಸಾ' ಅಂಗಡಿಯ ಮೇಲೆ ದಾಳಿ ನಡೆಸಿ ಗೋಮಾಂಸ ತುಂಬಿದ್ದ ನೂರಾರು ಕಿಲೋಗ್ರಾಂ ಸಮೋಸಾವನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ ಮಳಿಗೆ ಮಾಲೀಕರೂ ಇದ್ದಾರೆ ಎಂದು ಮೂಲಗಳು ತಿಳಿಸಿವೆ. ಘಟನೆ ವಿವರ ಸಮೋಸಾ ಒಳಗೆ ಗೋಮಾಂಸವನ್ನು...







