ಮಂಗಳೂರಿನ ಕುಂಪಲದ ಬಾಡಿಗೆ ಮನೆಯಲ್ಲಿ ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ಮೊಹಮ್ಮದ್ ರಝೀನ್ ಬಂಧನ – ಕಹಳೆ ನ್ಯೂಸ್
ಮಂಗಳೂರು, ಜ.02 : ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಓರ್ವನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಅನಜೂರು ಗ್ರಾಮದ ಮೊಹಮ್ಮದ್ ರಝೀನ್(25) ಎಂದು ಗುರುತಿಸಲಾಗಿದೆ. ಆರೋಪಿ ಅಪ್ರಾಪ್ತೆ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಮಂಗಳೂರಿನ ಪಂಪ್ವೆಲ್ಗೆ ಬಸ್ಸಿನಲ್ಲಿ ಬರಮಾಡಿಕೊಂಡು ಬಳಿಕ ಆಟೋದಲ್ಲಿ ಕುಂಪಲದ ಬಾಡಿಗೆ ಮನೆಗೆ ಕರೆದುಕೊಂಡು ಹೋಗಿ ಮದುವೆ ಯಾಗುತ್ತೇನೆ ಎಂದು ಹೇಳಿ ಅಪ್ರಾಪ್ತೆ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ...







