ಟೇಕ್ ಆಫ್ ಆದ ಬೆನ್ನಲ್ಲೇ ನೆಲಕ್ಕುರುಳಿ ಸುಟ್ಟು ಭಸ್ಮವಾದ ವಿಮಾನ ; ಅಹಮದಾಬಾದ್ ದುರಂತ ಮರೆಯುವ ಮುನ್ನ ಮತ್ತೊಂದು ಅವಘಡ-ಕಹಳೆ ನ್ಯೂಸ್
ಕ್ಯಾರಕಾಸ್, ಅ. 25: ಜೂನ್ 12ರಂದು ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ವಿಮಾನ ದುರಂತ ಮಾಸುವ ಮುನ್ನವೇ ಅಂತಹದ್ದೇ ಮತ್ತೊಂದು ಅವಘಡ ನಡೆದಿದೆ. ವೆನೆಜುವೆಲಾದ ತಾಚಿರಾ ರಾಜ್ಯದ ಪಾರಾಮಿಲ್ಲೊ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಪಿಎ-31ಟಿ1 (PA-31T1) ಲಘು ವಿಮಾನ ಕೆಲವೇ ಕ್ಷಣಗಳಲ್ಲಿ ನೆಲಕ್ಕುರುಳಿದ್ದು, ಬೆಂಕಿ ಕಾಣಿಸಿಕೊಂಡು ಸುಟ್ಟು ಕರಕಲಾಗಿದೆ. ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಸದ್ಯ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅವಳಿ ಎಂಜಿನ್ ಹೊಂದಿರುವ ಪೈಪರ್ ಪಿಎ-31ಟಿ1...





