Friday, March 13, 2026

ಸುದ್ದಿ

ಸುದ್ದಿ

ಭಾರತಕ್ಕೆ ಮರಳಿದರೆ ಮಾತ್ರ ಅರ್ಜಿ ವಿಚಾರಣೆ : ವಿಜಯ್‌ ಮಲ್ಯಗೆ ಬಾಂಬೆ ಹೈಕೋರ್ಟ್‌ ಕೊನೆಯ ಎಚ್ಚರಿಕೆ- ಕಹಳೆ ನ್ಯೂಸ್

ಮುಂಬೈ: ಭಾರತಕ್ಕೆ ಆಗಮಿಸಿದರೆ ಮಾತ್ರ ಅರ್ಜಿ ವಿಚಾರಣೆ ನಡೆಸಲಾಗುವುದು ಎಂದು ಉದ್ಯಮಿ ವಿಜಯ್‌ ಮಲ್ಯಗೆ  ಬಾಂಬೆ ಹೈಕೋರ್ಟ್‌  ಕೊನೆಯ ಎಚ್ಚರಿಕೆ ನೀಡಿದೆ. ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ನ್ಯಾಯಮೂರ್ತಿ ಗೌತಮ್ ಅಂಕಡ್ ಅವರ ಪೀಠವು ಆರ್ಥಿಕ ಅಪರಾಧಿಗಳ ಕಾಯ್ದೆ (FEOA) ಸಾಂವಿಧಾನಿಕ ಸಿಂಧುತ್ವ ಮತ್ತು ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು ಘೋಷಿಸುವ ಪ್ರಕ್ರಿಯೆಯನ್ನು ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಮಲ್ಯ ಅವರು ಭಾರತಕ್ಕೆ ...
ಸುದ್ದಿ

ಚಲಿಸುತ್ತಿದ್ದ ಓಮ್ನಿ ಕಾರಿನಲ್ಲಿ ದಿಢೀರ್ ಕಾಣಿಸಿಕೊಂಡ ಬೆಂಕಿ : ಹಿಂಬದಿ ವಾಹನ ಸವಾರನ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾದ ಓಮ್ನಿ ಚಾಲಕ – ಕಹಳೆ ನ್ಯೂಸ್

ಉಳ್ಳಾಲ : ಚಲಿಸುತ್ತಿದ್ದ ಓಮ್ಮಿ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದ್ದು, ಹಿಂಬದಿ ವಾಹನ ಸವಾರ ಅಪಾಯದ ಮುನ್ಸೂಚನೆ ನೀಡಿದ ಪರಿಣಾಮ ಓಮ್ಮಿ ಚಾಲಕ ಪ್ರಾಣಾಪಾಯದಿಂದ ಪಾರಾದ ಘಟನೆ ರಾ.ಹೆ 66 ರ ಕೋಟೆಕಾರು ಅಡ್ಡ ಎಂಬಲ್ಲಿ ನಡೆದಿದೆ. ತಲಪಾಡಿ ನಿವಾಸಿ ರಿಯಾಝ್ ಎಂಬವರು ಗುರುವಾರ ಮಧ್ಯಾಹ್ನ ಅಡ್ಕದ ಗ್ಯಾರೇಜ್ ಒಂದರಲ್ಲಿ ದುರಸ್ತಿಗೊಳಿಸಲಾಗಿದ್ದ ತನ್ನ ಓಮ್ಮಿ ಕಾರನ್ನ ವಾಪಸು ಪಡೆದು ಪೆಟ್ರೋಲ್ ತುಂಬಿಸಿ ತಲಪಾಡಿಯತ್ತ ಪ್ರಯಾಣಿಸುತ್ತಿದ್ದ ವೇಳೆ ಕಾರಲ್ಲಿ ಹೊಗೆ ಕಾಣಿಸಿಕೊಂಡಿದೆ....
ಸುದ್ದಿ

ಕೇಪು ಕೋಳಿ ಅಂಕ ಮಾಡಿಸಿದ ಪ್ರಕರಣ; ಶಾಸಕ ಅಶೋಕ್ ಕುಮಾರ್ ರೈ ಮೇಲಿನ ಕೇಸಿಗೆ ಹೈಕೋರ್ಟು ತಡೆಯಾಜ್ಞೆ – ಕಹಳೆ ನ್ಯೂಸ್

ಪುತ್ತೂರು: ಕೆಲದಿನಗಳ ಹಿಂದೆ ಕೇಪು ಶ್ರೀ ದುರ್ಗಾಪರಮೇಶ್ವರಿ ( ಉಳ್ಳಾಲ್ತಿ ಅಮ್ಮನವರ) ವಾರ್ಷಿಕ ಜಾತ್ರೋತ್ಸವದಲ್ಲಿ ಕೋಳಿ ಅಂಕ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪುತ್ತೂರು ಶಾಸಕ ಅಶೋಕ್ ಸೇರಿದಂತೆ ಸುಮಾರು 20 ಮಂದಿಯ ವಿರುದ್ದ ವಿಟ್ಲ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಹೈಕೋರ್ಟು ತಡೆಯಾಜ್ಞೆ ನೀಡಿ ಇಂದು ಆದೇಶ ನೀಡಿದೆ. ಸುಮಾರು 800 ವರ್ಷಗಳ ಐತಿಹ್ಯ ಇರುವ ಕೇಪು ಉಳ್ಳಾಲ್ತಿ ಅಮ್ಮನವರ ಜಾತ್ರೋತ್ಸವದ ಬಳಿಕ ಪ್ರತೀ ವರ್ಷ ಮೂರು ದಿನ ಜೂಜು ರಹಿತ ಕೋಳಿ...
ಸುದ್ದಿ

114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್!- ಕಹಳೆ ನ್ಯೂಸ್

ನವದೆಹಲಿ : ಫ್ರಾನ್ಸ್‌ನಿಂದ 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಸರ್ಕಾರ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್ ನೇತೃತ್ವದ ರಕ್ಷಣಾ ಸ್ವಾಧೀನ ಮಂಡಳಿ (DAC) ಗುರುವಾರ 114 ರಫೇಲ್ ಯುದ್ಧ ವಿಮಾನಗಳ ಖರೀದಿಗೆ ಅನುಮೋದನೆ ನೀಡಿದೆ. ಈ ಒಪ್ಪಂದವು ಭಾರತೀಯ ವಾಯುಪಡೆಯ ಸಾಮರ್ಥ್ಯಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಈ ತಿಂಗಳು ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಈ ಭೇಟಿಯ ಸಮಯದಲ್ಲಿ, ಭಾರತ ಮತ್ತು ಫ್ರಾನ್ಸ್...
ಸುದ್ದಿ

ತಾಳಗುಪ್ಪ – ಬೆಂಗಳೂರು ರೈಲಿನಲ್ಲಿ ತಲ್ವಾರ್ ಹಿಡಿದು ದರೋಡೆ- ಕಹಳೆ ನ್ಯೂಸ್

ಶಿವಮೊಗ್ಗ: ತಾಳಗುಪ್ಪದಿಂದ  ಬೆಂಗಳೂರಿಗೆ  ತೆರಳುತ್ತಿದ್ದ ರೈಲಿನಲ್ಲಿ ದರೋಡೆಕೋರನೊಬ್ಬ ತಲ್ವಾರ್ ಹಿಡಿದು ಬೋಗಿಯೊಳಗೆ ನುಗ್ಗಿ ದಾಂಧಲೆ ನಡೆಸಿರುವ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ವಿದ್ಯಾನಗರದಲ್ಲಿರುವ (ಮಹಾದೇವಿ ಟಾಕೀಸ್​) ಹಳೆ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಮಂಗಳವಾರ ರಾತ್ರಿ (ಫೆ.10) ರಾತ್ರಿ 11 ಗಂಟೆ 50 ನಿಮಿಷಕ್ಕೆ ಶಿವಮೊಗ್ಗದಿಂದ ಹೊರಡಬೇಕಿದ್ದ ರೈಲು ತಡವಾಗಿ ಆಗಮಿಸಿತ್ತು. ರೈಲು ವಿದ್ಯಾನಗರದ ಹಳೆ ನಿಲ್ದಾಣಕ್ಕೆ ಬರುತ್ತಿದ್ದಂತೆ ಬೋಗಿಯೊಳಗೆ ನುಗ್ಗಿದ ಆಗಂತುಕ, ಕೈಯಲ್ಲಿ ಮಾರಕಾಸ್ತ್ರ ಹಿಡಿದು ಪ್ರಯಾಣಿಕರನ್ನು ಹೆದರಿಸಿದ್ದಾನೆ....
ಸುದ್ದಿ

ಅಮೆರಿಕದಲ್ಲಿ ಅಪಘಾತ : ಸಾವಿಗೀಡಾಗಿದ್ದ ಭಾರತದ ವಿದ್ಯಾರ್ಥಿನಿ ಕುಟುಂಬಕ್ಕೆ 260 ಕೋಟಿ ಪರಿಹಾರ- ಕಹಳೆ ನ್ಯೂಸ್

ಸಿಯಾಟಲ್‌: 2023 ರಲ್ಲಿ ಅಮೆರಿಕದ ಸಿಯಾಟಲ್‌ ನಗರದಲ್ಲಿ ನಡೆದಿದ್ದ ಭೀಕರ ಕಾರು ಅಪಘಾತದಲ್ಲಿ  ಸಾವಿಗೀಡಾಗಿದ್ದ ಆಂಧ್ರಪ್ರದೇಶ ಮೂಲದ ಯುವತಿ ಜಾಹ್ನವಿ ಕಂದುಲಾ (23) ಕುಟುಂಬಕ್ಕೆ 260 ಕೋಟಿ ರೂ. ಪರಿಹಾರ ನೀಡುವಂತೆ ಅಲ್ಲಿನ ನ್ಯಾಯಾಲಯ ಆದೇಶಿಸಿದೆ. ಕ್ರಾಸ್‌ವಾಕ್‌ನಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಪೊಲೀಸ್‌ ಕಾರೊಂದು ಜಾಹ್ನವಿ ಕಂದುಲಾ ಅವರಿಗೆ ಡಿಕ್ಕಿ ಹೊಡೆದಿತ್ತು. ಕಾರಿನ ಡಿಕ್ಕಿ ರಭಸಕ್ಕೆ ಜಾಹ್ನವಿ ಕಂದುಲಾ ಅವರು 137 ಅಡಿ ಎತ್ತರಕ್ಕೆ ಹಾರಿ ರಸ್ತೆಬದಿ...
ಸುದ್ದಿ

‘ವ್ಯಾಲೆಂಟೈನ್ ಡೇ’ ಹೆಸರಿನಲ್ಲಿ ನಡೆಯುವ ಅನಾಚಾರಗಳನ್ನು ತಡೆಯಲು ತಕ್ಷಣ ಕ್ರಮಕೈಗೊಳ್ಳಿ! ಹಿಂದೂ ಜನಜಾಗೃತಿ ಸಮಿತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ- ಕಹಳೆ ನ್ಯೂಸ್ 

ಮಂಗಳೂರು: ಫೆಬ್ರವರಿ 14ರಂದು ‘ವ್ಯಾಲೆಂಟೈನ್ ಡೇ’ ಆಚರಿಸುವ ಪಾಶ್ಚಾತ್ಯರ ಕೆಟ್ಟ ರೂಢಿ ಭಾರತದಲ್ಲಿಯೂ ವ್ಯಾಪಕವಾಗಿ ಹರಡಿದೆ. ಪಾಶ್ಚಾತ್ಯರು ತಮ್ಮ ವ್ಯಾವಹಾರಿಕ ಲಾಭಕ್ಕಾಗಿ ಪ್ರೇಮದ ಹೆಸರಿನಲ್ಲಿ ಈ ವಿಕೃತ ಕಲ್ಪನೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ ಯುವಪೀಳಿಗೆ ಭೋಗವಾದ ಮತ್ತು ಅನೈತಿಕತೆಯತ್ತ ಸಾಗುತ್ತಿದೆ. ‘ವ್ಯಾಲೆಂಟೈನ್ ಡೇ’ ಹಿನ್ನೆಲೆಯಲ್ಲಿ ಯುವತಿಯರ ಮೇಲಿನ ಕಿರುಕುಳ ಹಾಗೂ ಹಲವಾರು ಹಿಂಸಾತ್ಮಕ ಘಟನೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಈ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಚುನಾವಣಾ...
ಸುದ್ದಿ

ಮುಂಬೈ ರಸ್ತೆ ಮೇಲೆ ವಾಹನಗಳು ಚಲಿಸಿದಾಗ ‘ಜೈ ಹೋ’ ಹಾಡು : ದೇಶದ ಮೊದಲ ಮ್ಯೂಸಿಕಲ್ ರಸ್ತೆ ಮುಂಬೈನಲ್ಲಿ ಉದ್ಘಾಟನೆ – ಕಹಳೆ ನ್ಯೂಸ್

ಮುಂಬೈನಲ್ಲಿ ದೇಶದ ಮೊದಲ ಮ್ಯೂಸಿಕಲ್ ರಸ್ತೆ ನಿರ್ಮಿಸಲಾಗಿದ್ದು, ಈ ರಸ್ತೆ ಮೇಲೆ ವಾಹನಗಳು ಚಲಿಸಿದಾಗ ‘ಜೈ ಹೋ’ ಹಾಡು ಕೇಳಿಸುತ್ತದೆ. ಮುಂಬೈ ಕರಾವಳಿ ರಸ್ತೆಯಲ್ಲಿ ಸ್ಥಾಪಿತವಾದ ಈ ವಿಶೇಷ ರಸ್ತೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಉಪಮುಖ್ಯಮಂತ್ರಿ ಏಕನಾಥ್ ಶಿಂಧೆ ಉಪಸ್ಥಿತರಿದ್ದರು. ಈ ಕಲ್ಪನೆಯನ್ನು ಮೊದಲು ಮಾಜಿ ಸಂಸದ ರಾಹುಲ್ ಶೇವಾಲೆ ಪ್ರಸ್ತಾಪಿಸಿದ್ದರು. ವಾಹನಗಳು ನಿಗದಿತ ವೇಗದಲ್ಲಿ ಸಾಗುವಾಗ ಮಾತ್ರ ಈ ಹಾಡು ಕೇಳಿಸಲಿದೆ. ನಾರಿಮನ್ ಪಾಯಿಂಟ್‌ನಿಂದ ವರ್ಲಿಗೆ...
1 36 37 38 39 40 3,290
Page 38 of 3290