ದಿಪಾವಳಿಗೆ ಜಿ.ಎಸ್.ಟಿ. ಗಿಫ್ಟ್ ನೀಡಿದ ಮೋದಿ ಸರಕಾರ.!
ನವದೆಹಲಿ: ದೀಪಾವಳಿ ಹಬ್ಬಕ್ಕೆ ಕೆಲದಿನ ಮುನ್ನವೇ ಕೇಂದ್ರ ಸರ್ಕಾರ ದೇಶದ ಜನತೆಗೆ ಉಡುಗೊರೆ ನೀಡಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ನೇತೃತ್ವದಲ್ಲಿ ನಡೆದ ಸರಕು ಹಾಗೂ ಸೇವಾ ತೆರಿಗೆ (ಜಿಎಸ್ಟಿ) ಸಭೆಯಲ್ಲಿ ಹಲವು ದಿನಬಳಕೆಯ ವಸ್ತು ಸಹಿತ 27 ಬಗೆಯ ಸರಕುಗಳ ಮೇಲಿನ ತೆರಿಗೆ ಇಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ ಆರ್ಥಿಕ ಪ್ರಗತಿಗೆ ಒತ್ತು ನೀಡುವ ಉದ್ದೇಶದಿಂದ ರಫ್ತುದಾರರು ಹಾಗೂ ಸಣ್ಣ ಉದ್ದಿಮೆದಾರರಿಗೂ ಬಂಪರ್ ಕೊಡುಗೆ ನೀಡಲಾಗಿದೆ. ಜಿಎಸ್ಟಿ ದರ...







