Thursday, March 12, 2026

ಸುದ್ದಿ

ಸುದ್ದಿ

ರೋಷನ್ ಬೇಗ್ ಒಬ್ಬ ದೇಶದ್ರೋಹಿ – ಹರೀಶ್ ಪೂಂಜಾ.

ಮಂಗಳೂರು : ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಪ್ರಧಾನಿ ಮೋದಿ ವಿರುದ್ಧ ಸಚಿವ ರೋಷನ್ ಬೇಗ್ ರೋಷಾವೇಶದ ಮಾತುಗಳನ್ನಾಡಿದ್ದಾರೆ. ಅಧಿಕಾರಕ್ಕೆ ಬಂದ ಬಳಿಕ ಎಲ್ಲರೂ 'ನಮ್ಮ ಮೋದಿ ನಮ್ಮ ಮೋದಿ' ಅಂತ ಹೊಗಳುತ್ತಿದ್ದರು. ಅಧಿಕಾರಕ್ಕೆ ಕೂಡಿಸಿದ ಜನರೇ ಈಗ ಮೋದಿಯನ್ನು ಶಪಿಸುತ್ತಿದ್ದಾರೆ ಎಂದು ಸಚಿವರು ಹೇಳಿದ್ದಾರೆ. "ನೋಟ್ ಬ್ಯಾನ್ ಮಾಡಿದ ಮೇಲೆ ಏನಾಯ್ತು? ಜನರು 'ಈ ಸೂ.. ಮಗ ಏನೆಲ್ಲಾ ಮಾಡಿಬಿಟ್ಟ' ಎಂದು ಬೈಯುತ್ತಿದ್ದಾರೆ" ಎಂದು ರೋಷನ್ ಬೇಗ್ ಹೇಳಿಕೆ...
ಸುದ್ದಿ

399 ರೂ.ರಿಚಾರ್ಜ್ ಮಾಡಿಸಿದರೆ 100% ಕ್ಯಾಶ್ ಬ್ಯಾಕ್: ಜಿಯೋ ದೀಪಾವಳಿ ಬಂಪರ್ ಆಫರ್.

ಉಚಿತ ಕೊಡುಗೆಗಳ ಮೂಲಕ ದೂರ ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿ ಮಾಡುತ್ತಿರುವ ರಿಲಾಯನ್ಸ್ ಒಡೆತನದ ಜಿಯೊ ಈ ಬಾರಿಯ ದೀಪಾವಳಿಗೆ ಭರ್ಜರಿ ಕೊಡುಗೆ ಪ್ರಕಟಿಸಿದೆ.ಕ್ಟೋಬರ್ 12ರಿಂದ 18ರವರೆಗೆ 399ರೂ.ಗೆ ರೀಚಾರ್ಜ್ ಮಾಡಿಸಿದರೆ ಶೇ.100ರಷ್ಟು ಹಣ ವಾಪಸ್ ದೊರೆಯಲಿದೆ. ದೀವಾಳಿ ಧನ್ ಧನಾ ಧನ್ ಹೆಸರಿನಲ್ಲಿ ಹೊಸ ಕೊಡುಗೆ ಪ್ರಕಟಿಸಲಾಗಿದ್ದು, 399 ರೂ. ರಿಚಾರ್ಜ್ ಮಾಡಿಸಿದರೆ ತಲಾ 50ರೂ. ನಂತೆ 8 ಬಾರಿ ಕ್ಯಾಶ್ ಬ್ಯಾಕ್ ಪಡೆಯಬಹುದು. ತಲಾ 50 ರೂ.ನ 8...
ಸುದ್ದಿ

ಡಿವಿಎಸ್‌ ವಿರುದ್ಧದ ಪ್ರಕರಣ ರದ್ದು! ಡಿವಿಎಸ್ ಗೆ ಬಿಗ್ ರಿಲೀಫ್!

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ ಪ್ರಕರಣ ಸಂಬಂಧ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ವಿರುದ್ಧ ಅಧೀನ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣೆಯನ್ನು ಹೈಕೋರ್ಟ್‌ ಬುಧವಾರ ರದ್ದುಗೊಳಿಸಿದೆ. ಅಧೀನ ನ್ಯಾಯಾಲಯದ ವಿಚಾರಣೆ ರದ್ದುಕೋರಿ ಕೇಂದ್ರ ಸಚಿವ ಸದಾನಂದಗೌಡ ಸಲ್ಲಿಸಿದ್ದ,ರಿಟ್‌ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಅರವಿಂದಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಅರ್ಜಿದಾರ ಸದಾನಂದಗೌಡರ ವಿರುದ್ಧ ಮಂಗಳೂರಿನ ಜೆಎಂಎಫ್ಸಿ ಕೋರ್ಟ್‌ನಲ್ಲಿ ನಡೆಯುತ್ತಿದ್ದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣದ ವಿಚಾರಣೆಯನ್ನು ರದ್ದುಗೊಳಿಸಿ...
ಸುದ್ದಿ

ಎಸ್ಐ ಆಗಿ ಅಧಿಕಾರ ಸ್ವೀಕರಿಸಿದ ಭಾರತದ ಮೊದಲ ಮಂಗಳಮುಖಿ ಪ್ರೀತಿಕಾ !

ಚೆನ್ನೈ: ಭಾರತದ ಮೊದಲ ಮಂಗಳಮುಖಿ ಪೊಲೀಸ್ ಅಧಿಕಾರಿ ಕೆ. ಪ್ರೀತಿಕಾ ಯಾಶಿನಿ, ಇಂದು ಚೂಲೈಮೇಡು ಪೊಲೀಸ್ ಠಾಣೆ ಸಬ್ ಇನ್ಸ್ ಪೆಕ್ಟರ್ ಆಗಿ ಚಾರ್ಜ್ ತೆಗೆದುಕೊಂಡಿದ್ದಾರೆ. ಪ್ರೀತಿಕಾ ವಿಶೇಷವಾಗಿ ಮಂಗಳಮುಖಿಯರನ್ನ ನಿಭಾಯಿಸುವಲ್ಲಿ ತುಂಬಾ ಸಹಾಯಕರಾಗಿದ್ದಾರೆ. ಚೂಲೈಮೇಡು ಪೊಲೀಸ್ ಠಾಣೆಯಲ್ಲಿ ಎಲ್ಲರನ್ನೂ ಸಮಾನವಾಗಿ ಪರಿಗಣಿಸಲಾಗುವುದು ಮತ್ತು ನಮ್ಮಲ್ಲಿ ಯಾವುದೇ ತಾರತಮ್ಯವಿಲ್ಲ ಎಂದು ಠಾಣೆ ಇನ್ಸ್ ಪೆಕ್ಟರ್ ಜೆ.ಶಿವಕುಮಾರ್ ಹೇಳಿದ್ದಾರೆ. ಪ್ರೀತಿಕಾ ಪೊಲೀಸ್ ಸರ್ವೀಸ್ ಗೆ ಸೇರುವುದಕ್ಕೂ ಮೊದಲು ಅನೇಕ ಸಮಸ್ಯೆಗಳನ್ನ ಫೇಸ್...
ಸುದ್ದಿ

ಕಪಾಲಿ ಥಿಯೇಟರ್ ಇನ್ನು ನೆನಪು ಮಾತ್ರ! ಇಂದು ಕೊನೆಯ ಪ್ರದರ್ಶನ.

ಬೆಂಗಳೂರು: ನಗರದ ಮೆಜೆಸ್ಟಿಕ್ ನಲ್ಲಿರುವ ಸುಪ್ರಸಿದ್ಧ ಕಪಾಲಿ ಚಿತ್ರಮಂದಿರದಲ್ಲಿ ಗುರುವಾರ ತಡರಾತ್ರಿ ಕೊನೆಯ ಪ್ರದರ್ಶನದೊಂದಿಗೆ ಇನ್ನು ನೆನಪಾಗಿಯಷ್ಟೇ ಉಳಿಯಲಿದೆ. ಹೌದು ಬರೋಬ್ಬರಿ 49 ವರ್ಷಗಳ ಬಳಿಕ ಕಪಾಲಿ ಥಿಯೇಟರ್ ಶಾಶ್ವತವಾಗಿ ಸ್ಥಗಿತಗೊಳ್ಳುವ ಮೂಲಕ ಇತಿಹಾಸದ ಪುಟ ಸೇರಲಿದೆ. ಶುಕ್ರವಾರದಿಂದ ಕಪಾಲಿ ಚಿತ್ರಮಂದಿರಲ್ಲಿ ಯಾವುದೇ ಚಿತ್ರಪ್ರದರ್ಶನ ಇಲ್ಲ. ಇನ್ನು ಕೆಲವೇ ದಿನಗಳಲ್ಲಿ ಚಿತ್ರಮಂದಿರದ ನೆಲಸಮ ಕಾರ್ಯ ಆರಂಭವಾಗಲಿದ್ದು, ಈ ಸ್ಥಳದಲ್ಲಿ ಬೃಹತ್ ಮಾಲ್ ತಲೆಎತ್ತಲಿದೆ. 1,465 ಆಸನಗಳನ್ನು ಹೊಂದಿದ್ದ ಕಪಾಲಿ ಚಿತ್ರವನ್ನು 1968ರಲ್ಲಿ...
ಸುದ್ದಿ

ನೆಕ್ಕಿಲಾಡಿ ಜೇಸಿಐ ಘಟಕಕ್ಕೆ ವರುಷ ತುಂಬಿದ ಸಂಭ್ರಮ, ಶಿವಕುಮಾರ್ ಬಾರಿತ್ತಾರೇ ಅತ್ಯುತ್ತಮ ಘಟಕಾಧ್ಯಕ್ಷರು.

ಉಪ್ಪಿನಂಗಡಿ : ನೆಕ್ಕಿಲಾಡಿಯಲ್ಲಿ ಶಿವಕುಮಾರ್ ಬಾರಿತ್ತಾಯ ನೇತೃತ್ವದಲ್ಲಿ ಆರಂಭಗೊಂಡ ಜೇಸಿಐ ಘಟಕಕ್ಕೆ ಇಂದಿಗೆ ಒಂದು ವರ್ಷಪೂರೈಸಿದೆ. ಉತ್ಯುತ್ತಮ ಕಾರ್ಯಚಟುವಟಿಕೆಗಳ ಮೂಲಕ ಮಾದರಿ ಘಟಕವೆನಿದೆ. ಉತ್ತಮ ಘಟಕಾಧ್ಯಕ್ಷ ಪ್ರಶಸ್ತಿಯನ್ನು ನೆಕ್ಕಿಲಾಡಿ ಘಕದ ಅಧ್ಯಕ್ಷ ಜನರಪರ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಶಿವ ಕುಮಾರ ಬಾರಿತ್ತಾಯರಿಗೆ ಲಭಿಸಿರುವುದು ಇವರ ಸಾಧನೆಗೆ ಹಿಡಿದ ಕೈಕನ್ನಡಿ. ಹತ್ತಾರು ಚಟುವಟಿಕೆಗಳು : ಶನೀಶ್ವರ ಪೂಜೆ, ನೀರಿನ ಫಿಲ್ಟರ್ ಕೊಡುಗೆ, ಬ್ಯಾರೀಕೇಡ್ ಕೊಡುಗೆ, ರಸ್ತೆ ನಾಮಫಲಕದ ಕೊಡುಗೆ ಪಟ್ಟಿ...
ಸುದ್ದಿ

ಆರ್.ಎಸ್.ಎಸ್. ಚಡ್ಡಿ ನೋಡಲು ಮಹಿಳೆಯ ಶೌಚಾಲಯಕ್ಕೆ ಹೋದ ರಾಹುಲ್‌ ಗಾಂಧಿ !!

ಅಹಮದಾಬಾದ್‌ : ವಿಧಾನಸಭಾ ಚುನಾವಣೆಗಾಗಿ ಗುಜರಾತ್‌ ಪ್ರವಾಸದಲ್ಲಿರುವ ಕಾಂಗ್ರೆಸ್‌ ಉಪಾಧ್ಯಕ್ಷ  ರಾಹುಲ್‌ ಗಾಂಧಿ ಗಡಿಬಿಡಿಯಲ್ಲಿ ಮಹಿಳಾ ಶೌಚಾಲಯಕ್ಕೆ ತೆರಳಿ ಇದೀಗ ಸಾಮಾಜಿಕ ತಾಣಗಳಲ್ಲಿ ಟ್ರೋಲ್‌ ಆಗಿದ್ದಾರೆ.  ಛೋಟಾ ಉದಯ್‌ಪುರ್‌ನಲ್ಲಿ ಯುವಜನತೆಯೊಂದಿಗಿನ 'ಸಾಮವಾದ್‌ ಸಂವಾದ'ದಲ್ಲಿ ಪಾಲ್ಗೊಂಡ ಬಳಿಕ ಟೌನ್‌ ಹಾಲ್‌ನಲ್ಲಿದ್ದ ಶೌಚಾಲಯದತ್ತ ತೆರಳಿದ್ದಾರೆ. ಗಡಿಬಿಡಿಯಲ್ಲಿ ಮಹಿಳಾ ಶೌಚಾಲಯದೊಳಗೆ ತೆರಳಿದ್ದಾರೆ. ಇದಕ್ಕೆ ಕಾರಣವಾಗಿದ್ದು ಅಲ್ಲಿ ಇದ್ದ ಫ‌ಲಕಗಳು ಗುಜರಾತಿ ಭಾಷೆಯಲ್ಲಿ ಇದ್ದವು. 'ಮಹಿಳಾ ಮಾತಾವೋ ಶೌಚಾಲಯ' ಎಂದು ಗುಜರಾತಿ ಭಾಷೆಯಲ್ಲಿ ಬರೆಯಲಾಗಿತ್ತು. ಈ...
ಸುದ್ದಿ

ವರುಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಶಂಕರ ಬಿದರಿ ಕಣಕ್ಕೆ.

ಬೆಂಗಳೂರು : ಜಿದ್ದಾಜಿದ್ದಿನ ರಣರಂಗವಾಗಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣ ಕ್ಷೇತ್ರದಿಂದ ನಿವೃತ್ತ ಪೊಲೀಸ್ ಅಧಿಕಾರಿ ಶಂಕರ್ ಬಿದರಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಮುಂದಾಗಿದೆ. ಇದೇ ಕ್ಷೇತ್ರದಿಂದ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಕಣಕ್ಕಿಳಿಯಲು ಸಿದ್ದತೆ ನಡೆಸಿದ್ದಾರೆ. ತಮಗೆ ರಾಜಕೀಯ ಪುನರ್ ಜನ್ಮ ನೀಡಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಕೊನೆಯದಾಗಿ ಸ್ಪರ್ಧಿಸಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಹೊಂದುವ ಇಂಗಿತ ವ್ಯಕ್ತಪಡಿಸಿದ್ದಾರೆ. ವರುಣ ಕ್ಷೇತ್ರದಿಂದ ಸಿದ್ದರಾಮಯ್ಯನವರ ಪುತ್ರ ಕಣಕ್ಕಿಳಿದರೆ ಅವರಿಗೆ ಪ್ರಬಲ ಸ್ಪರ್ಧಿಯಾಗಿ ಬಿಜೆಪಿ...
1 3,273 3,274 3,275 3,276 3,277 3,287
Page 3275 of 3287