ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರಾಯೋಜಕರೇ ಇಲ್ಲ !
ಮೈಸೂರು: ಕನ್ನಡ ಸಾಹಿತ್ಯ ಲೋಕದ ಮೇರು ಜಾತ್ರೆ 83ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನ. 24ರಿಂದ ಮೂರು ದಿನಗಳ ಕಾಲ ಅರಮನೆ ನಗರಿ ಮೈಸೂರಿನಲ್ಲಿ ನಡೆಯಲಿದ್ದು, ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸುವ ನಿಟ್ಟಿನಲ್ಲಿ ಕನ್ನಡ -ಸಂಸ್ಕೃತಿ ಇಲಾಖೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ. ಆದರೆ ಕನ್ನಡಿಗರ ಹೆಮ್ಮೆಯ, ಕನ್ನಡ ಸಾಹಿತ್ಯ ಲೋಕದ ಸ್ವಾಭಿಮಾನದ ಸಂಕೇತವಾದ ಸಮ್ಮೇಳ ನದ ಪ್ರಾಯೋಜಕತ್ವ ವಹಿಸಿಕೊಳ್ಳಲು ಜಿಲ್ಲೆಯ ಯಾವ ಉದ್ಯಮಿಗಳೂ ಮುಂದೆ...







