ಸಂಬಂಧ ಸಕ್ರಮಗೊಳಿಸಿದ ಅನುಷ್ಕಾ – ಕೊಹ್ಲಿ | ಇಟಲಿಯಲ್ಲಿ ಮಾಂಗಲ್ಯಂ ತಂತುನಾನೇನ
ಹೊಸದಿಲ್ಲಿ : ಬಹು ಕಾಲದ ನಿರೀಕ್ಷೆ, ಕುತೂಹಲ, ಊಹಾಪೋಹಗಳಿಗೆ ಕೊನೆಗೂ ತೆರೆ ಎಂಬಂತೆ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ತಾರೆ ಅನುಷ್ಕಾ ಶರ್ಮಾ ಇಂದು ಸೋಮವಾರ ಬೆಳಗ್ಗೆ ಇಟಲಿಯ ಟಸ್‌ಕ್ಯಾನಿಯಲ್ಲಿ ಖಾಸಕಿ ಸಮಾರಂಭದಲ್ಲಿ ವಿವಾಹ ಬಂಧನಕ್ಕೆ ಒಳಪಟ್ಟರೆಂದು ಮಾಧ್ಯಮ ವರದಿಗಳು ತಿಳಿಸಿವೆ. ಡಿಸೆಂಬರ್ ತಿಂಗಳಲ್ಲಿ ತನಗೆ ಬಿಡುವು ಬೇಕೆಂದು ವಿರಾಟ್ ಕೊಹ್ಲಿ ಅವರು ಬಿಸಿಸಿಐ ಮುಂದೆ ಮನವಿಯನ್ನು ಸಲ್ಲಿಸಿದಾಗಲೇ "ವಿರಾಟ್ - ಅನುಷ್ಕಾ'...







