Thursday, March 12, 2026

ಸುದ್ದಿ

ಸುದ್ದಿ

ಬಾಂಗ್ಲಾದಲ್ಲಿ ಮಾತ್ರ ಅಲ್ಲ ನಮ್ಮ ದೇಶದಲ್ಲೂ ಹಿಂದೂಗಳ ಸ್ಥಿತಿ ಹೀನಾಯ: ವಿಶ್ವಪ್ರಸನ್ನ ತೀರ್ಥ ಶ್ರೀ -ಕಹಳೆ ನ್ಯೂಸ್

ದಾವಣಗೆರೆ: ಬಾಂಗ್ಲಾದಲ್ಲಿ  ಅಷ್ಟೇ ಅಲ್ಲ ನಮ್ಮ ದೇಶದಲ್ಲೂ ಕೂಡ ಹಿಂದೂಗಳ  ಪರಿಸ್ಥಿತಿ ಹೀನಾಯವಾಗಿದೆ ಎಂದು ಪೇಜಾವರ ಮಠದ ವಿಶ್ವಪ್ರಸನ್ನಾ ತೀರ್ಥ ಶ್ರೀಗಳು ಹೇಳಿದ್ದಾರೆ. ದಾವಣಗೆರೆಯಲ್ಲಿ  ಮಾಧ್ಯಮಗಳ ಜೊತೆ ಅವರು ಮಾತನಾಡಿದರು. ಈ ವೇಳೆ ಬಾಂಗ್ಲಾದಲ್ಲಿ ನಡೆಯುತ್ತಿರುವ ಹಿಂದುಗಳ ಹತ್ಯೆ ಬಗ್ಗೆ ಪ್ರತಿಕ್ರಿಯಿಸಿದರು. ಇದರ ಬಗ್ಗೆ ಕೇಂದ್ರ ಸರ್ಕಾರ ಕ್ರಮವನ್ನು ಕೈಗೊಳ್ಳಬೇಕು. ಹಿಂದೂಗಳ ಹೀನಾಯ ಸ್ಥಿತಿಯಲ್ಲಿ ಇರೋದು ಕೇವಲ ಬಾಂಗ್ಲಾದಲ್ಲಿ ಅಷ್ಟೇ ಅಲ್ಲ. ನಮ್ಮ ಭಾರತದಲ್ಲಿ ಕೂಡ ಹೀನಾಯ ಸ್ಥಿತಿಯಲ್ಲಿದ್ದಾರೆ ಎಂದು...
ಸುದ್ದಿ

ಉಡುಪಿ ಮಠದಲ್ಲಿ ಶ್ರೀಮತಿ ಮಧುಮಿತಾ ಪಡುಮಲೆ ಇವರಿಂದ ಕರ್ನಾಟಕ ಶಾಸ್ತ್ರೀಯ ವೀಣಾವಾದನ ಕಾರ್ಯಕ್ರಮ – ಕಹಳೆ ನ್ಯೂಸ್

ಪುತ್ತೂರು : ಶ್ರೀ ಕೃಷ್ಣ ಮಠ , ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ಇಲ್ಲಿನ ರಾಜಾಂಗಣದಲ್ಲಿ ಫೆ.18 ರಂದು ಶ್ರೀಮತಿ ಮಧುಮಿತಾ ಪಡುಮಲೆ ಇವರಿಂದ ಕರ್ನಾಟಕ ಶಾಸ್ತ್ರೀಯ ವೀಣಾವಾದನ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ವೈಣಿಕ ರತ್ನ ಆರ್.ಕೆ ಪದ್ಮನಾಭ ಮೈಸೂರು ಇವರ ಶಿಷ್ಯೆಯಾಗಿರುವ ಶ್ರೀಮತಿ ಮಧುಮಿತಾ ಇವರ ತಂಡದಲ್ಲಿ ಪನ್ನಗ ಶರ್ಮನ್ ಮೃದಂಗದಲ್ಲಿ ,ಸುಹಾಸ್ ಹೆಬ್ಬಾರ್ ರಿದಂ ಪ್ಯಾಡ್ ನಲ್ಲೂ ಹಾಗೂ ಕೃಷ್ಣ ಗೋಪಾಲ್ ಕೊಳಲು ವಾದನದಲ್ಲಿ ಸಹಕಾರ...
ಸುದ್ದಿ

ಕಾಡಾನೆ ಸೆರೆಗೆ ಬಂದಿದ್ದ ಜ್ಯೂನಿಯರ್ ಅರ್ಜುನ ನಾಪತ್ತೆ – ಮದಗಜದ ಆರ್ಭಟಕ್ಕೆ ಕಾಡು ಸೇರಿದ ʻಪಾರ್ಥʼ -ಕಹಳೆ ನ್ಯೂಸ್

ಚಿಕ್ಕಮಗಳೂರು: ತಾಲೂಕಿನ ಪುರ ಗ್ರಾಮಕ್ಕೆ ನರಹಂತಕ ಕಾಡಾನೆಯನ್ನು ಸೆರೆಹಿಡಿಯಲು ಬಂದಿದ್ದ ಸಾಕಾನೆ ಜ್ಯೂ.ಅರ್ಜುನ ಭಯದಿಂದ ಕಾಡು ಸೇರಿದ ಘಟನೆ ನಡೆದಿದೆ. ಮದವೇರಿದ ಕಾಡಾನೆ ಜೊತೆ ಕಾದಾಟದಲ್ಲಿ ಜ್ಯೂನಿಯರ್ ಅರ್ಜುನ ಹೆದರಿ ಕಾಡು ಸೇರಿದ್ದ. ಸುಮಾರು ಒಂದು ಗಂಟೆಗಳ ಕಾಲ ಸಾಕಾನೆ ಹುಡುಕುತ್ತಾ ಅರಣ್ಯ ಇಲಾಖೆ ಅಧಿಕಾರಿಗಳು ಹೈರಾಣಾಗಿದ್ದರು. ಒಂದು ಗಂಟೆ ಬಳಿಕ ಕಾಡಲ್ಲಿ ಸಾಕಾನೆ ಪತ್ತೆಯಾಗಿದೆ. ಫೆ.16 ರಂದು ಓರ್ವ ಕಾರ್ಮಿಕನನ್ನು ಕಾಡಾನೆ ತುಳಿದು ಕೊಂದು ಹಾಕಿತ್ತು. ಆ ಕಾಡಾನೆ...
ಸುದ್ದಿ

ದುಬೈನಲ್ಲಿ ಸಡಗರದ ಕ್ರೀಡಾಕೂಟ: ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜದ ‘ಕ್ರಿಕೆಟ್ ಸೀಸನ್-6’ ಹಾಗೂ ‘ತ್ರೋಬಾಲ್ ಸೀಸನ್-1’ ಅದ್ದೂರಿ ಯಶಸ್ವಿ – ಕಹಳೆ ನ್ಯೂಸ್

ದುಬೈ: ಅನಿವಾಸಿ ಕನ್ನಡಿಗರ ಪ್ರಮುಖ ಸಂಘಟನೆಯಾದ ಕೊಡಗು–ದಕ್ಷಿಣ ಕನ್ನಡ ಗೌಡ ಸಮಾಜ ದುಬೈ ವತಿಯಿಂದ ಆಯೋಜಿಸಲಾಗಿದ್ದ 'ಕ್ರಿಕೆಟ್ ಸೀಸನ್–6' ಹಾಗೂ ಪ್ರಥಮ ವರ್ಷದ 'ತ್ರೋಬಾಲ್ ಸೀಸನ್-1' ಕ್ರೀಡಾಕೂಟವು ಫೆಬ್ರವರಿ 15 ರಂದು ದುಬೈನಲ್ಲಿ ಅತ್ಯಂತ ವೈಭವದಿಂದ ಜರುಗಿತು. ಈ ಬಾರಿಯ ಕ್ರೀಡಾಕೂಟದ ಆಕರ್ಷಕ ವಿಜೇತ ಟ್ರೋಫಿಗಳನ್ನು ಸಂಘದ ಉಪಾಧ್ಯಕ್ಷರಾದ ಸುರೇಶ್ ಕುಂಪಲ ಅವರು ತಮ್ಮ ಮಾತೃಶ್ರೀ ದಿವಂಗತ ಶ್ರೀಮತಿ ಕಮಲ ಅವರ ಸ್ಮರಣಾರ್ಥವಾಗಿ ಪ್ರಾಯೋಜಿಸಿದ್ದರು. ಕಾರ್ಯಕ್ರಮವನ್ನು ಸಂಘದ ಅಧ್ಯಕ್ಷ ಮೋಹನ್...
ಸುದ್ದಿ

ವಿಟಿವಿ ವಿಟ್ಲ ಸಾರಥ್ಯದಲ್ಲಿ “ಜ್ಞಾನದಾಟ – ಮಕ್ಕಳ ಸ್ಪರ್ಧಾ ಕೂಟ” ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ : ವಿಟಿವಿ ಸಂಸ್ಥೆ ಸ್ಪರ್ಧಾತ್ಮಕ ಯುಗದಲ್ಲಿ ಸಮಾಜದ ಜನರನ್ನು ಒಂದುಗೂಡಿಸುವ ಪ್ರಯತ್ನ ಮಾಡುತ್ತಿದೆ- ಕೃಷ್ಣಯ್ಯ ಬಲ್ಲಾಳ್‌ – ಕಹಳೆ ನ್ಯೂಸ್

ವಿಟ್ಲ: ವಿಟಿವಿ ವಿಟ್ಲ ಇವರ ಸಾರಥ್ಯದಲ್ಲಿ ಪುಟ್ಟ ಮಕ್ಕಳಲ್ಲಿ ಓದುವಿಕೆಯ ಆಸಕ್ತಿ ಚಿಗುರಿಸುವ ದಿಟ್ಟ ಹೆಜ್ಜೆಗಾಗಿ "ಜ್ಞಾನದಾಟ - ಮಕ್ಕಳ ಸ್ಪರ್ಧಾ ಕೂಟ" ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. "ಜ್ಞಾನದಾಟ - ಮಕ್ಕಳ ಸ್ಪರ್ಧಾ ಕೂಟ" ಸ್ಪರ್ಧೆಯ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು. ನೈಜ್ಯ-ನಿಖರ-ನಿರ್ಭೀತಿ ಸುದ್ದಿಯನ್ನು ಭಿತ್ತರಿಸಿ ಇಂದು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ತನ್ನದೇ ವಿಭಿನ್ನ ಶೈಲಿಯೊಂದಿಗೆ ಮಾಧ್ಯಮ ರಂಗದಲ್ಲಿ ಹೆಸರುವಾಸಿಯಾದ ವಿಟಿವಿ ವಿಟ್ಲ...
ಸುದ್ದಿ

ಮಂತ್ರಾಲಯದಲ್ಲಿ ಅದ್ದೂರಿಯಾಗಿ ನಡೆದ ತೆಪ್ಪೋತ್ಸವ : ಎಲ್ಲೆಡೆ ಗುರುವೈಭವೋತ್ಸವ ಸಂಭ್ರಮ

ರಾಯಚೂರು: ಮಂತ್ರಾಲಯದಲ್ಲಿ  ಗುರುರಾಯರ ಗುರುವೈಭವೋತ್ಸವ ಸಂಭ್ರಮ ಮನೆ ಮಾಡಿದೆ. ಮಠದ ಅಂಗಳದ ಪುಷ್ಕರಣಿಯಲ್ಲಿ ರಾತ್ರಿ ವೇಳೆ ಅದ್ದೂರಿಯಾಗಿ ತೆಪ್ಪೋತ್ಸವ ನೆರವೇರಿಸಲಾಯಿತು. ರಾಯರ ಪಟ್ಟಾಭಿಷೇಕ ಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ಪುಷ್ಕರಣಿಯಲ್ಲಿ ಉತ್ಸವ ಮೂರ್ತಿ ಪ್ರಹ್ಲಾದರಾಯರ ಮೆರವಣಿಗೆ ಮಾಡಲಾಯಿತು. ಗುರುರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವದಿಂದ ಮಂತ್ರಾಲಯ ಕಳೆಕಟ್ಟಿದೆ.   ಬೆಳಿಗ್ಗೆಯಿಂದ ಧಾರ್ಮಿಕ ಕಾರ್ಯಕ್ರಮಗಳ ಜೊತೆ ಪ್ರವಚನ, ರಥೋತ್ಸವ...
ಸುದ್ದಿ

ಪುತ್ತೂರು- ಉಪ್ಪಿನಂಗಡಿ ಚತುಷ್ಪಥ: ಸಮರೋಪಾದಿಯಲ್ಲಿ ಕಾಮಗಾರಿ ಮುಗಿಸಿ: ಶಾಸಕರ ಸೂಚನೆ – ಕಹಳೆ ನ್ಯೂಸ್

ಪುತ್ತೂರು: ಪುತ್ತೂರು - ಉಪ್ಪಿನಂಗಡಿ ಚತುಷ್ಫಥ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಮುಗಿಸುವಂತೆ ಶಾಸಕ ಅಶೋಕ್ ರೈ ಸೂಚನೆ ನೀಡಿದ್ದು ಅದರಂತೆ ಇಂದಿನಿಂದ ಕಾಮಗಾರಿ ವೇಗತೆಯನ್ನು ಪಡೆದುಕೊಂಡಿದೆ. ಮುಂದಿನ ಮಳೆಗಾಲಕ್ಕೆ ಮುನ್ನ ಕಾಮಗಾರಿ ಮುಗಿಸಬೇಕು ಮತ್ತು ತಡೆಗೋಡೆ,ಮೋರಿ ಅಗತ್ಯವಿದ್ದ ಕಡೆ ನಿರ್ಮಾಣ‌ಮಾಡಿ‌ಮುಗಿಸಬೇಕು. ಮಳೆ ಯಾವಾಗ ಬರಬಹುದು ಎಂಬ ನಿರೀಕ್ಷೆಯೂ ಇಲ್ಲದ ಕಾರಣ ಕಾಮಗಾರಿಯನ್ನು ಶೀಘ್ರ ಮುಗಿಸಬೇಕು ಎಂದು ಇಲಾಖೆಗೆ ಶಾಸಕರು ಸೂಷನೆಯನ್ನು ನೀಡಿದ್ದಾರೆ....
ಸುದ್ದಿ

ಎಸೆಸೆಲ್ಸಿ 29,397, ಪಿಯುಸಿ 37,337 ವಿದ್ಯಾರ್ಥಿಗಳು ನೋಂದಣಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ – ಕಹಳೆ ನ್ಯೂಸ್

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ 29,397 ಮಂದಿ ವಿದ್ಯಾರ್ಥಿಗಳು ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 37,337 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೋಂದಣಿ ಮಾಡಿಕೊಂಡಿದ್ದಾರೆ. ಪರೀಕ್ಷೆ ವ್ಯವಸ್ಥಿತವಾಗಿ ನಡೆಸಲು ಪ್ರೌಢ ಮತ್ತು ಪ.ಪೂ. ಶಿಕ್ಷಣ ಇಲಾಖೆಗಳು ಸಿದ್ಧತೆ ನಡೆಸಿವೆ. ಮಾ.18 ರಿಂದ ಎ.2ರವರೆಗೆ ಎಸೆಸೆಲ್ಸಿ ಪರೀಕ್ಷೆ ಮತ್ತು ಫೆ.28 ರಿಂದ ಮಾ.17ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆಯಲಿದೆ. ಜಿಲ್ಲೆಯ 524 ಪ್ರೌಢಶಾಲೆಗಳ ಅಭ್ಯರ್ಥಿಗಳು 91...
1 21 22 23 24 25 3,287
Page 23 of 3287