Friday, March 20, 2026

ಸುದ್ದಿ

ಸುದ್ದಿ

ರಾಮಲಲ್ಲಾ ಪ್ರತಿಷ್ಠಾಪನೆ ವಾರ್ಷಿಕೋತ್ಸವಕ್ಕೆ ರಾಮಮಂದಿರ ಸಜ್ಜು-ಕಹಳೆ ನ್ಯೂಸ್

ಅಯೋಧ್ಯೆ, ಡಿ. 31 (ಪಿಟಿಐ) - ರಾಮಲಲ್ಲಾ ವಿಗ್ರಹದ ಪ್ರತಿಷ್ಠಾಪನೆಯ ಎರಡನೇ ವಾರ್ಷಿಕೋತ್ಸವದ ನೆನಪಿಗಾಗಿ ಇಲ್ಲಿನ ರಾಮ ದೇವಾಲಯ ಸಂಕೀರ್ಣದಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಆರಂಭಿಸಲಾಗಿದೆ.ಗಣಪತಿ ಪೂಜೆ ಮತ್ತು ಮಂಡಲ ಪೂಜೆಯೊಂದಿಗೆ ಆಚರಣೆಗಳು ಪ್ರಾರಂಭವಾದವು ಎಂದು ದೇವಾಲಯದ ಟ್ರಸ್ಟಿ ಅನಿಲ್‌ ಮಿಶ್ರಾ ಹೇಳಿದರು. ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ಪ್ರಾಣ ಪ್ರತಿಷ್ಠಾ ದ್ವಾದಶಿ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಭಾಗವಹಿಸಲಿದ್ದಾರೆ ಎಂದು ಮಿಶ್ರಾ ಹೇಳಿದ್ದಾರೆ. ಸಿಂಗ್‌ ಅವರ ಸಮ್ಮುಖದಲ್ಲಿ, ರಾಮಲಲ್ಲಾಗೆ...
ರಾಜ್ಯಸುದ್ದಿ

ದೆಹಲಿ ಸ್ಪೋಟದ ಬೆನ್ನಲ್ಲೇ ರಾಜಸ್ಥಾನದಲ್ಲಿ ಬರೋಬ್ಬರಿ 150 ಕೆಜಿ ಅಮೋನಿಯಂ ನೈಟ್ರೇಟ್ ಸ್ಪೋಟಕ ವಶಕ್ಕೆ – ಕಹಳೆ ನ್ಯೂಸ್

ರಾಜಸ್ಥಾನ: ಹೊಸ ವರ್ಷದ ಮುನ್ನಾದಿನದಂದು ವಿಶೇಷ ವಾಹನ ತಪಾಸಣೆ ಕಾರ್ಯಾಚರಣೆಯ ಸಂದರ್ಭದಲ್ಲಿ ಟೋಂಕ್-ಜೈಪುರ ಹೆದ್ದಾರಿಯಲ್ಲಿ ಕಾರಿನಿಂದ ಸ್ಫೋಟಕ ವಸ್ತುಗಳ ದೊಡ್ಡ ಸಂಗ್ರಹವನ್ನು ಪೊಲೀಸರು ವಶಪಡಿಸಿಕೊಂಡರು, ಇದು ಭದ್ರತಾ ಎಚ್ಚರಿಕೆಯನ್ನು ನೀಡಿತು. ವಾಹನದಿಂದ ಸುಮಾರು 150 ಕೆಜಿ ಅಮೋನಿಯಂ ನೈಟ್ರೇಟ್, 200 ಸ್ಫೋಟಕ ಬ್ಯಾಟರಿಗಳು ಮತ್ತು 1,100 ಮೀಟರ್ ವಿದ್ಯುತ್ ತಂತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಬಂಡಿ ಕಡೆಗೆ ಹೋಗುತ್ತಿದ್ದ ಮಾರುತಿ ಸಿಯಾಜ್ ಕಾರನ್ನು ಅಧಿಕಾರಿಗಳು ತಡೆದ ನಂತರ...
ಜಿಲ್ಲೆದಕ್ಷಿಣ ಕನ್ನಡರಾಜ್ಯಸುದ್ದಿ

ಕೋಗಿಲು ಬಡಾವಣೆಯ ಅಕ್ರಮ ವಲಸಿಗರ ತನಿಖೆಗೆ ಎಸ್‌ಐಟಿ ರಚಿಸಿ: ಶಾಸಕ ಭರತ್ ಶೆಟ್ಟಿ – ಕಹಳೆ ನ್ಯೂಸ್

ಮಂಗಳೂರು: 'ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ವಲಸಿಗರು ಯಾರು? ಅವರು ಅಲ್ಲಿಗೆ ಬಂದು ನೆಲೆಸಲು ಅವಕಾಶ ಕೊಟ್ಟಿದ್ದು ಯಾರು, ಅವರು ಬಂದಿದ್ದು ಏಕೆ? ಅವರು ಬಂದಿದ್ದು ಎಲ್ಲಿಂದ ಎಂಬ ಬಗ್ಗೆ ಸಮಗ್ರ ತನಿಖೆಯಾಗಬೇಕು. ಇದಕ್ಕಾಗಿ ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚಿಸಬೇಕು' ಎಂದು ಶಾಸಕ ಡಾ.ವೈ.ಭರತ್ ಶೆಟ್ಟಿ ಒತ್ತಾಯಿಸಿದರು. ಇಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, 'ಅಲ್ಲಿ ಒಕ್ಕಲೆಬ್ಬಿಸಿದವರಿಂದ ಯಾವುದೇ ದಾಖಲೆ ಪತ್ರವನ್ನು ಕೇಳದೆಯೇ ಅವರಿಗೆ ನಾಲ್ಕೈದು ಕಿ.ಮೀ...
ಸುದ್ದಿ

ಕೋಮಾಕ್ಕೆ ಜಾರಿದ ಆಸ್ಟ್ರೇಲಿಯಾ ಕ್ರಿಕೆಟಿಗ-ಕಹಳೆ ನ್ಯೂಸ್

ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗಡೇಮಿಯನ್ ಮಾರ್ಟಿನ್ ಅವರನ್ನು ಆಸ್ಪತ್ರೆಗೆ ದಾಖಲಾಗಿದೆ. ಮೆನಿಂಜೈಟಿಸ್ ಸಮಸ್ಯೆಯಿಂದ ಬಳಲುತ್ತಿರುವ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಇದೀಗ ಕೋಮಾಕ್ಕೆ ಜಾರಿದ್ದಾರೆ ಆಸ್ಟ್ರೇಲಿಯನ್ ಅಸೋಸಿಯೇಟೆಡ್ ಪ್ರೆಸ್ (AAP) ಉಲ್ಲೇಖಿಸಿ ವರದಿ ಮಾಡಿದೆ. ದಿ ಸಿಡ್ನಿ ಮಾರ್ನಿಂಗ್ಹೆರಾಲ್ಡ್ ವರದಿ ಪ್ರಕಾರ, ಮಾರ್ಟಿನ್ ಮೆನಿಂಜೈಟಿಸ್‌ಗೆಚಿಕಿತ್ಸೆಪಡೆಯುತ್ತಿದ್ದರು. ಈ ವೇಳೆ ನೀಡಲಾದ ಔಷಧಿಗಳ ರಿಯಾಕ್ಷನ್​ನಿಂದಾಗಿ ಅವರು ಕೋಮಾಕ್ಕೆಜಾರಿದ್ದಾರೆ. ವೈದ್ಯರು ಮಾರ್ಟಿನ್ ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಹೆಚ್ಚಿನ ಚಿಕಿತ್ಸೆಯ ವ್ಯವಸ್ಥೆಗೆ ಮುಂದಾಗಿದ್ದಾರೆ. ಡೇಮಿಯನ್ ಮಾರ್ಟಿನ್​ ಅವರಿಗೆ ಸಾಧ್ಯವಾದಷ್ಟು...
ದಕ್ಷಿಣ ಕನ್ನಡಬಂಟ್ವಾಳಸುದ್ದಿ

ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ದಲ್ಲಿ 2025-26ನೇ ಸಾಲಿನ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ-ಕಹಳೆ ನ್ಯೂಸ್

ಬಂಟ್ವಾಳ:ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ನೆಟ್ಲ ಇಲ್ಲಿ 2025-26ನೇ ಸಾಲಿನ ಕಲ್ಲಡ್ಕ ಕ್ಲಸ್ಟರ್ ಮಟ್ಟದ ಬುನಾದಿ ಸಾಕ್ಷರತೆ ಹಾಗೂ ಸಂಖ್ಯಾ ಜ್ಞಾನಕ್ಕೆ ಸಂಬಂಧಿಸಿದ ಕಲಿಕಾ ಹಬ್ಬ ಕಾರ್ಯಕ್ರಮ ಡಿಸೆಂಬರ್ 30 ಮಂಗಳವಾರ ಜರಗಿತು. ಕಾರ್ಯಕ್ರಮವನ್ನು ತಾಲೂಕು ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪುರಸ್ಕೃತ ಕಲ್ಲಡ್ಕ ಮಾದರಿ ಶಾಲಾ ಶಿಕ್ಷಕಿ ಸವಿತಾ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ನೆಟ್ಲ ಶಾಲಾ ಮುಖ್ಯಮಂತ್ರಿ ಪೂರ್ವಿತ್ ವಹಿಸಿದರು. ವೇದಿಕೆಯಲ್ಲಿ ಎಸ್.ಡಿ.ಎಂ.ಸಿ.ಉಪಾಧ್ಯಕ್ಷೆ ಭವ್ಯ ಸದಸ್ಯರಾದ ಸುಧಾಕರ ದೇವಾಡಿಗ, ನಳಿನಾಕ್ಷಿ, ಚಂಚಲಾಕ್ಷಿ,...
ದಕ್ಷಿಣ ಕನ್ನಡಮಂಗಳೂರುಸುದ್ದಿ

ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ನಡೆದ ‘ಸನಾತನ ನೃತ್ಯೋತ್ಸವ’ ಕಾರ್ಯಕ್ರಮ-ಕಹಳೆ ನ್ಯೂಸ್

ಮಂಗಳೂರು: ವೃತ್ತಿಜೀವನದ ಏಳುಬೀಳುಗಳನ್ನು ಸಹಸಿಕೊಂಡು ಮುನ್ನಡೆಯಲು ನೃತ್ಯ ಸಂಗೀತದಂತಹ ಕಲೆಗಳು ನೆರವಾಗುತ್ತವೆ ಎಂದು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಸಹಪ್ರಾಧ್ಯಾಪಕರಾದ ಮಾಧವ ಎಂ.ಕೆ. ಹೇಳಿದರು. ಅವರು ಇತ್ತೀಚೆಗೆ ನಗರದ ಕುದ್ಮುಲ್‌ ರಂಗರಾವ್‌ ಪುರಭವನದಲ್ಲಿ ಸನಾತನ ನಾಟ್ಯಾಲಯದ ವತಿಯಿಂದ ನಡೆದ ‘ಸನಾತನ ನೃತ್ಯೋತ್ಸವ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು. ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಮಕ್ಕಳನ್ನು ದೂರ ಇಡುವುದಕ್ಕೆ ಈ ಕಲಾಪ್ರಕಾರಗಳು ನೆರವಾಗುತ್ತವೆ. ಅಲ್ಲದೆ ಡಿಪ್ರೆಷನ್‌ ಮುಂತಾದ ಅನೇಕ ರೀತಿಯ ಸಮಸ್ಯೆಗಳಿಗೆ ಸಂಗೀತ ನೃತ್ಯದಂತಹ...
ಉಡುಪಿಸುದ್ದಿ

ಮಲ್ಪೆ ಬೀಚ್‌ ಸೇರಿದಂತೆ ಜಿಲ್ಲೆಯ ಬಹುತೇಕ ಬೀಚ್‌ಗಳಲ್ಲಿ ಪ್ರವಾಸೋದ್ಯಮಕ್ಕೆ ಅತಿವೃಷ್ಟಿ ಹೊಡೆತ -ಕಹಳೆ ನ್ಯೂಸ್

ಉಡುಪಿ: ಜಿಲ್ಲೆಯಲ್ಲಿ ಬೀಚ್ ಮತ್ತು ದೇಗುಲ ಪ್ರವಾಸೋದ್ಯಮವು ಪ್ರಮುಖವಾಗಿದ್ದು, ಈ ವರ್ಷ ಅಕ್ಟೋಬರ್ ತಿಂಗಳವರೆಗೂ ನಿರಂತರವಾಗಿ ಸುರಿದ ಮಳೆಯು ಪ್ರವಾಸೋದ್ಯಮದ ಮೇಲೂ ಪರಿಣಾಮ ಬೀರಿದೆ. ಮಳೆಗಾಲ ಆರಂಭವಾಗುತ್ತಿದ್ದಂತೆ ಬೀಚ್‌ಗಳಲ್ಲಿ ಪ್ರವಾಸಿಗರು ಸಮುದ್ರಕ್ಕಿಳಿಯದಂತೆ ತಡೆಬೇಲಿ ಹಾಕಲಾಗುತ್ತದೆ. ಮಲ್ಪೆ ಬೀಚ್‌ ಸೇರಿದಂತೆ ಜಿಲ್ಲೆಯ ಬಹುತೇಕ ಬೀಚ್‌ಗಳಲ್ಲೂ ಪ್ರವಾಸಿಗರ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತದೆ. ಈ ಬಾರಿ ಮಳೆ ನಿರಂತರವಾಗಿ ಸುರಿದ ಕಾರಣ ಹಾಗೂ ಕಡಲು ಪ್ರಕ್ಷುಬ್ಧವಾಗಿದ್ದ ಕಾರಣ ಬೀಚ್‌ಗಳಿಗೆ ಅಳವಡಿಸಿದ್ದ ತಡೆಬೇಲಿಗಳನ್ನು...
ಜಿಲ್ಲೆದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

“ಹಿನ್ನೋಟ”- ಇದು ನೆನಪಿನ ಬುತ್ತಿ ಕೃತಿ ಅನಾವರಣ-ಕಹಳೆ ನ್ಯೂಸ್

ಅರಂತೋಡಿನ ನಿವೃತ್ತ ರೇಂಜರ್ ಹೂವಯ್ಯ ಗೌಡ ಉಳುವಾರು ಅವರ ಬದುಕು ಹಾಗೂ ವೃತ್ತಿ ಬದುಕನ್ನು ಪರಿಚಯಿಸುವ ಅಭಿನಂದನಾ ಗ್ರಂಥ “ಹಿನ್ನೋಟ- ಇದು ನೆನಪಿನ ಬುತ್ತಿ” ಯ ಅನಾವರಣ ಕಾರ್ಯಕ್ರಮವು ಇತ್ತೀಚೆಗೆ ಸಾಂದೀಪ್ ವಿಶೇಷ ಮಕ್ಕಳ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಾಲಕೃಷ್ಣ ಗೌಡ ಮೂಲೆಮನೆ ವಹಿಸಿದ್ದರು. ಕಾರ್ಯಕ್ರಮವನ್ನು ನಿವೃತ್ತ ಪ್ರಾಂಶುಪಾಲರಾದ ಕೆ ಆರ್ ಗಂಗಾಧರ ಉದ್ಘಾಟಿಸಿದರು. ಎಂ ಬಿ ಫೌಂಡೇಶನ್ ಅಭ್ಯಕ್ಷರಾದ ಎಂ ಬಿ ಸದಾಶಿವ ಕೃತಿಯನ್ನು ಅನಾವರಣಗೊಳಿಸಿದರು. ಮುಖ್ಯ...
1 98 99 100 101 102 3,298
Page 100 of 3298