ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ಶೃತಿ ನಾಯ್ಡು ಸ್ಯಾಂಡಲ್ ವುಡ್‍ಗೆ ಎಂಟ್ರಿ!
ಬೆಂಗಳೂರು: ಕಿರುತೆರೆಯಲ್ಲಿ ಆ್ಯಕ್ಷನ್ ಕಟ್ ಹೇಳುತ್ತಿದ್ದ ನಿರ್ಮಾಪಕಿ ಶೃತಿ ನಾಯ್ಡು ಇದೀಗ ಸ್ಯಾಂಡಲ್ ವುಡ್ ನಿರ್ಮಾಪಕಿಯಾಗಿದ್ದಾರೆ. ಪತಿ ರಮೇಶ್ ಆ್ಯಕ್ಷನ್ ಕಟ್ ಹೇಳುತ್ತಿರೋ ಚಿತ್ರಕ್ಕೆ ಶೃತಿ ನಾಯ್ಡು ಹಣ ಹೂಡುತ್ತಿದ್ದಾರೆ. ಶೃತಿ ನಾಯ್ಡು ಪತಿ ರಮೇಶ್ ಗಗನ ಇಂದ್ರ ನಿರ್ದೇಶನದಲ್ಲಿ ‘ಪ್ರೀಮಿಯರ್ ಪದ್ಮಿನಿ’ ಚಿತ್ರ ಮೂಡಿ ಬರಲಿದೆ. ಈ ಚಿತ್ರದ ಪ್ರಮುಖ ಪಾತ್ರದಲ್ಲಿ ನವರಸ ನಾಯಕ ಜಗ್ಗೇಶ್ ಹಾಗೂ ಮಧುಬಾಲಾ ಅಭಿನಯಿಸುತ್ತಿದ್ದಾರೆ. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ಪ್ರೀಮಿಯರ್ ಕಾರ್ ಜೊತೆಗೆ ಫೋಟೋಶೂಟ್...







