Thursday, March 12, 2026

ಸಿನಿಮಾ

ಸಿನಿಮಾಸುದ್ದಿ

ಗಗನದ್ದೆತ್ತರಕ್ಕೆ ‘ಎನ್‍ಜಿಕೆ’ ಕ್ರೇಝ್ – ಕಹಳೆ ನ್ಯೂಸ್

ತಮಿಳು ನಟ ಸೂರ್ಯ ಅವರ ಅಭಿಮಾನಿಗಳು ಅತೀವ ನಿರೀಕ್ಷೆಯಲ್ಲಿದ್ದಾರೆ. ಕಾರಣ ‘ಎನ್‍ಜಿಕೆ’ ಸಿನಿಮಾ. ಬಹು ನಿರೀಕ್ಷೆಯಲ್ಲಿ ಕಾಯುತ್ತಿರುವ ಸೂರ್ಯ ಅವರ ಅಭಿಮಾನಿಗಳು, ಈಗಾಗಲೇ 200 ಅಡಿ ಕಟ್ಟೌಟ್ ಹಾಕಲು ಸದ್ಯ ರೆಡಿಯಾಗುತ್ತಿದ್ದಾರೆ. ತಮಿಳು ನಟರಾದರು ಕೂಡ , ಕರ್ನಾಟಕದಲ್ಲು ಇವರ ಅಭಿಮಾನಿಗಳಿಗೇನು ಕಮ್ಮಿ ಇಲ್ಲ. ಈಗಾಗ್ಲೇ ಬಿಡುಗಡೆಗೊಂಡಿರುವ ಸಿನಿಮಾ ಟ್ರೈಲರ್ ಹಾಗೂ ಹಾಡುಗಳು ಚಿತ್ರದ ಮೇಲಿನ ನಿರೀಕ್ಷೆಯನ್ನು ಇಮ್ಮಡಿಗೂಳಿಸಿದೆ. ಈ ಚಿತ್ರದಲ್ಲಿ ಸೂರ್ಯಗೆ ಜೋಡಿಯಾಗಿ ಸಾಯಿ ಪಲ್ಲವಿ ಹಾಗು ರಾಕುಲ್...
ಸಿನಿಮಾಸುದ್ದಿ

ಸ್ಯಾಂಡಲ್‍ವುಡ್‍ನಲ್ಲಿ ‘ಮೈ ನೇಮ್ ಈಸ್’ ಹವಾ – ಕಹಳೆ ನ್ಯೂಸ್

ಸ್ಯಾಂಡಲ್‍ವುಡ್‍ನಲ್ಲಿ ಕೆಲ ಸಮಯದ ಹಿಂದೆ ಒಂದೇ ರೀತಿಯ ಟೈಟಲ್‍ಗೆ ಬೇಕಾಗಿ ಭಾರೀ ಗುದ್ದಾಟಗಳು ನಡೆಯುತ್ತಿತ್ತು. ಆದರೆ ಈಗ ಪ್ರಸಿದ್ಧ ಹಳೇ ಚಿತ್ರಗಳ ಹೆಸರನ್ನೇ ಪುನಃ ಹೊಸ ಚಿತ್ರಕ್ಕಿಡುವ ಟ್ರೆಂಡ್ ಜೋರಾಗೇ ಇದೆ. ಹೊಸ ವಿಷ್ಯ ಏನಂದ್ರೆ ಒಂದೇ ರೀತಿಯ ಶೀರ್ಷಿಕೆಯನ್ನು ಹೋಲುವ ಚಿತ್ರಗಳು ಒಂದರ ಹಿಂದೆ ಒಂದರಂತೆ ಸಟ್ಟೇರುತ್ತಿದೆ. ಅದರಲ್ಲಿ ಮೊತ್ತಮೊದಲೆನೆಯದಾಗಿ ಸತೀಶ್ ನಿನಾಸಂ ನಾಯನಾಗಿ ಹಾಗು ಮೊದಲ ಬಾರಿಗೆ ನಿರ್ದೇಶಕನಾಗಿ ಕಾಣಿಸಿಕೊಳ್ಳುತ್ತಿರುವ ಚಿತ್ರ ‘ಮೈ ನೇಮ್ ಈಸ್ ಸಿದ್ದೇಗೌಡ’....
ಸಿನಿಮಾಸುದ್ದಿ

ಟ್ರೋಲಿಗರಿಗೆ ಆಹಾರವಾದ ಪ್ರಿಯಾಂಕ ಕೇಶವಿನ್ಯಾಸ -ಕಹಳೆ ನ್ಯೂಸ್

ಸಿನೆಮಾ ತಾರೆಯರು ವಿವಿಧ ಸಮಾರಂಭಗಳಿಗೆ ತೆರಳುವಾಗ ತರ ತರದ ಚಿತ್ರ ವಿಚಿತ್ರ ಉಡುಗೆ-ತೊಡುಗೆಗಳನ್ನು ಧರಿಸುವದು ಸರ್ವೇಸಾಮಾನ್ಯ. ಅದರ ಜೊತೆಗೆ ಲಲನೆಯರು ತಮ್ಮ ಕೇಶ ವಿನ್ಯಾಸವನ್ನು ಕೂಡ ವಿಭಿನ್ನವಾಗಿ ಅಲಂಕರಿಸಿಕೊಂಡು ಬಂದು ಫೊಟೋಕ್ಕೆ ಫೋಸ್ ಕೊಡುತ್ತಾರೆ. ಇದೀಗ ಹೀಗೆ ಮಾಡಿಕೊಂಡು ಬಂದು ಸುದ್ದಿಯಾದವರು ಬಾಲಿವುಡ್ ಬೆಡಗಿ ಪಿಯಾಂಕ ಚೋಪ್ರಾ. ತನಗಿಂತ ವಯಸ್ಸಿನಲ್ಲಿ ಸಣ್ಣ ಪ್ರಾಯದ ನಿಕ್ ಜೋನ್ಸ್ ಅನ್ನು ವರಿಸಿದ ಮೇಲೆ ಒಂದಿಲ್ಲಿನೊಂದು ಕಾರಣಕ್ಕೆ ಸುದ್ದಿಯಾಗುತ್ತಿರುವ ಪ್ರಿಯಾಂಕ, ಮೆಟ್ ಗಾಲ 2019...
ಸಿನಿಮಾಸುದ್ದಿ

ಆರು ಜನ ಹೀರೋ ಸಿನೆಮಾ ಹೀರೋ ಇರ್ವೇನಾ!? – ಕಹಳೆ ನ್ಯೂಸ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಬಹುಭಾಷಾ ನಟ ಎಂಬುದು ನಮಗೆ ಗೊತ್ತೇ ಇದೆ. ಹಾಗೂ ಸುದೀಪ್‍ಗೆ ಬಾಲಿವುಡ್ ಏನೂ ಹೊಸದೇನಲ್ಲ. ಪೈಲ್ವಾನ್, ಕೋಟಿಗೊಬ್ಬ 3 ಶೂಟಿಂಗ್ ನಂತರ ಸುದೀಪ್ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಟನೆಯ ‘ದಬಾಂಗ್ 3’ ಚಿತ್ರೀಕರಣಕ್ಕೆ ಹಾಜರಾಗಿದ್ದರು. ಸುದೀಪ್ ಇಲ್ಲಿ ಸಲ್ಮಾನ್‍ಗೆ ವಿಲನ್ ಆಗಿ ಅಭಿನಯಿಸುತ್ತಿದ್ದಾರೆ. ಮೊನ್ನೆ ತಾನೆ ದಬಾಂಗ್ ಸೆಟ್‍ನಿಂದ ಸಲ್ಲು ಜೊತೆ ಫೊಟೋ ಒಂದಕ್ಕೆ ಫೋಸ್ ನೀಡಿ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದ್ದರು...
ಸಿನಿಮಾಸುದ್ದಿ

ಮೇ 8ರಿಂದ ಮಂಗಳೂರಿನಲ್ಲಿ ಕೆಜಿಎಫ್2 ಶೂಟಿಂಗ್!! – ಕಹಳೆ ನ್ಯೂಸ್

ಕನ್ನಡ ಚಿತ್ರರಂಗವನ್ನು ಇಡೀ ಭಾರತೀಯ ಚಿತ್ರರಂಗವೇ ಹಿಂತಿರುಗಿ ನೋಡುವಂತೆ ಮಾಡಿದ್ದ ರಾಕಿಂಗ್ ಸ್ಟಾರ್ ಯಶ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್’ ಚಿತ್ರದ ಮುಂದಿನ ಭಾಗಕ್ಕಾಗಿ ಯಶ್ ಅಭಿಮಾನಿಗಳು ಹಾಗು ವಿಶ್ವದಾದ್ಯಂತ ಇರುವ ಸಿನಿರಸಿಕರು ಕಾತರದಿಂದ ಕಾಯುತ್ತಿದ್ದಾರೆ. ಹೀಗಿರುವಾಗ ಚಿತ್ರತಂಡ ಇತ್ತೀಚಿಗೆ ಆಯೋಜಿಸಿದ್ದ ಆಡಿಷನ್‍ಗೆ ಭರ್ಜರಿ ರೆಸ್ಪೋನ್ಸ್ ಸಿಕ್ಕಿದ ಬೆನ್ನಲ್ಲೇ, ಚಿತ್ರೀಕರಣವನ್ನು ಆರಂಭಿಸಲು ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡು ಯಶ್ ಆಗಮನಕ್ಕೆ ಕಾಯುತ್ತಿದ್ದಾರೆ. ಚುನಾವಣಾ ಪ್ರಚಾರ ಮುಗಿಸಿ ಚಿತ್ರತಂಡವನ್ನು ಸೇರಲು...
ಸಿನಿಮಾಸುದ್ದಿ

‘ಅಕ್ಷಯ ತೃತಿಯ’ದ ದಿನ ಯಶ್-ರಾಧಿಕಾ ಮಗಳ ದರ್ಶನ..! – ಕಹಳೆ ನ್ಯೂಸ್

ಯಶ್- ರಾಧಿಕಾ ಸ್ಯಾಂಡಲ್‍ವುಡ್‍ನಲ್ಲಿ ‘ರಾಕಿಂಗ್ ಜೋಡಿ’ ಅಂತಲೇ ಫೇಮಸ್. ಇಬ್ಬರದ್ದೂ ಅಪರೂಪದ ಜೋಡಿ. ಅದೆಷ್ಟೋ ಜೋಡಿಗಳಿಗೆ ಇಬ್ಬರೂ ಮಾದರಿಯಾಗಿದ್ದಾರೆ. ದಶಕದ ಲವ್‍ಸ್ಟೋರಿ ಬಳಿಕ ಯಶ್-ರಾಧಿಕಾ ವಿವಾಹವಾಗಿದ್ದರು. ಇದೀಗ ಮುದ್ದಾದ ಮಗುವಿನ ತಂದೆ-ತಾಯಿ ಆಗಿದ್ದಾರೆ. ‘ರಾಕಿಂಗ್ ಜೋಡಿ’ಗೆ ಮಗುವಾಗಿ ಆರು ತಿಂಗಳಾಗಿದೆ. ಆದರೆ ಯಶ್ ಮಗಳು ಹೇಗಿದ್ದಾಳೆ..? ಎಂಬ ಕುತೂಹಲಕ್ಕೆ ಮಾತ್ರ ಉತ್ತರ ಸಿಕ್ಕಿರಲಿಲ್ಲ. ಇದೀಗ ಅಕ್ಷಯ ತೃತೀಯದ ಸಂಭ್ರಮದಲ್ಲಿ ಯಶ್- ರಾಧಿಕಾ ಮಗಳ ಫೋಟೊ ರಿವೀಲ್ ಮಾಡೋಕೆ ಮುಂದಾಗಿದ್ದಾರೆ. ಇನ್‍ಸ್ಟಾಗ್ರಾಂನಲ್ಲಿ...
ಸಿನಿಮಾಸುದ್ದಿ

ತ್ರಿಷಾ ಕಣ್ಣನ್‍ಗೆ ಪ್ರಪೋಸ್ ಮಾಡಿದ ಚಾರ್ಮಿ ಕೌರ್: ಕಹಳೆ ನ್ಯೂಸ್

ಪ್ರೀತಿ ಪ್ರೇಮ ಪ್ರಣಯ.. ಇದು ಯಾರ ಮೇಲೆ ಯಾರಿಗೂ ಬರುವಂತಹ ಒಂದು ಸುಂದರ ಅನುಭವ. ಅದು ಹುಡುಗ-ಹುಡುಗಿಯರ ನಡುವೆ ಇರಬಹುದು ಅಥವಾ ಹುಡುಗಿಯರಿಬ್ಬರ ನಡುವೆ, ಇಲ್ಲಾ ಹುಡುಗರಿಬ್ಬರ ಮಧ್ಯೆ ಮೂಡಬಹುದು. ನಮ್ಮ ಸಮಾಜದಲ್ಲೂ ಸಲಿಂಗ ವಿವಾಹವೂ ಈಗ ಕಾನೂನು ಬದ್ಧವಾಗಿದೆ. ಇದನ್ನೇ ಪ್ರಸ್ತಾಪಿಸಿ ಇತ್ತೀಚೆಗೆ ದಕ್ಷಿಣ ಭಾರತದ ಖ್ಯಾತ ನಟಿ ಚಾರ್ಮಿ ಕೌರ್, ಕ್ಯೂಟ್ ಬ್ಯಾಟಿ ನಟಿ ತ್ರಿಷಾ ಕಣ್ಣನ್‍ರನ್ನು ಪ್ರೊಪೊಸ್ ಮಾಡಿದ್ದಾರೆ. ಮೇ.4 ರಂದು ಹುಟ್ಟುಹಬ್ಬದ ಖುಷಿಯಲ್ಲಿದ್ದ ತ್ರಿಷಾಗೆ...
ಸಿನಿಮಾಸುದ್ದಿ

ಪ್ರಶಾಂತ್ ನೀಲ್‍ಗೆ ಮದುವೆ ವಾರ್ಷಿಕೋತ್ಸವ ಸಂಭ್ರಮ..! – ಕಹಳೆ ನ್ಯೂಸ್

ಕೆಜಿಎಫ್.. ಕನ್ನಡ ಚಿತ್ರರಂಗದ ಹೆಮ್ಮೆ ಎನಿಸಿಕೊಂಡ ಸಿನಿಮಾ. ಗಲ್ಲಾ ಪೆಟ್ಟಿಗೆಯಲ್ಲಿ ಧೂಳೆಬ್ಬಿಸೋದ್ರ ಜೊತೆಗೆ ಜನಮೆಚ್ಚುಗೆ ಗಳಿಸಿತ್ತು. ನರಾಚಿಯ ಚಿನ್ನದ ಬೇಟೆಯ ಕಥೆ ಇಂಡಿಯಾ ಪೂರ್ತಿ ಸುತ್ತಿ ಬಂದಿತ್ತು. ಅಂದ್ಹಾಗೆ ಇಂಥದ್ದೊಂದು ಸೂಪರ್ ಹಿಟ್ ಸಿನಿಮಾದ ಹಿಂದೆ ಅದೊಂದು ಶಕ್ತಿಯಿತ್ತು. ನಿರ್ದೇಶಕ ಪ್ರಶಾಂತ್ ನೀಲ್ ಥಟ್ ಅಂತಾ ಭಾರತೀಯ ಚಿತ್ರರಂಗ ಕದ ತಟ್ಟಿದ್ದರು. ಹೀಗೂ ಸಿನಿಮಾ ಮಾಡಬಹುದು ಅಂತಾ ತೋರಿಸಿಕೊಟ್ಟಿದ್ದರು. ಅಂದ್ಹಾಗೆ ಇವತ್ತು ಪ್ರಶಾಂತ್ ನೀಲ್‍ಗೆ 8ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ....
1 73 74 75 76 77 92
Page 75 of 92