Thursday, March 12, 2026

ಸಿನಿಮಾ

ಸಿನಿಮಾಸುದ್ದಿ

ವರಮಹಾಲಕ್ಷ್ಮೀಯಂದು ‘ಅವನೇ ಕುರುಕ್ಷೇತ್ರದಲ್ಲಿ ಪೈಲ್ವಾನ್’- ಕಹಳೆ ನ್ಯೂಸ್

ಇತರೆ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ವಾರ್ ತುಸು ಕಮ್ಮಿಯೇ. ಆದರೆ ಈ ಬಾರಿ ವರಮಹಾಲಕ್ಷ್ಮೀ ದಿನದಂದು ಹಿಂದೆಂದೂ ಕಂಡಿರದ ಬಿಗ್ಗೆಸ್ಟ್ ಸ್ಟಾರ್ ವಾರ್ ನಡೆಯಲಿದೆ. ಅದೂ ಇಬ್ಬರ ನಡುವೆ ಅಲ್ಲ. ಮೂರು ಸ್ಟಾರ್‌ಗಳ ನಡುವೆ ಅನ್ನೋದು ಅಚ್ಚರಿಯ ಸಂಗತಿ. ಮತ್ತು ಅವರ ಮೂರು ಚಿತ್ರಗಳೂ ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ 5 ಮತ್ತು 5ಕ್ಕಿಂತ ಹೆಚ್ಚು ಭಾಷೆಗಳಲ್ಲಿ ಬಿಡುಗಡೆಗೆ ಪ್ಲಾನ್ ಮಾಡಿಕೊಂಡಿರುವ ಚಿತ್ರಗಳು. ಮೊದಲಿಗೆ ಸಿಂಪಲ್ ಸ್ಟಾರ್ ರಕ್ಷಿತ್...
ಸಿನಿಮಾಸುದ್ದಿ

ರಿಲೀಸ್ ಆಯ್ತು ‘ಗಿಮಿಕ್’ ಟ್ರೈಲರ್– ಕಹಳೆ ನ್ಯೂಸ್

ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಹಾರರ್ ಕಾಮೆಡಿ ‘ಗಿಮಿಕ್’ ಚಿತ್ರದ ಚಿತ್ರೀಕರಣ ಪೂರ್ಣಗೊಂಡು ಬಹಳ ಸಮಯವೇ ಆಗಿತ್ತು. ಇದೀಗ ಬಿಡುಗಡೆಗೆ ಸಜ್ಜಾಗಿರುವ ಗಿಮಿಕ್ ಸಿನೆಮದ ಟ್ರೈಲರ್ ಬಿಡುಗಡೆಗೊಂಡಿದ್ದು. ಚಿತ್ರದಲ್ಲೆಲ್ಲೂ ಹಾರರ್ ಅಥವಾ ಕಾಮೆಡಿ ಪಂಚ್ ಅಷ್ಟೇನೂ ವರ್ಕ್ ಔಟ್ ಆದಂತೆ ಕಾಣಿಸುತ್ತಿಲ್ಲ.ಹೇಳಿ ಕೇಳಿ ಇದು ಸಾಧಾರಣ ಯಶಸ್ಸು ಗಳಿಸಿದ್ದ ತಮಿಳಿನ ದಿಲ್ಲುಕು ದುಡ್ಡು ಚಿತ್ರದ ರೀಮೇಕ್ ಸಿನೆಮ ಬೇರೆ. ಹೀಗಿರುವಾಗ ಕನ್ನಡದ ನೇಟಿವೇಟಿಗೆ ತಕ್ಕಂತೆ ಚಿತ್ರದಲ್ಲಿ ಸ್ವಲ್ಪವೇನಾದರೂ ಬದಲಾವಣೆ ಮಾಡಬೇಕಿತ್ತು...
ಸಿನಿಮಾಸುದ್ದಿ

ಹೀರೋ ಆಗಲಿದ್ದಾರ ಈ ಸ್ಟಾರ್ ನಿರ್ಮಾಪಕ!? – ಕಹಳೆ ನ್ಯೂಸ್

ಕನ್ನಡ ಚಿತ್ರರಂಗ ಈಗ ಬದಲಾವಣೆಯ ಹೊಸ್ತಿಲಿನಲ್ಲಿದೆ. ಹೊಸ ಹೊಸ ಕಲಾವಿದರು ಕನ್ನಡ ಚಿತ್ರರಂಗವನ್ನು ತಮ್ಮದೇ ಆದ ವಿಭಿನ್ನ ದೃಷ್ಟಿಕೋನಗಳಿಂದ ಚಿತ್ರ ನಿರ್ಮಿಸಿ, ದೇಶದ ಉದ್ದಗಲಕ್ಕೂ ಕನ್ನಡ ಚಿತ್ರದ ಕಂಪನ್ನು ಪಸರಿಸುತ್ತಿದ್ದಾರೆ. ಉದಾಹರಣೆಗೆ ಇದ್ರಲ್ಲಿ ಇತ್ತೀಚಿಗಿನ ಕೆಜಿಎಫ್ ಚಿತ್ರದ ಯಶಸ್ಸು ಕೂಡ ಒಂದು. ರೀಮೇಕ್‍ಗಳು ಕಮ್ಮಿ ಆಗ್ತಿದೆ ಬದಲಾಗಿ ಕನ್ನಡ ಚಿತ್ರಗಳು ಪರಭಾಷೆಗೆ ರೀಮೇಕ್ ಆಗ್ತಿದೆ. ಇದಕ್ಕೆಲ್ಲ ಕಾರಣಕರ್ತರು ಯಾರೆಂದರೆ ಹೊಸ ತಂಡವನ್ನು ಕಟ್ಟಿಕೊಂಡು ಬಜೆಟ್ ದೊಡ್ಡದಾಗಿರಲಿ ಚಿಕ್ಕದಾಗಿರಲಿ ಸಧಭಿರುಚಿಯ ಅತ್ಯುತ್ತಮ...
ಸಿನಿಮಾಸುದ್ದಿ

ಅಮರ್ ಚಿತ್ರದಲ್ಲಿ ನಟಿಸಲು ರಜನಿಕಾಂತ್ ರೆಡಿ ಇದ್ರು!– ಕಹಳೆ ನ್ಯೂಸ್

ರೆಬಲ್‍ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ನಾಯಕ ನಟನಾಗಿ ಅಭಿನಯಿಸಿರುವ ಚೊಚ್ಚಲ ಚಿತ್ರ “ಅಮರ್’ ತೆರೆಗೆ ಬರೋದಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಚಿತ್ರ ಇದೇ ಮೇ 31ರಂದು ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಇನ್ನು ಚಿತ್ರತಂಡ ಭರ್ಜರಿಯಾಗಿ ಚಿತ್ರದ ಪ್ರಮೋಶನ್ ಕೆಲಸಗಳಿಗೆ ಚಾಲನೆ ನೀಡಿದ್ದು, ಇದೇ ವೇಳೆ “ಅಮರ್’ ಚಿತ್ರ ತೆರೆಮರೆಯ ಕುರಿತಾಗಿ ಒಂದೊಂದೆ ಸಂಗತಿಗಳು ಹೊರಬೀಳುತ್ತಿದೆ. ಮುಖ್ಯವಾಗಿ “ಅಮರ್’ ಚಿತ್ರದಲ್ಲಿ ನಟಿಸಲು ರಜನಿಕಾಂತ್ ಕೂಡಾ ಸಿದ್ಧವಿದ್ದರು ಎಂಬ ಅಂಶವನ್ನು ಚಿತ್ರತಂಡ ಬಾಯಿಬಿಟ್ಟಿದೆ....
ಸಿನಿಮಾಸುದ್ದಿ

ಬಾಲಿವುಡ್‍ಗೆ ಮತ್ತೆ ಕಾಲಿಟ್ಟ ‘ನಾಗವಲ್ಲಿ’– ಕಹಳೆ ನ್ಯೂಸ್

ಮೋಹನ್ ಲಾಲ್, ಶೋಭನಾ, ಸುರೇಶ್ ಗೋಪಿ ಮುಖ್ಯ ಭೂಮಿಕೆಯಲ್ಲಿದ್ದ ಮತ್ತು ಹೆಸರಾಂತ ನಿರ್ದೇಶಕ ಫಾಝಿಲ್ ಅವರ ನಿರ್ದೇಶನದಲ್ಲಿ 1993ರಲ್ಲಿ ಬಿಡುಗಡೆಗೊಂಡ ‘ಮಣಿಚಿತ್ರತ್ತಾಳ್’ ಎಂಬ ಮಲಯಾಳಂ ಚಿತ್ರ ಆ ಕಾಲದಲ್ಲಿ ಭಾರೀ ಸದ್ದು ಮಾಡಿತ್ತು. ಬಳಿಕ ಈ ಚಿತ್ರ ಕನ್ನಡ, ತಮಿಳು, ಬಂಗಾಲಿ ಮತ್ತು ಹಿಂದಿ ಭಾಷೆಗಳಲ್ಲಿ ರಿಮೇಕ್ ಆಗಿ ಅಲ್ಲಿಯೂ ಭಾರೀ ಸಕ್ಸಸ್ ಕಂಡಿತ್ತು. ಹಿಂದಿಯಲ್ಲಿ ಭೂಲ್ ಬುಲಯ್ಯಾ ಎಂಬ ಹೆಸರಿನಲ್ಲಿ 2007ರಲ್ಲಿ ಈ ಚಿತ್ರ ತೆರೆಕಂಡು ಭಾರೀ ಯಶಸ್ಸನ್ನು...
ಸಿನಿಮಾಸುದ್ದಿ

ಶಾಹಿದ್, ಟೈಗರ್ ಶ್ರಾಫನ್ನು ಹಿಂದಿಕ್ಕಿದ ಯಶ್!!– ಕಹಳೆ ನ್ಯೂಸ್

ಹೌದು. ನಮ್ಮ ರಾಕಿಂಗ್ ಸ್ಟಾರ್ ಯಶ್ ಬಹುತೇಕ ಬಾಲಿವುಡ್ ನಟರನ್ನು ಹಿಂದಿಕ್ಕಿದ್ದಾರೆ  ಅದು ಹೇಗೆ ಅಂದ್ರೆ, ಪ್ರತಿಷ್ಠಿತ ಟೈಮ್ಸ್ ಆಫ್ ಇಂಡಿಯಾ ನಡೆಸಿರುವ ಸಮೀಕ್ಷೆ ಪ್ರಕಾರ ‘ಮೋಸ್ಟ್ ಡಿಸೈರೇಬಲ್ ಮೆನ್ 2019’ನಲ್ಲಿ ಯಶ್ ರೀ ಎಂಟ್ರಿ ಪಡೆದು 14ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಹೀಗಾಗುವುದಕ್ಕೆ ಕಾರಣ ‘ಕೆಜಿಎಫ್’ ಚಿತ್ರದ ಭರ್ಜರಿ ಯಶಸ್ಸು. ಕೆಜಿಎಫ್ ಬಿಡುಗಡೆಗೆ ಮೊದಲು ಕೇವಲ ಸ್ಯಾಂಡಲ್‍ವುಡ್‍ಗೆ ಮಾತ್ರ ಸ್ಟಾರ್ ನಟನಾಗಿದ್ದ ಯಶ್, ಏಕಕಾಲಕ್ಕೆ ಬರೋಬ್ಬರಿ ಪಂಚ ಭಾಷೆಗಳಲ್ಲಿ ಪ್ರಪಂಚದಾದ್ಯಂತ...
ಸಿನಿಮಾಸುದ್ದಿ

ಬಿಡುಗಡೆಯಾಯ್ತು ‘ನಿಖಿಲ್ ಎಲ್ಲಿದ್ದಿಯಪ್ಪಾ’ ಸಿನೆಮಾ ಫಸ್ಟ್ ಲುಕ್ ಪೋಸ್ಟರ್ – ಕಹಳೆ ನ್ಯೂಸ್

ಲೋಕಸಭೆ ಚುನಾವಣೆ ವೇಳೆ ಹೆಚ್ಚು ಸದ್ದು ಮಾಡಿದ “ನಿಖಿಲ್ ಎಲ್ಲಿದ್ದೀಯಪ್ಪಾ’ ಮತ್ತು “ಜೋಡೆತ್ತು’ ಮಾತುಗಳು. ಅತೀ ಹೆಚ್ಚು ಕೇಳಲ್ಪಟ್ಟ ಈ ಪದಗಳೀಗ ಸಿನಿಮಾ ಶೀರ್ಷಿಕೆಗಳಾಗಿ, ಪೋಸ್ಟರ್ ಗಳು ಹೊರಬಂದಿವೆ. ‘ನಿಖಿಲ್ ಎಲ್ಲಿದ್ದೀಯಪ್ಪಾ’ ಶೀರ್ಷಿಕೆಯಡಿ ಸಿನಿಮಾ ಮಾಡಲು ಹಲವರು ಮುಂದೆ ಬಂದಿದ್ದರೂ, ಅಂತಿಮವಾಗಿ ಸ್ವತಃ ನಿಖಿಲ್ಲೇ ಆ ಶೀರ್ಷಿಕೆಯಲ್ಲಿ ನಾನೆ ಸಿನೆಮಾ ಮಡುತ್ತೇನೆ ಮತ್ತುಯ ಪುಟ್ಟರಾಜು ನಾನೇ ಈ ಸಿನೆಮಾಕ್ಕೆ ನಿರ್ಮಾಪಕನಾಗುತ್ತಾನೆ ಅಂದಿದ್ರು. ಆದರೀಗ “ನಿಖಿಲ್ ಎಲ್ಲಿದ್ದೀಯಪ್ಪಾ’ ಚಿತ್ರದ ಫಸ್ಟ್ಲುಕ್  ಬಿಡುಗಡೆಯಾಗಿದೆ. ಚಿತ್ರದ...
ಸಿನಿಮಾಸುದ್ದಿ

ಡಿಯರ್ ಕಾಮ್ರೇಡ್ ಚಿತ್ರದಿಂದ ಮತ್ತೊಂದು ಲವ್ಲಿ ಸಾಂಗ್ ಔಟ್..! – ಕಹಳೆ ನ್ಯೂಸ್

ಟಾಲಿವುಡ್‍ನ ಬೆಸ್ಟ್ ಜೋಡಿಗಳಲ್ಲಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಕೂಡ ಒಂದು. ‘ಗೀತಾ ಗೋವಿಂದಂ’ ಚಿತ್ರದ ಮೂಲಕ ಕಮಾಲ್ ಮಾಡಿದ್ದ ಜೋಡಿ ಇದೀಗ ‘ಡಿಯರ್ ಕಾಮ್ರೇಡ್’ನಲ್ಲಿ ಮತ್ತೆ ಒಂದಾಗಿದೆ. ಭರತ್ ಕಾಮಾ ನಿರ್ದೇಶನದಲ್ಲಿ ಚಿತ್ರ ಸೆಟ್ಟೇರಿದ್ದು, ಈಗಾಗಲೇ ಟೀಸರ್ ಹಾಗೂ ಕೆಲ ಹಾಡುಗಳಿಂದ ನೋಡುಗರ ಗಮನ ಸೆಳೆದಿದೆ. ಇದೀಗ ಚಿತ್ರತಂಡ ಮತ್ತೊಂದು ರೊಮ್ಯಾಂಟಿಕ್ ಸಾಂಗ್ ರಿಲೀಸ್ ಮಾಡಿದೆ. ‘ಕಡಲಂತೆ ಕಾದ ಕಣ್ಣು.. ನದಿಯಂತೆ ಓಡುವ ಕನಸು’ ಅನ್ನೋ...
1 70 71 72 73 74 92
Page 72 of 92