ಕ್ರೇಝಿ ಸ್ಟಾರ್ ರವಿಚಂದ್ರನ್ ಅವರ ಸುಪುತ್ರಿ ಗೀತಾಂಜಲಿ ಉದ್ಯಮಿ ಅಜಯ್‍ಯನ್ನು ವರಿಸಿದ್ದಾರೆ. ಇಂದು ನಡೆದ ಆರತಕ್ಷತೆ ಕಾರ್ಯಕ್ರಮಕ್ಕೆ ಸಿನೆಮಾ ಹಾಗೂ ರಾಜಕೀಯ ಮುಖಂಡರು ಆಗಮಿಸಿ, ನವ ಜೋಡಿಗಳಿಗೆ ಹಾರೈಸಿದರು....
ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಬಹುನಿರೀಕ್ಷೆಯ, ಭಾರತದ ಬಿಗ್ಗೆಸ್ಟ್ ಆ್ಯಕ್ಷನ್ ಥ್ರಿಲ್ಲರ್ ‘ಸಾಹೋ’ ಈ ಬಾರಿಯ ಸ್ವಾತಂತ್ರ್ಯ ದಿನಕ್ಕೆ ಜಗತ್ತಿನಾದ್ಯಂತ ಬರೋಬ್ಬರಿ ಹತ್ತು ಸಾವಿರ ಚಿತ್ರ ಮಂದಿರಗಳಲ್ಲಿ ಭರ್ಜರಿಯಾಗಿ ತೆರೆಕಾಣಲಿದೆ. ಮೊನ್ನೆ ತಾನೆ ಚಿತ್ರದ ಮೊದಲ ಪೋಸ್ಟರನ್ನು ರಿಲೀಸ್ ಮಾಡಿದ್ದ ಪ್ರಭಾಸ್ ಇದೀಗ ದ್ವಿತೀಯ ಪೊಸ್ಟರ್ ರಿಲೀಸ್ ಆಗಿದೆ. ಇದರಲ್ಲಿ ಪ್ರಭಾಸ್ ಬೈಕ್ ಚೇಸಿಂಗ್‍ನಲ್ಲಿರುವ ಆ್ಯಕ್ಷನ್ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆಗೊಂಡ ಒಂದೇ ಗಂಟೆಯಲ್ಲಿ 48ಸಾವಿರ ಲೈಕ್ಸ್ ಗಳನ್ನು ಗಿಟ್ಟಿಸಿಕೊಂಡಿದೆ....
ನಿರ್ದೆಶನದ ಮೂಲಕ ಸದ್ದು ಮಾಡಿದ ರಿಷಬ್ ಶೆಟ್ಟಿ ಬೆಲ್‍ಬಾಟಾಮ್ ಚಿತ್ರದಲ್ಲಿ ನಟಿಸಿ ನಿರ್ದೇಶನಕ್ಕೂ ನಟನೆಗೂ ಸೈ ಎನಿಸಿಕೊಂಡಿದ್ದಾರೆ. ಈಗಾಗಲೇ ಟೈಟಲ್ ಮೂಲಕ ಸಂಚಲನಗೊಳ್ಳುತ್ತಿರುವ ‘ಅಂಟಗೋನಿ ಶೆಟ್ಟಿ’ ಚಿತ್ರದ ಚಿತ್ರೀಕರಣ ಜನವರಿಯಲ್ಲಿ ಆರಂಭವಾಗಲಿದೆ. ಶ್ರೀಪಾದ್ ಜೋಶಿ ಹಾಗೂ ಸಮರ್ಥ್ ಕಡ್ಕೋಳ್ ಇಬ್ಬರೂ ಕೂಡ ರಿಷಬ್ ಡೈರೆಕ್ಷನ್ ಟೀಮ್‍ನಲ್ಲಿದ್ದವರು. ಶ್ರೀಪಾದ್ ಜೋಶಿ ಮತ್ತು ಸಮರ್ಥ್ ಕಡ್ಕೋಳ್ ಇಬ್ಬರೂ ಕೂಡ ಹಿಂದಿ ಇಂಡಸ್ಟ್ರಿಯಿಂದ ಬಂದವರು. ನಿರ್ದೇಶಕ ಸಮರ್ಥ್ ಕಡ್ಕೋಳ್ ಈ ಕಥೆಯನ್ನು ರಿಷಬ್‍ಗಾಗಿ ಬರೆದಿದ್ದಾರೆ...
ಕಿರಿಕ್ ಪಾರ್ಟಿ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಇದೀಗ ಬಹುಬೇಡಿಕೆಯ ನಟಿ ಎನಿಸಿಕೊಂಡಿರುವ ರಶ್ಮಿಕಾ ಮಂದಣ್ಣ ಈಗ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ. ಒಂದರ ಹಿಂದೊಂದರಂತೆ ಸಿನೆಮಗಳು ಬರ್ತಾನೇ ಇದ್ದು ಫುಲ್ ಬ್ಯುಸಿಯಾಗಿರುವ ರಶ್ಮಿಕಾ ದಿಢೀರನೆ ಸಂಭಾವನೆ ದುಪ್ಪಟ್ಟು ಮಾಡಿಕೊಂಡಿದ್ದಾರಂತೆ. ಕೆಲವೇ ವರ್ಷದಲ್ಲಿ ಮೂರು ನಾಲ್ಕು ಸಿನೆಮಾಗಳಲ್ಲಿ ನಟಿಸಿ, ಟಾಪ್ ಹೀರೊಗಳೊಂದಿಗೆ ತೆರೆ ಹಂಚಿಕೊಂಡಿರುವ ಕಿರಿಕ್ ಸುಂದರಿಗೆ ಬೇಡಿಕೆ ಹೇಗಿದೆ. ಬೇಡಿಕೆ ಎಷ್ಟರ ಮಟ್ಟಿಗೆ ಹೆಚ್ಚಾಗಿದೆ ಅಂದ್ರೆ ದಕ್ಷಿಣ ಭಾರತದ ಸ್ಟಾರ್ ನಟರ...
ಕೆಜಿಎಫ್ ಚಾಪ್ಟರ್ 1ರ ಅಭೂತಪೂರ್ವ ಯಶಸ್ಸಿನ ನಂತರ, ಚಾಪ್ಟರ್ 2ಗಾಗಿ ಯಶ್ ಅಭಿಮಾನಿಗಳಲ್ಲದೆ ವಿಶ್ವ ಸಿನಿಪ್ರೇಮಿಗಳು ಕಾತರ-ಕುತೂಹಲದಿಂದ ಎದುರು ನೋಡುತ್ತಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಶೂಟಿಂಗ್ ಶುರು ಮಾಡಿಕೊಂಡಿರುವ ಚಿತ್ರತಂಡವನ್ನು ಯಶ್ ಇನ್ನಷ್ಟೇ ಸೇರಿಕೊಳ್ಳಲಿದ್ದಾರೆ. ಹೀಗಿರುವಾಗ ಚಿತ್ರದ ಉಳಿದೆಲ್ಲಾ ಕಾರ್ಯಗಳು ಭರದಿಂದ ಸಾಗುತ್ತಿದ್ದು, ರವಿ ಬಸ್ರೂರು ಜಾಗತಿಕ ಮಟ್ಟದಲ್ಲಿ ಸಂಗೀತ ಸಂಯೋಜನೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಚಾಪ್ಟರ್ 1ರಲ್ಲಿ ಹಲವು ಖಳನಾಯಕರಿದ್ದು ಅದರಲ್ಲಿ ರಾಕಿಗೆ ಸುಪಾರಿ ಕೊಟ್ಟಿದ್ದ ಆ್ಯಂಡ್ರ್ಯೂಸ್ ಕ್ಲೈಮ್ಯಾಕ್ಸ್ ವೇಳೆ ರಾಕಿಗೆ...
ಪ್ರಿಯಾಂಕಾ ಉಪೇಂದ್ರ ಮುಖ್ಯ ಭೂಮಿಕೆಯ ‘ದೇವಕಿ’ ಸಿನಿಮಾ ಈಗಾಗಲೇ ಹಲವು ಕಾರಣಗಳಿಂದ ಸುದ್ದಿಯಲ್ಲಿದೆ. ಚೈಲ್ಡ್ ಟ್ರಾಫಿಕಿಂಗ್ ಕುರಿತಾಗ ಬಹುಮುಖ್ಯ ಕಥೆಯುಳ್ಳ ಸಿನಿಮಾ ಅನ್ನೋದು ಒಂದೆಡೆಯಾದ್ರೆ, ಉಪೇಂದ್ರ ಮಗಳು ಐಶ್ವರ್ಯ ಈ ಚಿತ್ರದ ಮೂಲಕ ಸ್ಯಾಂಡಲ್‍ವುಡ್‍ಗೆ ಲಾಂಚ್ ಆಗ್ತಿದ್ದಾರೆ ಅನ್ನೋದು ಇನ್ನೊಂದು ವಿಶೇಷ. ಜೊತೆಗೆ ಹಿಂದಿಯ ನವ ನಟನೊಬ್ಬ ದೇವಕಿ ಚಿತ್ರದ ಮೂಲಕ ಕನ್ನಡಕ್ಕೆ ಕಾಲಿಡ್ತಿದ್ದಾರೆ. ರಾಮ್‍ಗೋಪಾಲ್ ವರ್ಮಾ ನಿರ್ದೇಶನದಲ್ಲಿ ಮೂಡಿಬಂದಿದ್ದ ದಿ ಅಟ್ಯಾಕ್ಸ್ 26/11′ ಚಿತ್ರದಲ್ಲಿ ಕಸಬ್ ಪಾತ್ರ ಮಾಡಿದ್ದ...
ಮಲಯಾಳಂನ ಸ್ಟಾರ್ ನಟ, ಮೆಗಾ ಸ್ಟಾರ್ ಪುತ್ರ ದುಲ್ಕರ್ ಸಲ್ಮಾನ್ ಬಾಲಿವುಡ್‍ನಲ್ಲಿ ‘ಕ್ಯಾರವಾನ್’ ಏರಿ ಇಳಿದಿದ್ದರು. ಇದೀಗ ಮತ್ತೆ ಬಾಲಿವುಡ್‍ಗೆ ಕಾಲಿಟ್ಟಿರುವ ದುಲ್ಕರ್ ಕ್ರಿಕೆಟ್ ಹಿನ್ನಲೆಯ ಕಥೆಯನ್ನು ಆಯ್ಕೆ ಮಾಡಿಕೊಂಡಿರುವುದು ಕುತೂಹಲ ಮೂಡಿಸಿದೆ. ಅಲ್ಲದೆ ಇಲ್ಲಿ ದುಲ್ಕರ್ ಗೆ ಜೋಡಿಯಾಗಿ ಸೋನಮ್ ಕಪೂರ್ ನಟಿಸುತ್ತಿರುವುದು ವಿಶೇಷ. ಚಿತ್ರಕ್ಕೆ ‘ದಿ ಝೋಯಾ ಫ್ಯಾಕ್ಟರ್’ ಎಂದು ಹೆಸರಿಡಲಾಗಿದೆ. ಚಿತ್ರದ ಮೊದಲ ನೋಟ ಬಿಡುಗಡೆಯಾಗಿದ್ದು, ಈ ಚಿತ್ರವು ಕ್ರಿಕೆಟ್ ಹಿನ್ನಲೆಯುಳ್ಳದಾಗಿದ್ದು ಎಂಬುದನ್ನು ಸಾಬೀತು ಪಡಿಸಲು 2 ಬ್ಯಾಟ್...
ಅಭಿನಯ ಚತುರ ಬಿರುದಾಂಕಿತ ಸತೀಶ್ ನೀನಾಸಂ ‘ಅಯೋಗ್ಯ’ ಚಿತ್ರದ ದೊಡ್ಡ ಬ್ರೇಕ್ ಬಳಿಕ ಸಧಬಿರುಚಿ ಕಥೆಗಳನ್ನೇ ಆಯ್ಕೆ ಮಾಡಲು ಶುರು ಮಾಡಿಕೊಂಡಿದ್ದಾರೆ. ಡಿಕೆ ರವಿ ಸಾವಿನ ಕುರಿತಾಗಿ ಮೂಡಿ ಬಂದಿದ್ದ ‘ಚಂಬಲ್’ ಸೂಪರ್ ಹಿಟ್ ಎನಿಸದಿದ್ದರೂ ಉತ್ತಮ ಕನ್ನಡ ಚಿತ್ರಗಳ ಪಟ್ಟಿಗೆ ಸೇರಿಕೊಂಡಿತು. ಅದಾದ ಮೇಲೆ ತನ್ನದೇ ನಿರ್ದೇಶನದಲ್ಲಿ ‘ಮೈ ನೇಮ್ ಈಸ್ ಸಿದ್ದೇ ಗೌಡ’ ಎಂಬ ಚಿತ್ರವನ್ನು ಲಾಂಚ್ ಮಾಡಲಾಯಿತು. ಆದ್ರೆ ಅದಕ್ಕೂ ಮೊದಲು ಉದಯ್ ಕೆ ಮೆಹ್ತಾ...