ಶತಕದ ಹೊಸ್ತಿಲಿನಲ್ಲಿ ವರ್ಷದ ಏಕೈಕ ಸೂಪರ್ ಹಿಟ್ ಸಿನೆಮಾ ‘ಕಟಪಾಡಿ ಕಟ್ಟಪ್ಪ’ – ಕಹಳೆ ನ್ಯೂಸ್
2019ರ ಕೋಸ್ಟಲ್‍ವುಡ್ ಪಯಣದಲ್ಲಿ ಹೊಸ ದಾಖಲೆಗೆ ವೇದಿಕೆ ಸಿದ್ಧವಾಗುತ್ತಿದೆ. ತುಳು ಸಿನೆಮಾವೊಂದು ಈಗ ಶತಕದ ದಾಖಲೆ ಬರೆಯುವ ಹಾದಿಯಲ್ಲಿದೆ. ಜೆ. ಪಿ. ತೂಮಿನಾಡ್ ನಿರ್ದೇಶನದ ‘ಕಟಪಾಡಿ ಕಟ್ಟಪ್ಪ’ ಇನ್ನು ಕೆಲವು ದಿನಗಳಲ್ಲಿ ಶತ ದಿನ ಪೂರೈಸಲಿದೆ. ಪ್ರೇಕ್ಷಕರು ಕಟ್ಟಪ್ಪನ ಕೈ ಹಿಡಿದಿದ್ದು, ಸಖತ್ ರೆಸ್ಪಾನ್ಸ್ ನೀಡಿದ್ದಾರೆ. ಭಾರೀ ದಿನಗಳ ನಂತರ ತುಳುವಿನ ಒಂದು ಸಿನೆಮಾ 100ರ ಗಡಿಯತ್ತ ಸಾಗುತ್ತಿರುವುದು ಕೋಸ್ಟಲ್‍ವುಡ್‍ನ ಅಭಿವೃದ್ಧಿಯ ದೃಷ್ಟಿಯಿಂದ ಒಂದು ಉತ್ತಮ ಬೆಳವಣಿಗೆ. ವಿಶೇಷವೆಂದರೆ ಈ...







