ದಿಗಂತ್‍ಗೆ ದೊಡ್ಡ ಬ್ರೇಕ್ ನೀಡಲಿದೆಯಾ ಪವರ್ ಸ್ಟಾರ್ ಸಿನೆಮಾ – ಕಹಳೆ ನ್ಯೂಸ್
ಪವರ್ ಸ್ಟಾರ್ ಪುನೀತ್‍ರಾಜ್‍ಕುಮಾರ್ ಮತ್ತು ಸಂತೋಷ್ ಆನಂದ್‍ರಾಮ್ ಕಾಂಬಿನೇಷನ್‍ನ ‘ಯುವರತ್ನ’ ಚಿತ್ರಕ್ಕೆ ದಿನಂದಿಂದ ದಿನಕ್ಕೆ ಪೋಷಕನಟರನ್ನು ಸೇರಿಸಿಕೊಳ್ಳುತ್ತಿದ್ದಾರೆ ನಿರ್ದೇಶಕ ಸಂತೋಷ್. ಮೊನ್ನೆ ತಾನೆ ಪ್ರಕಾಶ್‍ರಾಜ್‍ರವರನ್ನು ಚಿತ್ರತಂಡಕ್ಕೆ ಸೇರಿಸಿಕೊಂಡಿದ್ದ ಚಿತ್ರತಂಡ ಇದೀಗ, ಕನ್ನಡದ ಸ್ಟಾರ್ ನಟರೊಬ್ಬರನ್ನು ‘ಯುವರತ್ನ’ದಲ್ಲಿ ವಿಶೇಷ ಪಾತ್ರಕ್ಕಾಗಿ ಬರಮಾಡಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದಲ್ಲಿ ಪುನೀತ್‍ಗೆ ಪೋಷಕ ನಟರಾಗಿ ಸ್ಯಾಂಡಲ್‍ವುಡ್‍ನ ಬಹುಬೇಡಿಕೆಯ ಖಳ ನಟ ಡಾಲಿ ಧನಂಜಯ್ ಜೊತೆಗೆ ನಾಯಕ-ಖಳ ಮತ್ತು ಪೋಷಕ ನಟ ವಸಿಸ್ಠ ಸಿಂಹ ಇದ್ದಾರೆ. ಇದೀಗ...







