ಸ್ಯಾಂಡಲ್ವುಡ್ ನಟ ನಟಿಯ ಡ್ರಗ್ಸ್ ದಂದೆ : ಇತ್ತೀಚೆಗೆ ಮೃತಪಟ್ಟ ಯುವನಟನ ಶವಪರೀಕ್ಷೆ ಯಾಕೆ ಮಾಡ್ಲಿಲ್ಲ..? ಸ್ಯಾಂಡಲ್ವುಡ್ ರಹಸ್ಯ ಬಿಚ್ಚಿಟ್ಟ ಇಂದ್ರಜಿತ್! – ಸರ್ಕಾರ ಸೂಕ್ತ ರಕ್ಷಣೆ ಕೊಟ್ರೆ ಸತ್ಯ ಹೇಳ್ತೇನೆ ; ಸ್ಯಾಂಡಲ್ವುಡ್ ಕುರಿತು ಇಂದ್ರಜಿತ್ ಲಂಕೇಶ್ ಸ್ಫೋಟಕ ಹೇಳಿಕೆ! – ಕಹಳೆ ನ್ಯೂಸ್
ಬೆಂಗಳೂರು: ಸ್ಯಾಂಡಲ್ವುಡ್ಗೆ ಇರುವ ಮಾದಕ ಜಾಲದ ನಂಟಿನ ಬಗ್ಗೆ ಮತ್ತಷ್ಟು ಸ್ಪೋಟಕ ಮಾಹಿತಿಗಳನ್ನು ನಟ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರು ಬಿಚ್ಚಿಟ್ಟಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು ಕನ್ನಡ ಸಿನಿಮಾರಂಗ ಮಾದಕ ಜಾಲದಲ್ಲಿ ಒಳಗೊಂಡಿದೆ. ಹಲವು ನಟ-ನಟಿಯರು ಹಾಗೂ ನಿರ್ದೇಶಕರು ಇದರಲ್ಲಿ ಭಾಗಿಯಾಗಿದ್ದಾರೆ. ಸಮಾಜಕ್ಕೆ ಒಳಿತಾಗಲಿ ಎಂಬ ಕಾರಣಕ್ಕೆ ಈ ವಿಚಾರವನ್ನು ನಾನು ಬಹಿರಂಗಪಡಿಸುತ್ತಿದ್ದೇನೆ ಎಂದರು. ಇಡೀ ಚಿತ್ರರಂಗ ಇದರಲ್ಲಿ ಭಾಗಿಯಾಗಿದೆ ಎಂದು ನಾನು ಹೇಳಲ್ಲ. ಆದರೆ, ಕೆಲವರು ಭಾಗಿಯಾಗಿರೋದ್ರಿಂದ...







