ಕೋಟಿಗೊಬ್ಬ -3 , ಸಲಗ ಸಿನೆಮಾಕ್ಕೆ ಪೈರಸಿ ಹೊಡೆತ- ತನಿಖೆ ಮುಂದುವರಿಸಿದ ಸಿಐಡಿ ತಂಡ – ಕಹಳೆ ನ್ಯೂಸ್
ಕೊರೊನಾ ಹೊಡೆತಕ್ಕೆ ಸಂಪೂರ್ಣ ನೆಲ ಕಚ್ಚಿದ್ದ ಸ್ಯಾಂಡಲ್ ವುಡ್ನಲ್ಲಿ ಸ್ಟಾರ್ ನಟರ ಎರಡು ಸಿನಿಮಾಗಳು ಅದ್ದೂರಿಯಾಗಿ ತೆರೆಕಂಡಿದೆ. ದುನಿಯಾ ವಿಜಯ್ ನಿರ್ದೇಶನದ ಸಲಗ ಸಿನಿಮಾ ಅ. 14 ರಂದು ಬಿಡುಗಡೆಯಾಗಿತ್ತು. ಅ. 15 ರಂದು ನಟ ಸುದೀಪ್ ನಟನೆಯ ಬಹು ನಿರೀಕ್ಷಿತ ಚಿತ್ರ ಕೋಟಿಗೊಬ್ಬ-3 ಬಿಡುಗಡೆಯಾಗಿತ್ತು. ಆದರೆ ಬಿಡುಗಡೆಯಾದ ಕ್ಷಣದಲ್ಲಿಯೇ ಎರಡು ಸಿನಿಮಾಗಳಿಗೂ ಪೈರಸಿ ಹೊಡೆತ ಬಿದ್ದಿದೆ. ಕೋಟಿಗೊಬ್ಬ -3 ಸಿನಿಮಾ ಬಿಡುಗಡೆಗೂ ಮುನ್ನವೇ ಕನ್ನಡ ರಾಕರ್ಸ್ ಟೆಲಿಗ್ರಾಮ್ ಚಾನೆಲ್ನಲ್ಲಿ...







