Friday, March 6, 2026

ಸಿನಿಮಾ

ಅಂಕಣಮಂಗಳೂರುಸಿನಿಮಾಸುದ್ದಿ

ಕಾಂತಾರ ಚಾಪ್ಟರ್‌ 1 ; ಸಕ್ಸಸ್‌ ಬೆನ್ನಲ್ಲೇ ಕಟೀಲು ಅಮ್ಮನ ದರ್ಶನ ಪಡೆದ ವಿಜಯ್‌ ಕಿರಗಂದೂರು-ಕಹಳೆ ನ್ಯೂಸ್

ಮಂಗಳೂರು: ಕಾಂತಾರ ಚಾಪ್ಟರ್‌ 1  ಯಶಸ್ವಿ ಹಿನ್ನೆಲೆಯಲ್ಲಿ ನಿರ್ಮಾಪಕ ವಿಜಯ್‌ ಕಿರಗಂದೂರು , ಕರಾವಳಿ ದೇವಿಯ ಮೊರೆ ಹೋಗಿದ್ದಾರೆ. ಕಟೀಲು ಕ್ಷೇತ್ರಕ್ಕೆ ಭೇಟಿ ನೀಡಿದ ‘ಕಾಂತಾರ’ ನಿರ್ಮಾಪಕ ವಿಜಯ್‌ ಕಿರಗಂದೂರು ಅವರು ಶ್ರೀ ದುರ್ಗಾಪರಮೇಶ್ವರಿ ದೇವಿ ದರ್ಶನ ಪಡೆದಿದ್ದಾರೆ. ಕಟೀಲಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನಕ್ಕೆ ಸ್ನೇಹಿತರೊಂದಿಗೆ ವಿಜಯ್ ಕಿರಗಂದೂರು ಭೇಟಿ ನೀಡಿದರು. ಕ್ಷೇತ್ರದಲ್ಲೇ ಅನ್ನ ಪ್ರಸಾದ ಸ್ವೀಕರಿಸಿದರು. ಇತ್ತ ಕಾಂತಾರ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಅವರು ಮುಂಬೈನ...
ಬೆಂಗಳೂರುರಾಜ್ಯಸಿನಿಮಾಸುದ್ದಿ

ಕನ್ನಡದ ಖ್ಯಾತ ನಟ ಉಮೇಶ್‌ ಆಸ್ಪತ್ರೆಗೆ ದಾಖಲು, ಸ್ಥಿತಿ ಗಂಭೀರ..!- ಕಹಳೆ ನ್ಯೂಸ್

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟರಾದ ಎಂ.ಎಸ್‌.ಉಮೇಶ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸುಮಾರು 80 ವರ್ಷ ವಯಸ್ಸಿನವರಾದ ಉಮೇಶ್‌ ಕನ್ನಡದ ಬಹುತೇಕ ನಟರೊಂದಿಗೆ 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ತೆರೆ ಹಂಚಿಕೊಂಡಿದ್ದಾರೆ. ತಮ್ಮ ಹಾಸ್ಯಪಾತ್ರದ ಮೂಲಕ ಅವರು ರಾಜ್ಯದಾದ್ಯಂತ ಜನಪ್ರಿಯತೆ ಪಡೆದಿದ್ದರು. ಉಮೇಶ್‌ ಅವರು ಇತ್ತೀಚೆಗೆ ತಮ್ಮ ಮನೆಯಲ್ಲಿ ಪ್ರಜ್ಞೆ ತಪ್ಪಿ ಬಿದ್ದಿದ್ದರು ಎನ್ನಲಾಗಿದೆ.ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಮುಂದುವರಿದಿದೆ...
ಅಂಕಣಸಿನಿಮಾಸುದ್ದಿ

ಬಾಕ್ಸಾಫೀಸ್‌ನಲ್ಲಿ ಕಾಂತಾರ ಚಾಪ್ಟರ್‌ 1 ಮಿಂಚಿನ ಓಟ ; ಸಿದ್ಧಿವಿನಾಯಕನ ದರ್ಶನ ಪಡೆದ ರಿಷಬ್‌-ಕಹಳೆ ನ್ಯೂಸ್

ಕಾಂತಾರ ಅಧ್ಯಾಯ 1 ರ  ಯಶಸ್ಸಿನಲ್ಲಿ ರಿಷಬ್ ಶೆಟ್ಟಿ ಮಿಂಚುತ್ತಿದ್ದಾರೆ. ಈ ಚಿತ್ರವು ದೇಶ-ವಿದೇಶಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳನ್ನು ಮುರಿಯುತ್ತಲೇ ಇದೆ. ಈಗಾಗಲೇ ಸಿನಿಮಾ 500 ಕೋಟಿ ರೂ. ಕ್ಲಬ್‌ ಸೇರಿದೆ. ಈ ಬೆನ್ನಲ್ಲೇ ನಟ ರಿಷಬ್‌ ಮತ್ತು ನಿರ್ಮಾಪಕರು, ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ರಿಷಬ್‌ ಶೆಟ್ಟಿ ಬಿಳಿ   ಶರ್ಟ್ ಮತ್ತು ಬಿಳಿ ಮುಂಡು ಧರಿಸಿ ದೇವಾಲಯದಲ್ಲಿ ಕಾಣಿಸಿಕೊಂಡರು. ಅನೇಕ ಅಭಿಮಾನಿಗಳು ಅವರತ್ತ ಕೈ ಬೀಸಿದರು....
ಅಂಕಣಸಿನಿಮಾಸುದ್ದಿ

ಕಾಂತಾರ ಬ್ಲಾಕ್‌ಬಸ್ಟರ್ ಹಿಟ್ ; 1 ವಾರಕ್ಕೆ 509 ಕೋಟಿ ಕಲೆಕ್ಷನ್-ಕಹಳೆ ನ್ಯೂಸ್

ನಿರೀಕ್ಷೆಯಂತೆ ಕಾಂತಾರ ಅಧ್ಯಾಯ 1  ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದೆ. ಕಲೆಕ್ಷನ್ ವಿಚಾರಕ್ಕೆ ಇದುವರೆಗೂ ಮೌನವಾಗಿದ್ದ ಕಾಂತಾರ ನಿರ್ಮಾಣ ಸಂಸ್ಥೆಯಾಗಿರುವ ಹೊಂಬಾಳೆ ಫಿಲಂಸ್  ಈಗ ಚಿತ್ರದ ಗಳಿಕೆ ಕುರಿತು ಅಧಿಕೃತ ಘೋಷಣೆ ಮಾಡಿದೆ. ಮೊದಲ ವಾರಕ್ಕೆ ಕಾಂತಾರ ಚಿತ್ರ ವರ್ಲ್ಡ್ವೈಡ್ 509.25 ಕೋಟಿ ಕಲೆಕ್ಷನ್ ಮಾಡಿದೆ. `ಕಾಂತಾರ’ ಚಿತ್ರ ತೆರೆಕಂಡ ಬಳಿಕ ಬರುತ್ತಿದ್ದ ಅದ್ಭುತ ರೆಸ್ಪಾನ್ಸ್ ಗಮನಿಸಿದಾಗ ಮೊದಲ ವಾರದೊಳಗೆ ಕಾಂತಾರ ಚಿತ್ರ 500 ಕೋಟಿ ಗಡಿ ದಾಟುವ ಸುಳಿವು...
ಅಂಕಣಸಿನಿಮಾಸುದ್ದಿ

ಐಷಾರಾಮಿ ವಾಹನ ಕಳ್ಳಸಾಗಣೆ ಕೇಸ್; ನಟ ಮಮ್ಮುಟ್ಟಿ, ದುಲ್ಕರ್ ಸಲ್ಮಾನ್ ಮನೆ ಮೇಲೆ ಇಡಿ ದಾಳಿ-ಕಹಳೆ ನ್ಯೂಸ್

ತಿರುವನಂತಪುರಂ: ಭೂತಾನ್ ವಾಹನಗಳ ಅಕ್ರಮ ಕಳ್ಳಸಾಗಣೆ ಪ್ರಕರಣದಡಿ ಜಾರಿ ನಿರ್ದೇಶನಾಲಯ  ಅಧಿಕಾರಿಗಳು ಮಲಯಾಳಂ ಸೂಪರ್‌ಸ್ಟಾರ್ ಮಮ್ಮುಟಿ , ದುಲ್ಕರ್ ಸಲ್ಮಾನ್ , ಪೃಥ್ವಿರಾಜ್ ಹಾಗೂ ಅಮಿತ್ ಚಕ್ಕಲಕಲ್ ಮನೆ ಮೇಲೆ ದಾಳಿ ಮಾಡಿದ್ದಾರೆ.   ಚೆನ್ನೈನಲ್ಲಿರುವ ಮಮ್ಮುಟ್ಟಿ ಅವರ ಚಲನಚಿತ್ರ ನಿರ್ಮಾಣ ಕಂಪನಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ, ಶೋಧ ಕಾರ್ಯ ನಡೆಸುತ್ತಿದ್ದಾರೆ. ಐಷಾರಾಮಿ ವಾಹನಗಳ ಕಳ್ಳಸಾಗಣೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪದಡಿ ಎರ್ನಾಕುಲಂ, ತ್ರಿಶೂರ್, ಕೋಝಿಕ್ಕೋಡ್,...
ಅಂಕಣಸಿನಿಮಾಸುದ್ದಿ

ಕನ್ನಡ ಸಿನಿಮಾ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದೀರಿ ; ರಿಷಭ್‌, ಹೊಂಬಾಳೆಗೆ ಪ್ರಕಾಶ್‌ ರಾಜ್‌ ಮೆಚ್ಚುಗೆ-ಕಹಳೆ ನ್ಯೂಸ್

ಕನ್ನಡ ಸಿನಿಮಾ ಸಾಧ್ಯತೆಯನ್ನು ಹಿರಿಮೆಗೊಳಿಸಿದ್ದಕ್ಕೆ ಕಾಂತಾರ ಸಿನಿಮಾದ ನಟ, ನಿರ್ದೇಶಕ ರಿಷಬ್‌ ಶೆಟ್ಟಿ ಮತ್ತು ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ಅನ್ನು ನಟ ಪ್ರಕಾಶ್‌ ರಾಜ್‌  ಅಭಿನಂದಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ ಅವರು, ರಿಷಬ್‌ ಶೆಟ್ಟಿ ನಿಮ್ಮ ಅಭೂತಪೂರ್ವ ಯಶಸ್ಸಿಗೆ ಅಭಿನಂದನೆಗಳು ನಮ್ಮ ಮಣ್ಣಿನ ಪ್ರತಿಭೆಗಳ ವೈಶಿಷ್ಟ್ಯವನ್ನು, ಕನ್ನಡ ಸಿನೆಮಾದ ಸಾಧ್ಯತೆಯನ್ನು ಹಿರಿಮೆಗೊಳಿಸಿದ ನಿಮ್ಮ ಹಾಗೂ ನಿಮ್ಮ ತಂಡಕ್ಕೆ ಓಳಿತಾಗಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ...
ಅಂಕಣಸಿನಿಮಾಸುದ್ದಿ

ಮದುವೆ ಬಗ್ಗೆ ; ಗುಡ್ ನ್ಯೂಸ್ ನೀಡಿದ ರಚಿತಾ ರಾಮ್-ಕಹಳೆ ನ್ಯೂಸ್

ಡಿಂಪಲ್ ಕ್ವೀನ್ ರಚಿತಾ ರಾಮ್ ಹುಟ್ಟುಹಬ್ಬದ ಸುಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನವರಾತ್ರಿ ವೇಳೆ ಮೂಗುಬೊಟ್ಟು ಚುಚ್ಚಿಸಿಕೊಂಡಿದ್ದ ರಚಿತಾ ತೆರೆಮರೆಯಲ್ಲಿ ಮದುವೆಗೆ ಸಿದ್ಧರಾಗ್ತಿದ್ದಾರಾ ಅನ್ನೋ ಅನುಮಾನಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಶೀಘ್ರದಲ್ಲೇ ಮದುವೆಯಾಗುವ  ಬಗ್ಗೆ ನಟಿ ರಚಿತಾ ರಾಮ್ ಮಾತ್ನಾಡಿದ್ದಾರೆ. ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಯಾವ ಡ್ರೀಮ್ ಇಲ್ಲ. ಮನೆಯಲ್ಲಿ ಹುಡುಗನನ್ನ ಹುಡುಕುವ ಕಾರ್ಯಗಳು ನಡೆಯುತ್ತಿವೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. 33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಚಿತಾ...
ಬೆಂಗಳೂರುರಾಜ್ಯಸಿನಿಮಾಸುದ್ದಿಹೆಚ್ಚಿನ ಸುದ್ದಿ

ಮೊದಲ ದಿನವೇ ಗಳಿಕೆಯಲ್ಲಿ ‘ಕಾಂತಾರ 1’ ಹೊಸ ದಾಖಲೆ: 55 ಕೋಟಿ ರೂ. ಕಲೆಕ್ಷನ್ – ಕಹಳೆ ನ್ಯೂಸ್

ಬೆಂಗಳೂರು: ರಿಷಬ್ ಶೆಟ್ಟಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ ಚಾಪ್ಟರ್ 1' ಚಿತ್ರ ವಿಶ್ವದಾದ್ಯಂತ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಮೊದಲ ದಿನವೇ ಭಾರತದಲ್ಲಿ 45 ಕೋಟಿ ರೂ., ವಿದೇಶಗಳಲ್ಲಿ 10 ಕೋಟಿ ರೂ. ಗಳಿಸಿದ್ದು, ಇಂದು 100 ಕೋಟಿ ಕ್ಲಬ್ ಗೆ ಸೇರುವ ಸಾಧ್ಯತೆ ಇದೆ. ಪ್ರೀಮಿಯರ್ ಶೋಗಳು ಮತ್ತು ಮೊದಲ ದಿನದ ಗಳಿಕೆಯಿಂದ 55 ಕೋಟಿ ರೂ. ಗಳಿಸಿರುವುದು ಹೊಸ ದಾಖಲೆಯಾಗಿದೆ. ಭಾರತದಲ್ಲಿ ಒಟ್ಟು 6500 ಸ್ಕ್ರೀನ್ ಗಳಲ್ಲಿ ಸುಮಾರು...
1 2 3 4 5 6 92
Page 4 of 92