ಅಫ್ಗಾನಿಸ್ತಾನದಲ್ಲಿ ಭೂಕಂಪ: ನೆರವಿಗೆ ಭಾರತ ಸಿದ್ಧ ಎಂದ ಪ್ರಧಾನಿ ಮೋದಿ – ಕಹಳೆ ನ್ಯೂಸ್
ನವದೆಹಲಿ: ಅಫ್ಗಾನಿಸ್ತಾನದಲ್ಲಿ ಸಂಭವಿಸಿದ ಭೀಕರ ಭೂಕಂಪದಿಂದ 600ಕ್ಕೂ ಹೆಚ್ಚು ಜನರು ಜೀವ ಕಳೆದುಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಜತೆಗೆ ಸಾಧ್ಯವಿರುವ ಎಲ್ಲಾ ಮಾನವೀಯ ನೆರವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಅಫ್ಗಾನಿಸ್ತಾನದ ಪೂರ್ವಭಾಗದಲ್ಲಿ ಸಂಭವಿಸಿದ 6.0ರಷ್ಟು ತೀವ್ರತೆಯ ಭೂಕಂಪದಲ್ಲಿ 610 ಜನ ಮೃತಪಟ್ಟಿದ್ದು, 1,300ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಮೋದಿ, 'ಭೂಕಂಪದಿಂದ ನೂರಾರು ಜನ ಜೀವ ಕಳೆದುಕೊಂಡಿರುವ ಸುದ್ದಿ...







