Wednesday, March 18, 2026

ರಾಷ್ಟ್ರೀಯ

ಅಂಕಣದೆಹಲಿರಾಷ್ಟ್ರೀಯಸುದ್ದಿ

ಇನ್ಮುಂದೆ ಜಿಎಸ್‌ಟಿಯಲ್ಲಿ 2 ಸ್ಲ್ಯಾಬ್‌ ಸೆ.22 ರಿಂದ ಜಾರಿ ; ಯಾವ ವಸ್ತುಗಳ ಬೆಲೆ ಇಳಿಕೆ? ಯಾವುದು ಏರಿಕೆ? ಇಲ್ಲಿದೆ ಪಟ್ಟಿ-ಕಹಳೆ ನ್ಯೂಸ್

–  ಇನ್ಶೂರೆನ್ಸ್ ಜಿಎಸ್‌ಟಿ ಮುಕ್ತ, ಜೀವರಕ್ಷಕ ಔಷಧಿಗಳ ಬೆಲೆ ಇಳಿಕೆ – ದಿನಬಳಕೆ, ಎಲೆಕ್ಟ್ರಿಕ್‌ ವಸ್ತುಗಳು ಅಗ್ಗ ನವದೆಹಲಿ: ಜಿಎಸ್‌ಟಿ ಕೌನ್ಸಿಲ್‌ ಸಿಹಿಸುದ್ದಿ ನೀಡಿದ್ದು 8 ವರ್ಷದ ಬಳಿಕ ಜಿಎಸ್‌ಟಿ ಸ್ಲ್ಯಾಬ್‌ ಪರಿಷ್ಕರಣೆಗೆ ಒಪ್ಪಿಗೆ ನೀಡಿದೆ. ಇನ್ನು ಮುಂದೆ ದೇಶದಲ್ಲಿ ಎರಡು ಜಿಎಸ್‌ಟಿ ಸ್ಲ್ಯಾಬ್‌ ಇರಲಿದ್ದು ಸೆ.22 ರಿಂದ ನೂತನ ದರಗಳು ಅನ್ವಯವಾಗಲಿದೆ. ನಾಲ್ಕು ಸ್ಲ್ಯಾಬ್ ಬದಲಿಗೆ 5%, 18% ಸ್ಲ್ಯಾಬ್ ಗೆ ಸರ್ವಾನುಮತದಿಂದ ಒಪ್ಪಿಗೆ ಸಿಕ್ಕಿದೆ. ಎರಡರ ಜೊತೆಗೆ...
ಅಂಕಣಬೆಂಗಳೂರುಸುದ್ದಿ

ಭಾರೀ ಮಳೆಗೆ ರಾಜಭವನದ ಬಳಿ ಧರೆಗುರುಳಿದ ಬೃಹತ್ ಮರ-ಕಹಳೆ ನ್ಯೂಸ್

ಬೆಂಗಳೂರು: ನಗರದಲ್ಲಿ ಸುರಿದ ಭಾರೀ ಮಳೆಗೆ  ರಾಜಭವನದ ಬಳಿ ಬೃಹತ್ ಮರವೊಂದು ಧರೆಗುರುಳಿದೆ. ಬುಧವಾರ ರಾತ್ರಿ ಸುರಿದ ಭಾರೀ ಮಳೆಗೆ ಬುಡ ಸಮೇತ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಪೊಲೀಸ್ ತಿಮ್ಮಯ್ಯ ಸರ್ಕಲ್ ಕಡೆಯಿಂದ ಚಾಲುಕ್ಯ ರಸ್ತೆ ಬಂದ್ ಆಗಿದೆ. ಬಿಬಿಎಂಪಿ ಸಿಬ್ಬಂದಿ ಮರ ತೆರವು ಕಾರ್ಯ ಮಾಡುತ್ತಿದ್ದಾರೆ. ಇಂದು (ಸೆ.4) ಸಹ ನಗರದಲ್ಲಿ ಮುಂಜಾನೆಯೇ ಮೋಡ ಕವಿದ ವಾತಾವರಣವಿದ್ದು, ಮಳೆ ಹೆಚ್ಚಾಗುವ ಸಾಧ್ಯತೆ ಇದೆ. ಅಲ್ಲದೇ ಮುಂದಿನ...
ಅಂಕಣಕ್ರೈಮ್ಬೆಂಗಳೂರುಸುದ್ದಿ

ʻಕೈʼ ಶಾಸಕ ವೀರೇಂದ್ರ ಪಪ್ಪಿ ಬಂಧನ ಪ್ರಕರಣ ; ಜೈಲಾ, ಬೇಲಾ; ಇಂದು ನಿರ್ಧಾರ?-ಕಹಳೆ ನ್ಯೂಸ್

ಬೆಂಗಳೂರು: ಅಕ್ರಮ ಆನ್‌ಲೈನ್ ಬೆಟ್ಟಿಂಗ್‌ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಕಾಂಗ್ರೆಸ್‌ ಶಾಸಕ ಕೆಸಿ ವಿರೇಂದ್ರ ಪಪ್ಪಿಗೆ  ಜೈಲಾ, ಬೇಲಾ ಅನ್ನೋದು ಇಂದು ನಿರ್ಧಾರವಾಗಲಿದೆ. ಮೊದಲ ಬಾರಿಗೆ 5 ದಿನ 2ನೇ ಬಾರಿಗೆ 6 ದಿನ ಇಡಿ ಕಸ್ಟಡಿಗೆ ಪಡೆದಿತ್ತು. ಇಂದು ಕಸ್ಟಡಿ ಅವಧಿ ಅಂತ್ಯಗೊಂಡ ಹಿನ್ನೆಲೆ ಮತ್ತೆ ಕೋರ್ಟ್‌ಗೆ ಹಾಜರುಪಡಿಸಲಿದೆ. ಒಂದು ವೇಳೆ ಇಡಿ ಕಸ್ಟಡಿಗೆ ಪಡೆಯದಿದ್ದರೆ ಜೈಲಿಗೆ ತೆರಳುವ ಸಾಧ್ಯತೆ ಇದೆ. ಈಗಾಗಲೇ ಪಪ್ಪಿ ಬ್ಯಾಂಕ್‌...
ಕ್ರೈಮ್ಬೆಂಗಳೂರುಸುದ್ದಿ

ಪೋಕ್ಸೊ ಕೇಸಲ್ಲಿ ಚಾರ್ಜ್‌ಶೀಟ್‌ ಸಲ್ಲಿಸಲು ಲಂಚಕ್ಕೆ ಬೇಡಿಕೆ; ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್-ಕಹಳೆ ನ್ಯೂಸ್

ಬೆಂಗಳೂರು: ಲಂಚ ಸ್ವೀಕರಿಸುವ ವೇಳೆ ದೇವನಹಳ್ಳಿ ಪೊಲೀಸ್ ಸಿಬ್ಬಂದಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಮಹಿಳಾ ಪಿಎಸ್‌ಐ ಜಗದೇವಿ ಪರಾರಿಯಾಗಿದ್ದಾರೆ. 70 ಸಾವಿರ ಲಂಚಕ್ಕೆ ಬೇಡಿಕೆಯಿಟ್ಟು, 50 ಸಾವಿರ ಲಂಚ ಸ್ವೀಕರಿಸುತ್ತಿದ್ದ ಸಮಯದಲ್ಲಿ ದೇವನಹಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ ಅಮರೇಶ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪೋಕ್ಸೊ ಪ್ರಕರಣದಲ್ಲಿ ಚಾರ್ಜ್‌ಶೀಟ್ ಸಲ್ಲಿಸಲು ಪೊಲೀಸರು ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಮಹಿಳೆಯೊಬ್ಬರು ನೀಡಿದ್ದ ದೂರಿನನ್ವಯ ಲೋಕಾಯುಕ್ತ ಅಧಿಕಾರಿಗಳಿಂದ ಕಾರ್ಯಾಚರಣೆ ನಡೆಸಲಾಗಿತ್ತು. ದೇವನಹಳ್ಳಿ ಠಾಣೆ ಪಿಎಸ್‌ಐ ಜಗದೇವಿ, ಕಾನ್ಸ್‌ಟೇಬಲ್‌ಗಳಾದ ಮಂಜುನಾಥ್,...
ಜಿಲ್ಲೆಬೆಂಗಳೂರುರಾಜ್ಯಹೆಚ್ಚಿನ ಸುದ್ದಿ

ರಾಜ್ಯಾದ್ಯಂತ ಇಂದು ಮತ್ತೆ ಭಾರೀ ಮಳೆ ಸಾಧ್ಯತೆ : ಯೆಲ್ಲೋ ಅಲರ್ಟ್ ಘೋಷಣೆ.-ಕಹಳೆ ನ್ಯೂಸ್

ಬೆಂಗಳೂರು : ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಬಹುತೇಕ ಜಿಲ್ಲೆಗಳಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ನಾಳೆಯೂ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಿಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೆ ಭಾರೀ ಮಳೆಯಾಗುತ್ತಿದ್ದು, ಹಲವಡೆ ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಇಂದು ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು ಮಲ್ಲೇಶ್ವರಂ, ಮೆಜೆಸ್ಟಿಕ್,...
ಜಮ್ಮು ಮತ್ತು ಕಾಶ್ಮೀರದೆಹಲಿರಾಜ್ಯಸುದ್ದಿಹೆಚ್ಚಿನ ಸುದ್ದಿ

ಜಮ್ಮು-ಕಾಶ್ಮೀರದಲ್ಲಿ ಭಾರಿ ಮಳೆ; ಸೆಪ್ಟೆಂಬರ್ 30ರವರೆಗೆ 68 ರೈಲುಗಳ ಸೇವೆ ರದ್ದು -ಕಹಳೆ ನ್ಯೂಸ್

ಜಮ್ಮು: ಭಾರಿ ಮಳೆ ಹಿನ್ನೆಲೆ ಜಮ್ಮು ಮತ್ತು ಕತ್ರಾ ನಿಲ್ದಾಣಗಳಿಂದ ಹೊರಡುವ ಮತ್ತು ಅಲ್ಲಿಗೆ ಬರುವ 68 ರೈಲುಗಳನ್ನು ಸೆಪ್ಟೆಂಬರ್ 30ರವರೆಗೆ ರದ್ದುಪಡಿಸಲಾಗಿದೆ. 24 ರೈಲುಗಳ ಸೇವೆ ಪುನರಾರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇತ್ತೀಚೆಗೆ ಸುರಿದ ಭಾರಿ ಮಳೆ ಮತ್ತು ಹಠಾತ್ ಪ್ರವಾಹದಿಂದಾಗಿ ಪಠಾಣ್‌ಕೋಟ್-ಜಮ್ಮು ವಿಭಾಗದ ಹಲವು ಸ್ಥಳಗಳಲ್ಲಿ ರೈಲು ಹಳಿಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಕಳೆದ 8 ದಿನಗಳಿಂದ ಜಮ್ಮು ವಿಭಾಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಆಗಸ್ಟ್...
ಜಿಲ್ಲೆಬೆಂಗಳೂರುರಾಜ್ಯಸಂತಾಪಸುದ್ದಿಹೆಚ್ಚಿನ ಸುದ್ದಿ

ಬೆಂಗಳೂರಿನಲ್ಲಿ ಘೋರ ದುರಂತ , ಮಣ್ಣು ಕುಸಿದು ಇಬ್ಬರು ಕಾರ್ಮಿಕರು ದುರ್ಮರಣ.-ಕಹಳೆ ನ್ಯೂಸ್

ಬೆಂಗಳೂರು : ಬೆಂಗಳೂರಿನಲ್ಲಿ ಘೋರ ದುರಂತ ಸಂಭವಿಸಿದ್ದು., ಮಣ್ಣು ಕುಸಿದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಜೆ ಶಿವಾ, ಮಧು ಸೂಧನ್ ರೆಡ್ಡಿ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಯಲಹಂಕದಲ್ಲಿ ಎಂಬೆಸ್ಸಿ ಸಂಸ್ಥೆಯ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಕಾರ್ಮಿಕರು ಅಡಿಪಾಯಕ್ಕೆ ಗುಂಡಿ ತೆಗೆಯುತ್ತಿದ್ದರು. ಈ ವೇಳೆ ಧಾರಾಕಾರ ಮಳೆಯಾಗಿದ್ದರಿಂದ ಗುಂಡಿಯಲ್ಲಿ ನೀರು ತುಂಬಿಕೊಂಡು ಮಣ್ಣು ಸಡಿಲವಾಗಿ ಕುಸಿದು ಬಿದ್ದಿದೆ. ಕೆಲಸ...
ರಾಜ್ಯರಾಷ್ಟ್ರೀಯಸುದ್ದಿಹೆಚ್ಚಿನ ಸುದ್ದಿ

272 ಪ್ರಯಾಣಿಕರೊಂದಿಗೆ ಕೊಲ್ಕತ್ತಾಗೆ ತೆರಳುತ್ತಿದ್ದ ಇಂಡಿಗೋ ವಿಮಾನಕ್ಕೆ ಹಕ್ಕಿ ಡಿಕ್ಕಿ: ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ -ಕಹಳೆ ನ್ಯೂಸ್

272 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನವು ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ಹಕ್ಕಿ ಡಿಕ್ಕಿ ಹೊಡೆದ ನಂತರ ನಾಗ್ಪುರ ವಿಮಾನ ನಿಲ್ದಾಣಕ್ಕೆ ಮರಳಿತು. ವಿಮಾನವು ಕೋಲ್ಕತ್ತಾಗೆ ತೆರಳಬೇಕಿತ್ತು, ಆದರೆ ಸಿಬ್ಬಂದಿ ಯು-ಟರ್ನ್ ಮಿಡ್‌ಏರ್ ಮಾಡಲು ನಿರ್ಧರಿಸಿದ್ದರಿಂದ ನಾಗ್ಪುರದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ವಿವರಗಳ ಪ್ರಕಾರ, ಹಕ್ಕಿ ದಾಳಿಯಿಂದಾಗಿ ವಿಮಾನದ ಮುಂಭಾಗದ ಭಾಗಕ್ಕೆ ಹಾನಿಯಾಗಿದೆ. ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ವರದಿಯಾಗಿದೆ. ನಾಗ್ಪುರ ವಿಮಾನ ನಿಲ್ದಾಣದ ರನ್ವೇಯಿಂದ ವಿಮಾನ ನಿಲ್ದಾಣದ...
1 80 81 82 83 84 320
Page 82 of 320