ಮೋದಿ ವೈಯಕ್ತಿಕ ವೆಬ್‍ಸೈಟ್ ಹ್ಯಾಕ್, ತೀವ್ರಗೊಂಡ ತನಿಖೆ – ಕಹಳೆ ನ್ಯೂಸ್
ನವದೆಹಲಿ, ಸೆ.3-ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವೈಯಕ್ತಿಕ ವೆಬ್‍ಸೈಟ್‍ಗೆ ಲಿಂಕ್ ಆಗಿರುವ ಟ್ವಿಟರ್ ಖಾತೆಯನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿದ್ದಾರೆ. ಈ ಕುಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರಧಾನಮಂತ್ರಿ ಅವರ ಕಾರ್ಯಾಲಯ ಮತ್ತು ಕೇಂದ್ರ ಗೃಹ ಸಚಿವಾಲಯ ತೀವ್ರ ತನಿಖೆ ನಡೆಸುತ್ತಿದೆ. ಚೀನಾದ ಪಬ್‍ಜಿ ವಿಡಿಯೋಗೇಮ್ ಸೇರಿದಂತೆ 120 ಮೊಬೈಲ್ ಆಪ್‍ಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿ ಚೀನಾಗೆ ದೊಡ್ಡ ಶಾಕ್ ನೀಡಿದ ಬೆನ್ನಲ್ಲೇ ಪ್ರಧಾನಿಯವರ ವೆಬ್‍ಸೈಟ್ ಹ್ಯಾಕ್ ಆಗಿರುವುದು ಆತಂಕದ ಸಂಗತಿಯಾಗಿದೆ. ಪ್ರಧಾನಿ...







